Recent Posts

Sunday, January 19, 2025
ಸುದ್ದಿ

ಯಹೂದಿಗಳು ಸಂಕಲ್ಪ ಮಾಡಿ ಇಸ್ರೇಲ್ ನಿರ್ಮಿಸಿದರು; ಹಾಗೆಯೇ ಹಿಂದೂಗಳೂ ಸಂಕಲ್ಪ ಮಾಡಿದರೆ ರಾಮರಾಜ್ಯ ನಿರ್ಮಾಣ ಸಾಧ್ಯ ! – ಶ್ರೀ.ವಿಜಯ ಶರ್ಮಾ, ಉಪಮುಖ್ಯಮಂತ್ರಿಗಳು, ಛತ್ತೀಸಗಢ 200 ಕ್ಕೂ ಅಧಿಕ ಹಿಂದುತ್ವನಿಷ್ಠರಿಂದ “ಹಿಂದೂ ರಾಷ್ಟ್ರ ಸಮನ್ವಯ ಸಮಿತಿ” ಸ್ಥಾಪಿಸುವ ಸಂಕಲ್ಪ !

ರಾಯಪುರ (ಛತ್ತೀಸಗಢ) – ಇಲ್ಲಿನ ಪೂ. ಶದಾಣಿ ದರಬಾರನಲ್ಲಿ ಆಯೋಜಿಸಿದ್ದ ‘ಛತ್ತೀಸಗಢ ರಾಜ್ಯ ಸ್ಥರೀಯ ಹಿಂದೂ ರಾಷ್ಟ್ರ ಅಧಿವೇಶನ’ವನ್ನು ಉದ್ದೇಶಿಸಿ ಛತ್ತೀಸಗಢ ರಾಜ್ಯದ ಉಪಮುಖ್ಯಮಂತ್ರಿ ಶ್ರೀ. ವಿಜಯ ಶರ್ಮಾ ಮಾತನಾಡಿ, ಹೇಗೆ ಇಡೀ ವಿಶ್ವದಲ್ಲಿನ ಯಹೂದಿಗಳು ಸಂಕಲ್ಪ ಮಾಡಿ ಇಸ್ರೇಲ್ ನಿರ್ಮಿಸಿದರೋ, ಹಾಗೆಯೇ ಹಿಂದೂಗಳು ಸಹ ನಮ್ಮ ಸಂಕಲ್ಪ ಮರೆಯಬಾರದು. ಈಗ ಶ್ರೀರಾಮ ಮಂದಿರ ಪೂರ್ಣವಾಗಿದೆ. ಹಾಗೆಯೇ ಮುಂದಿನ ಸಂಕಲ್ಪವು ಖಂಡಿತ ಪೂರ್ಣವಾಗುವುದು. ಇದಕ್ಕಾಗಿ ನಾವು ಸತತವಾಗಿ ಸಂಘರ್ಷ ಮಾಡುತ್ತಿರಬೇಕು. ಈ ಭೂಮಿಯು ಛತ್ರಪತಿ ಶಿವಾಜಿ ಮಹಾರಾಜರ ಹಿಂದವೀ ಸ್ವರಾಜ್ಯವನ್ನು ನೋಡಿದೆ, ಮುಂಬರುವ ಕಾಲದಲ್ಲಿ ರಾಮರಾಜ್ಯವೂ ಸಾಕಾರವಾಗುವುದು ಎಂದರು.


ಪೂಜ್ಯ ಶದಾಣಿ ದರಬಾರ ತೀರ್ಥ, ಶ್ರೀ ನೀಲಕಂಠ ಸೇವಾ ಸಂಸ್ಥಾನ, ಮಿಶನ್ ಸನಾತನ್, ಹಿಂದೂ ಜನಜಾಗೃತಿ ಸಮಿತಿಯ ಸಂಯುಕ್ತ ‌ಆಶ್ರಯದಲ್ಲಿ ಈ ಅಧಿವೇಶನವನ್ನು ಆಯೋಜನೆ ಮಾಡಲಾಗಿತ್ತು. ಪೂಜ್ಯ ಯುಧಿಷ್ಠಿರಲಾಲ ಮಹಾರಾಜರು, ಪೂಜ್ಯ ರಾಮಬಾಲಕದಾಸ ಮಹಾತ್ಯಾಗಿ, ಪಂ. ನೀಲಕಂಠ ತ್ರಿಪಾಠಿ ಮಹಾರಾಜ, ಪೂಜ್ಯ ಅಶೋಕ ಪಾತ್ರೀಕರ ಮುಂತಾದ ಸಂತರ ಮೂಲಕ ದೀಪಪ್ರಜ್ವಲನೆ ಮಾಡಿ ಹಿಂದೂ ಅಧಿವೇಶನದ ಆರಂಭವಾಯಿತು.ಆರಂಭದಲ್ಲಿ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆಯವರ ಸಂದೇಶವನ್ನು ಓದಿ ಹೇಳಲಾಯಿತು. ಈ ಅಧಿವೇಶನದಲ್ಲಿ 695 ಚಲನಚಿತ್ರದ ನಿರ್ಮಾಪಕರಾದ ಶ್ರೀ. ಶ್ಯಾಮ ಚಾವಲಾ, ಭಾಜಪ ವರಿಷ್ಠ ನೇತಾರ ಸಚ್ಚಿದಾನಂದ ಉಪಾಸನಿ, CA ಅಸೋಸಿಯೇಶನ್ ಪೂರ್ವ ಅಧ್ಯಕ್ಷ ಶ್ರೀ. ಅಮಿತಾಬ್ ದುಬೆ, ಶಿವಸೇನೆಯ ರಾಯಪೂರನ ಶ್ರೀ. ಅಶೀಶ್ ಪರೆಡಾ ಮತ್ತು ರಾಜ್ಯದ 12 ಕ್ಕಿಂತಲೂ ಹೆಚ್ಚು ಜಿಲ್ಲೆಯಿಂದ ವಿವಿಧ ಹಿಂದೂ ಸಂಘಟನೆಯಿಂದ ಪ್ರತಿನಿಧಿಗಳು, ಕಾರ್ಯಕರ್ತರು, ಆಚಾರ್ಯರು, ಮಹಂತರು, ನ್ಯಾಯವಾದಿಗಳು,ಪ್ರಾಧ್ಯಾಪಕರು, ಮುಂತಾದ 250 ಕ್ಕೂ ಹೆಚ್ಚು ಹಿಂದುತ್ವನಿಷ್ಠರು ಸಹಭಾಗಿಯಾಗಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಹಿಂದೂ ರಾಷ್ಟ್ರ ಅಧಿವೇಶನದ ಬಗ್ಗೆ ಮಹಾರಾಷ್ಟ್ರ ಮತ್ತು ಛತ್ತೀಸಗಢ ರಾಜ್ಯದ ಸಂಘಟಕರು, ಶ್ರೀ. ಸುನೀಲ ಘನವಟ ಮಾತನಾಡುತ್ತಾ, ಮಿಶನರಿಗಳು,ನಕ್ಸಲರು, ಜಿಹಾದಿಗಳು, ಸೆಕ್ಯೂಲರ್ ವಾದಿಗಳು, ಖಾಲಿಸ್ತಾನಿಗಳು ಮುಂತಾದವರು ಜೊತೆಗೂಡಿ ಹಿಂದೂ ಧರ್ಮವನ್ನು ನಾಶ ಮಾಡಲು ಕಾರ್ಯನಿರತರಾಗಿದ್ದಾರೆ. ನಾವೂ ಹಿಂದೂ ಸಂಘಟನೆ, ಸಂತರು, ಕಾರ್ಯಕರ್ತರು, ವಕೀಲರು ಮುಂತಾದವರೊಂದಿಗೆ ಸೇರಿ ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಸಂಘಟಿತರಾಗಿ ಪ್ರಯತ್ನಿಸುವುದು ಅವಶ್ಯಕತೆಯಿದೆ. ವರ್ತಮಾನದಲ್ಲಿ ವಕ್ಫ್ ಆಕ್ಟ್ ಹಿಂದೂಗಳ ಭೂಮಿಯನ್ನು ಕಾನೂನು ಬಾಹಿರವಾಗಿ ಕಬಳಿಸುತ್ತಿದೆ. ಈ ತಪ್ಪು ಕಾನೂನನ್ನು ತೆಗೆಯಲು ಪ್ರತಿ ಹಳ್ಳಿಯಿಂದ ಪ್ರಯತ್ನವಾಗುವುದು ಅವಶ್ಯಕತೆ ಇದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಶದಾಣಿ ದರಬಾರನ ಪೂಜ್ಯ ಯುಧಿಷ್ಟಿರಲಾಲ ಮಹಾರಾಜರು ಮಾತನಾಡಿ, ನಾವೆಲ್ಲರೂ ಒಂದು ಮಹಾನ್ ಪ್ರಾಚೀನ ಸಭ್ಯತೆಯನ್ನು ಪಾಲಿಸುವವರಾಗಿದ್ದರೂ ಒಟ್ಟಾಗಲಿಲ್ಲ. ನಮ್ಮದೇ ರಾಷ್ಟ್ರದಲ್ಲಿದ್ದು ಹಿಂದೂ ಧರ್ಮದ ಧ್ವಜವನ್ನು ಹಾರಿಸಲು ಸಾಧ್ಯವಾಗುತ್ತಿಲ್ಲ. ಪ. ಪೂ. ಡಾ.ಆಠವಲೆಯವರ ಮತ್ತು ಸಂತರ ನೇತೃತ್ವದಲ್ಲಿ ನಡೆಯುತ್ತಿರುವ ಈ ಅಭಿಯಾನವು ಖಂಡಿತವಾಗಿ ಯಶಸ್ವಿಯಾಗುವುದು ಮತ್ತು ಭಾರತವು ಹಿಂದೂ ರಾಷ್ಟ್ರವಾಗುವುದು. ಹಿಂದೂ ಜನಜಾಗೃತಿ ಸಮಿತಿ, ಪೂ. ಶದಾಣಿ ದರಬಾರ ತೀರ್ಥ ನಾವೆಲ್ಲರೂ ಶಾಸ್ತ್ರ, ಸಂತರು, ದೈವೀ ಶಕ್ತಿಗಳಿಗೆ ಹೆಚ್ಚು ಮಹತ್ವ ಕೊಡುತ್ತೇವೆ. ಇದರಿಂದ ಸಿಗುವ ಶಕ್ತಿಯು ಶಾಸ್ತ್ರಕ್ಕಿಂತಲೂ ಹೆಚ್ಚು ಮಹತ್ವಪೂರ್ಣವಾಗಿದೆ ಎಂದರು.

ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸಂತರಾದ ಪೂಜ್ಯ ಅಶೋಕ ಪಾತ್ರೀಕರ ಇವರು ಮಾತನಾಡಿ, ಇಂದು ನಿರ್ಮಾಣವಾದ ರಾಮಮಂದಿರವು ಹಿಂದೂ ರಾಷ್ಟ್ರ ಸ್ಥಾಪನೆಯ ಅಡಿಪಾಯವಾಗಿದೆ. ಆದರೆ ಹಿಂದೂ ರಾಷ್ಟ್ರವನ್ನು ಯಾರೂ ನಮಗೆ ಬಳುವಳಿಯಾಗಿ ಕೊಡುವುದಿಲ್ಲ, ಅದಕ್ಕಾಗಿ ಬಲಿದಾನ ಮಾಡಬೇಕಾಗುತ್ತದೆ. ಧರ್ಮಾಚರಣೆ ಮತ್ತು ಸಾಧನೆ ಮಾಡಿ ನಮಗೆ ಆಧ್ಯಾತ್ಮಿಕ ಬಲ ನಿರ್ಮಾಣ ಮಾಡಬೇಕಾಗಿದೆ. ಅಂತಹ ಆಧ್ಯಾತ್ಮಿಕ ಬಲದಿಂದಲೇ ರಾಮರಾಜ್ಯದಂತಹ ಆದರ್ಶ ಹಿಂದೂ ರಾಷ್ಟ್ರವು ನಿರ್ಮಾಣವಾಗುವುದು ಎಂದರು.
ಈ ಅಧಿವೇಶನದಲ್ಲಿ ‘ವಕ್ಪ್ ಬೋರ್ಡ್ ನ ಲ್ಯಾಂಡ್ ಜಿಹಾದ್’ ಈ ಕುರಿತು ಶ್ರೀ. ಸುನೀಲ್ ಘನವಟ, ಮಂದಿರಗಳ ವ್ಯವಸ್ಥಾಪನೆ ಮತ್ತು ಮಂದಿರ ಸನಾತನ ಧರ್ಮಪ್ರಚಾರದ ಕೇಂದ್ರಗಳಾಗಿ ಹೇಗೆ ಮಾಡಬಹುದು ?’ ಈ ಕುರಿತು ಸಿಎ ಮದನಮೋಹನ ಉಪಾಧ್ಯಾಯ, ‘ರಾಜ್ಯಾಡಳಿತದ ಮೇಲೆ ಧರ್ಮಾಡಳಿತದ ಅವಶ್ಯಕತೆ’ ಯ ಬಗ್ಗೆ ಪೂ. ರಾಮಬಾಲಕದಾಸ ಮಹಾತ್ಯಾಗಿ ಮಹಾರಾಜ, ಹಿಂದೂ ಸಂಘಟನೆಯಲ್ಲಿ ಸಂತರ ಭೂಮಿಕೆ ಮತ್ತು ಸಂತರ ಕಾರ್ಯ’ ಈ ಕುರಿತು ಪಂಡಿತ್ ನೀಲಕಂಠ ತ್ರಿಪಾಠಿ ಮಹಾರಾಜ, ‘ಹಿಂದೂಗಳ ಬುದ್ಧಿಭ್ರಮಣ ಮಾಡುವ ನರೆಟಿವ್ ವಿರುದ್ಧ ಹೇಗೆ ಹೋರಾಡುವುದು’ ಈ ಕುರಿತು ಶ್ರೀ. ಸಂತೋಷ ತಿವಾರಿ, ಹಿಂದೂ ಸಂಘಟನೆಗಾಗಿ ಮೀಡಿಯಾ ಮ್ಯಾನೇಜ್ಮೆಂಟ್ ಆವಶ್ಯಕತೆ’ ಕುರಿತು ಶ್ರೀ. ಅಮಿತ್ ಚಿಮನಾನಿ ಮುಂತಾದ ವಕ್ತಾರರು ಉಪಸ್ಥಿತ ಹಿಂದುತ್ವನಿಷ್ಠರಿಗೆ ಮಾರ್ಗದರ್ಶನ ಮಾಡಿದರು.

‘ಹಿಂದೂ ಧರ್ಮದ ಮೇಲಾಗುತ್ತಿರುವ ಆಘಾತಗಳ ವಿರುದ್ಧ ಕೃತಿಶೀಲ ಪ್ರಯತ್ನ’ ಈ ವಿಷಯದ ಬಗ್ಗೆ ಆಯೋಜಿಸಿದ್ದ ಚರ್ಚಾಕೂಟದಲ್ಲಿ ರಣರಾಗಿಣಿಯ ಶ್ರೀಮತಿ ಜ್ಯೋತಿ ಶರ್ಮ, ಶ್ರೀಮತಿ ಶರ್ಮಾ, ಆಚಾರ್ಯ ಶಶಿಭೂಷಣ ಮೋಹಂತಿ, ಧರ್ಮಸೇನಾ ಅಧ್ಯಕ್ಷ ಶ್ರೀ. ವಿಷ್ಣು ಪಟೇಲ, ಗೋರಕ್ಷಕ ಶ್ರೀ. ಅಂಕಿತ ದ್ವಿವೇದಿ ಮುಂತಾದ ಧರ್ಮವೀರರು ತಮ್ಮ ಅನುಭವಕಥನದಿಂದ ಮತಾಂತರ, ಲವ್ ಜಿಹಾದ್, ಗೋಹತ್ಯೆ ಮುಂತಾದ ಸಮಸ್ಯೆಗಳ ಬಗ್ಗೆ ಹಿಂದುತ್ವನಿಷ್ಠರಿಗೆ ಮಾರ್ಗದರ್ಶನ ಮಾಡಿದರು.

ಎಲ್ಲರೂ ಒಟ್ಟಾಗಿ ಪ್ರಯತ್ನಿಸಲು ಮುಂದೆ “ಹಿಂದೂ ರಾಷ್ಟ್ರ ಸಮನ್ವಯ ಸಮಿತಿ”ಯ ಸ್ಥಾಪನೆ ಮಾಡಿ ಹಿಂದೂ ರಾಷ್ಟ್ರ ಸ್ಥಾಪನೆಯಾಗುವವರೆಗೆ ಸಂಘಟಿತರಾಗಿ ಪ್ರಯತ್ನ ಮಾಡಲು ಸಂಕಲ್ಪ ಮಾಡಿದರು. ಭಗವಂತನ ಚರಣಗಳಲ್ಲಿ ಪ್ರಾರ್ಥನೆ ಮತ್ತು ಪ್ರತಿಜ್ಞೆಯ ಮೂಲಕ ಹಿಂದೂ ರಾಷ್ಟ್ರ ಅಧೀವೇಶನ ಸಂಪನ್ನಗೊಂಡಿತು.