ನಿವೇದಿತಾ ಶಿಶುಮಂದಿರದಲ್ಲಿ ಪುಟಾಣಿ ಪ್ರಪಂಚ : ಮಕ್ಕಳ ಉತ್ತಮ ಭವಿಷ್ಯಕ್ಕೆ ಭದ್ರ ಬುನಾದಿ ಶಿಶುಮಂದಿದಲೇ ಆರಂಭವಾಗಬೇಕು: ಕೃಷ್ಣ ಪ್ರಸಾದ್ – ಕಹಳೆ ನ್ಯೂಸ್
ಪುತ್ತೂರು : ಮಕ್ಕಳನ್ನು ಪ್ರಾಯೋಗಿಕವಾಗಿ ತಯಾರಿ ನಡೆಸಬೇಕು. ಕೇವಲ ಪಾಠದಿಂದ ಅಲ್ಲದೆ, ಚಟುವಟಿಕೆಯ ಮೂಲಕ ಮಕ್ಕಳ ಅಭಿವೃದ್ಧಿಯನ್ನು ಕಾಣಬೇಕು, ಆಟ, ಪಾಠ, ಸಂಸ್ಕೃತಿಯ ಪರಿಪಾಠಗಳನ್ನು ಕಲಿಸುವಂತಹ ಶಕ್ತಿ ಇರುವಂತದ್ದು ಶಿಶುಮಂದಿರಗಳಲ್ಲಿ ಮಾತ್ರ ಸಾಧ್ಯ. ವಿವೇಕಾನಂದ ಸಂಸ್ಥೆಯಲ್ಲಿ ಅದೆಷ್ಟೋ ಅಂಗ ಸಂಸ್ಥೆಗಳಿದ್ದರು ಮೊದಲು ಪ್ರಾಶಾಸ್ತ್ಯವನ್ನು ಹೊಂದಿರುವಂತದ್ದು ನಿವೇದಿತಾ ಶಿಶು ಮಂದಿರ ಎಂದು ಶ್ರೀ ರಾಮ ಪದವಿ ಕಾಲೇಜಿನ ಪ್ರಾಂಶುಪಾಲ ಕೃಷ್ಣ ಪ್ರಸಾದ್ ಹೇಳಿದರು.
ಇವರು ಪುತ್ತೂರು ನೆಹರು ನಗರದ ನಿವೇದಿತಾ ಶಿಶುಮಂದಿರದ ಪುಟಾಣಿ ಸಂಭ್ರಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, 2020 ಶಿಕ್ಷಣ ನೀತಿ ಭಾರತ ಕೇಂದ್ರೀತ ಶಿಕ್ಷಣವಾಗಿದೆ. ಇದು ಭಾರತದ ಕೇಂದ್ರೀತವಾಗಿ ಆಲೋಚನೆಯನ್ನು ಮಕ್ಕಳು ಮಾಡಬೇಕು ಜೊತೆಗೆ ಎನ್ ಇ ಪಿ ಕೋರ್ಸ್ ನಾನು ಯಾರು ಎಂದು ತಿಳಿಸಲು ಪ್ರಯತ್ನ ಮಾಡುತ್ತದೆ. ಪ್ರತಿಯೊಬ್ಬರೂ ಸಭ್ಯತೆ, ಸಂಸ್ಕೃತಿಯನ್ನು ತಿಳಿಬೇಕಂದ್ರೆ ಶಿಶು ಮಂದಿರದ ಮಕ್ಕಳನ್ನು ಗಮನಿಸಬೇಕು, ಅವರ ಮಾತಿನಲ್ಲಿ ದೇಶದ ಭಕ್ತಿಯನ್ನು ಕಾಣಬಹುದು ಹೊರತು ದೇಶವನ್ನು ಹಾಳು ಮಾಡುವಂತದಲ್ಲ. ಮಕ್ಕಳಲ್ಲಿ ದೇಶ ದೇಶ ದೇಶ ನನ್ನದು, ರಾಮನನ್ನು ಜಪಿಸುವುದು ಮಕ್ಕಳು ಧರಿಸುವ ವೇಷ ಭೂಷಣ, ಸ್ವಭಾಷ ಸ್ವಭೂಶ ಇವೆಲ್ಲವೂ ಮಕ್ಕಳಿಗೆ ತಿಳಿಬೇಕು. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಸಾಕಷ್ಟು ಸವಾಲುಗಳು ಇವೆ. ಆದರೆ ಎಲ್ಲವನ್ನು ಮೆಟ್ಟಿ ನಿಂತು ಜಯಿಸಿದರೆ ಗೆಲುವು ನಮ್ಮದೇ ಎನ್ನುವುದಕ್ಕೆ ಸಾಕ್ಷಿ ರಾಮ ಮಂದಿರ ಪ್ರತಿಷ್ಟಾಪನೆ. ಶ್ರದ್ದೆಯ ಮೂಲವನ್ನು ಅಲ್ಲಾಡಿಸುವಂತ ಕೆಲಸವನ್ನು ನಾವು ಮಾಡಬೇಕಾಗುತ್ತದೆ. ನಿನಗೊಂದು ಧರ್ಮದ ರಾಷ್ಟೀಯ ಶಿಕ್ಷಣ ಬೇಕೆಂದರೆ ಮಕ್ಕಳನ್ನು ಶಿಶುಮಂದಿರಕ್ಕೆ ಕಲಿಸಬೇಕು.ಮಗು ಯಾವ ರೀತಿ ಯೋಚನೆ ಮಾಡತ್ತೋ ಅದುವೇ ಮಗುವಿನ ಮಾತೃ ಭಾಷೆ ಆಗಿರುತ್ತೆ ಅದನ್ನು ಸ್ವಪ್ರಜ್ಞೆ, ಮತ್ತೊಬ್ಬರನ್ನು ಗೌರವಿಸುವುದು, ಸಹಾಯ ಮನೋಭಾವವನ್ನು ಬೆಳೆಸುವುದು ಪರಪ್ರಜ್ಞೆ, ದೇಶದ ಮೇಲಿರುವ ಅಭಿಮಾನ ರಾಷ್ಟ್ರ ಪ್ರಜ್ಞೆ ಈ ಮೂರು ವಿಷಯಗಳನ್ನು ಮಕ್ಕಳು ಅರಿತಿರಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪುತ್ತೂರು ತಾಲೂಕು ಮಹಿಳಾ ಒಕ್ಕೂಟದ ಅಧ್ಯಕ್ಷೆ ಶಾಂತಿ ಹೆಗ್ಡೆ ಮಾತನಾಡಿ, ಮಕ್ಕಳಲ್ಲಿ ಪ್ರತಿಭೆ ಇದೆ ಇದಕ್ಕೆ ವೇದಿಕೆ ಶಿಶು ಮಂದಿರ ಮಾಡಿಕೊಡುತ್ತದೆ. ಮಕ್ಕಳಲ್ಲಿ ರಾಷ್ಟ ಪ್ರೇಮ ಬೆಳೆದಿದೆ. ದೇಶದಲ್ಲಿ ಧ್ವಜವನ್ನು ಎತ್ತಿ ಹಿಡಿತ್ತೇವೆ ಎನ್ನುವ ಭಾವನೆ ಮಕ್ಕಳಲ್ಲಿ ಮೂಡಿದೆ. ಪುಟಾಣಿಗಳು ದೇವರ ಸಮ, ಮಕ್ಕಳು ಮಣ್ಣಿನ ಮುದ್ದೆ ಇದ್ದ ಹಾಗೆ ಅದಕ್ಕೆ ಆಕಾರ ಕೊಡುವ ಕೆಲಸ ಶಿಶು ಮಂದಿರದ ಮಾತಾಜಿಯವರು ಮಾಡುತ್ತಾರೆ. ಶುಭಾಷಿತ, ಪಂಚಾಂಗ, ಭಗವದ್ಗೀತೆಯನ್ನು ಸ್ವತಃ ಮಕ್ಕಳೇ ಹೇಳುವುದು ಒಂದು ವಿಸ್ಮಯ, ಇದೀಕೆ ಬೆನ್ನೆಲುಬಾಗಿ ಶಿಶು ಮಂದಿರದ ಮಾತಾಜಿಯವರು ಎಂದು ಹೆಮ್ಮೆಯಿದೆ. ಇಂದಿನ ಮಕ್ಕಳು ಮುಂದಿನ ಪ್ರಜೆ ಎಂಬ ಮಾತು ಮಾಸಿ ಹೋಗಿ, ಇಂದು ಇಂದಿನ ಮಕ್ಕಳು ಇಂದಿನ ಪ್ರಜೆಗಳು ಎಂದು ಬದಲಾಗಿದೆ. ಶಿಕ್ಷಣ ಕೇಂದ್ರದಲ್ಲಿ ಉತ್ತಮವಾದ ಶಿಕ್ಷಣ ಇದ್ದಲ್ಲಿ, ಉತ್ತಮವಾದ ಪ್ರಜೆಯಾಗುತ್ತಾರೆ, ಅಂತಹ ಶಿಕ್ಷಣವನ್ನು ನಿವೇದಿತಾ ಶಿಶುಮಂದಿರದಲ್ಲಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಶಿಶುಮಂದಿರದ ಆಡಳಿತ ಮಂಡಳಿಯ ಅಧ್ಯಕ್ಷೆ ಲಕ್ಷ್ಮಿ ವಿ ಜಿ ಭಟ್ ,ಶಿಶುಮಂದಿರದ ಮಾತಾಜಿ ಜ್ಯೋತಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ನಿವೇದಿತಾ ಶಿಶುಮಂದಿರದ ಪುಟಾಣಿ ನಂದನ ಕೃಷ್ಣ ಸ್ವಾಗತಿಸಿ, ನಿವೇದಿತಾ ಶಿಶು ಮಂದಿರದ ಆಡಳಿತ ಮಂಡಳಿಯ ಸದಸ್ಯೆ ಭಾರತಿ ಶಶಿಧರ ವಂದಿಸಿದರು. ಕಾರ್ಯಕ್ರಮವನ್ನು ಸೌಮ್ಯ ಬಿಷಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹವ್ಯಶ್ರೀ ಪಾಲ್ತಾಡಿ, ಧರ್ಮ ಶ್ರೀ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಪುಟಾಣಿ ಮಕ್ಕಳು ಹಾಗೂ ಮಾತೆಯಂದಿರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಶಿಶುಮಕ್ಕಳಿಗೆ ಹಾಗೂ ಬಾಲಗೋಕುಲದ ಮಕ್ಕಳಿಗು ಸ್ಮರಣಿಕೆ ನೀಡಲಾಯಿತು. ಶಿಶುಮಂದಿರಕ್ಕೆ ಪ್ರೋತ್ಸಾಹವನ್ನು ನೀಡಿದ ಪೋಷಕರಿಗೂ ಈ ಸಂದರ್ಭದಲ್ಲಿ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಸಭಾ ಕಾರ್ಯಕ್ರಮದಲ್ಲಿ ಶಿಶುಮಂದಿರದ ಮಕ್ಕಳಿಂದ,ಅಮೃತವಚನ, ಅಮೃತ ಬಿಂದು ಮಂಕುತಿಮ್ಮನ ಕಗ್ಗ, ಏಕಹ, ದೇಶಭಕ್ತಿಗೀತೆ, ಹಾಡಿದರು.