Sunday, November 24, 2024
ಪುತ್ತೂರುಸುದ್ದಿ

ಕಟ್ಟತ್ತಾರು_ ನಿಡ್ಯಾಣ ರಸ್ತೆ ಕಾಂಕ್ರೀಟೀಕರಣಕ್ಕೆ ಶಾಸಕರಿಂದ ಗುದ್ದಲಿಪೂಜೆ : ರಸ್ತೆಗಾಗಿ ಚುನಾವಣೆ ಬಹಿಷ್ಕಾರ ಎಚ್ಚರಿಕೆ ನೀಡಿದ್ದ ನಿಡ್ಯಾಣ ನಿವಾಸಿಗಳು -ಕಹಳೆ ನ್ಯೂಸ್

ಪುತ್ತೂರು: ಕೆದಂಬಾಡಿ ಗ್ರಾಮದ ಕಟ್ಟತ್ತಾರು ನಿಡ್ಯಾಣ ರಸ್ತೆಗೆ ಇದೇ ಮೊದಲ ಬಾರಿಗೆ ಅನುದಾನವನ್ನು ನೀಡಲಾಗಿದೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಸ್ತೆಗಾಗಿ ಚುನಾವಣೆಯನ್ನು ಬಹಿಷ್ಕಾರ ಮಾಡುವುದಾಗಿ ಎಚ್ಚರಿಕಾ ಬ್ಯಾನರ್ ಹಾಕಿದ್ದರು. ಈ ರಸ್ತೆಗೆ ಶಾಸಕರಾದ ಅಶೋಕ್ ರಐಯವರು 25 ಲಕ್ಷ ಅನುದಾನ ನೀಡುವ ಮೂಲಕ ಗ್ರಾಮಸ್ಥರ ಬೇಡಿಕೆ ಈಡೇರಿಸಿದ್ದಾರೆ.

ಈ ರಸ್ತೆಯಲ್ಲಿ 150ಕ್ಕೂ ಮಿಕ್ಕಿ ಮನೆಗಳಿದ್ದರೂ ಇದುವರೆಗೂ ಯಾವುದೇ ಜನಪ್ರತಿನಿಧಿಗಳು ರಸ್ತೆಗೆ ಅನುದಾನ ನೀಡಿರಲಿಲ್ಲ. ಚುನಾವಣೆಯ ಸಂದರ್ಬದಲ್ಲಿ ಭರವಸೆಯನ್ನು ಮಾತ್ರ ನೀಡುತ್ತಿದ್ದರು ಎಂದು ಗ್ರಾಮಸ್ಥರು ಆರೋಪಿಸಿದ್ದು ಮೊಟ್ಟ ಮೊದಲ ಬಾರಿಗೆ ಅನುದಾನವನ್ನು ನೀಡಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಶಾಸಕರು ನಿಟ್ಯಾಣ ರಸ್ತೆಗೆ ಅನುದಾನವನ್ನು ನೀಡುವುದಾಗಿ ಭರವಸೆಯನ್ನು ನೀಡಿದ್ದೇ, ಅದರಂತೆ ಭರವಸೆಯನ್ನು ಈಡೇರಿಸಿದ್ದೇನೆ. ನಾವು ನುಡಿದಂತೆ ನಡೆಯುತ್ತೇವೆ , ವೋಟಿಗಗಿ ಜನರಲ್ಲಿ ಆಸೆ ಹುಟ್ಟಿಸಿ ಬಳಿಕ ಮೋಸ ಮಾಡುವ ಪೃವೃತ್ತಿ ನಮಗಿಲ್ಲ. ಈ ಪ್ರದೇಶಕ್ಕೆ ರಸ್ತೆಯ ಜೊತೆಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗುವುದು. ಮುಂದಿನ ದಿನಗಳಲ್ಲಿ ಈ ರಸ್ತೆಯನ್ನು ಸಂಪೂರ್ಣವಾಗಿ ಕಾಂಕ್ರೀಟ್ ಮಾಡಲಾಗುವುದು ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ ಬಿ ವಿಶ್ವನಾಥ ರೈಯವರು ಮಾತನಾಡಿ ನಿಡ್ಯಾಣ ನಿವಾಸಿಗಳ ಹಲವು ವರ್ಷಗಳ ಬೇಡಿಕೆ ಈಡೇರಿದೆ. ರಸ್ತೆಯಿಲ್ಲದೆ ಮಳೆಗಾಲದಲ್ಲಿ ಸಂಕಷ್ಟ ಅನುಭವಿಸುತ್ತಿದ್ದ ಗ್ರಾಮಸ್ಥರಿಗೆ ನೆಮ್ಮದಿ ತಂದಿದೆ. ಕಾಂಗ್ರೆಸ್ ಎಂದಿಗೂ ಜನರಿಗೆ ಮಾತು ಕೊಟ್ಟು ಮೋಸ ಮಾಡುವುದಿಲ್ಲ. ಎಲ್ಲೆಲ್ಲಿ ಬೇಡಿಕೆ ಈಡೇರಿಸಲು ಗ್ರಾಮಸ್ಥರು ಚುನಾವಣೆಯನ್ನು ಬಹಿಷ್ಕಾರ ಮಾಡುವುದಾಗಿ ಹೇಳಿದ್ದರೋ ಎಲ್ಲಾ ಕಡೆ ಅನುದಾನವನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಪುತ್ತೂರು ವಿಧಾನಸಬಾ ಕ್ಷೇತ್ರದಲ್ಲಿ ಸಮಗ್ರ ಅಭಿವೃದ್ದಿ ಆಗಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೆದಂಬಾಡಿ ಕಾಂಗ್ರೆಸ್ ವಲಯಾಧ್ಯಕ್ಷರಾದ ಪುರಂದರ್ ರೈ ಕೋರಿಕ್ಕಾರ, ಮಾಜಿ ಅಧ್ಯಕ್ಷರಾದ ಮನೋಹರ್ ಎಂಡೆಸಾಗು, ಪುತ್ತೂರು ಬ್ಲಾಕ್ ಕಾರ್ಯದರ್ಶಿಹಬೀಬ್ ಕಣ್ಣೂರು, ಬೂತ್ ಅಧ್ಯಕ್ಷರಾದ ಸೀತಾರಾಮ ರೈ ಬಾಲಾಯ, ಭಾಸ್ಕರ್ ನಾಯ್ಕ್, ಅಬ್ದುಲ್ಲ ಹಾಜಿ, ಇಸ್ಮಾಯಿಲ್ ಗಟ್ಟಮನೆ, ಗ್ರಾಪಂ ಸದಸ್ಯೆ ಅಸ್ಮಾ, ಮಜಿ ಉಪಾಧ್ಯಕ್ಷೆ ಅಸ್ಮಾ ಗಟ್ಟಮನೆ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಮೆಲ್ವಿನ್ ಮೊಂತೆರೋ, ರಘುನಾಥ ರೈ ಚಾವಡಿ, ಸೋಮಯ್ಯ ತಿಂಗಳಾಡಿ, ಅಶ್ರಫ್ ಸಾರೆಪುಣಿ, ಸಲಾಂ ಸಂಪ್ಯ, ಇಬ್ರಾಹಿಂ ನಿಡ್ಯಾಣ, ಎ ಕೆ ಇಸುಬು, ನವೀದ್, ಚಂಧ್ರಶೇಖರ್ ರೈ, ಅಲ್ಪಸಂಖ್ಯಾತ ಘಟಕದ ಝಹ್‌ರಾ ತಿಂಗಳಾಡಿ ಮೊದಲಾದವರು ಉಪಸ್ಥಿತರಿದ್ದರು. ಬೋಳೋಡಿ ಚಂಧ್ರಹಾಸ ರೈ ಸ್ವಾಗತಿಸಿ ವಂದಿಸಿದರು.