Sunday, January 19, 2025
ಆರೋಗ್ಯಕಡಬದಕ್ಷಿಣ ಕನ್ನಡಸುದ್ದಿ

ಡೆಂಗ್ಯೂ ಜ್ವರಕ್ಕೆ ಯುವಕ ಬಲಿ- ಕಹಳೆ ನ್ಯೂಸ್

ಕಡಬ: ಏಕಕಾಲಕ್ಕೆ ಡೆಂಗ್ಯೂ ಮತ್ತು ಮಲೇರಿಯಾ ಜ್ವರ ಬಾಧಿಸಿ ಯುವಕನೋರ್ವ ಮೃತಪಟ್ಟ ಘಟನೆ ಕಡಬದಲ್ಲಿ ನಡೆದಿದೆ. ಕಡಬ ತಾಲೂಕು ಕುಟ್ರುಪಾಡಿ ಗ್ರಾಮದ ವಿಮಲಗಿರಿ ಕಲ್ಲೋಲಿಕ್ಕಲ್ ನಿವಾಸಿ ಶಿಜು ಕಲ್ಲೋಳಿಕಲ್ (31) ಮೃತಪಟ್ಟ ಯುವಕ.

ಜ್ವರ ಕಾಣಿಸಿಕೊಂಡ ಕಾರಣ ಕಡಬದ ಖಾಸಗಿ ಮೆಡಿಕಲ್ ಸೆಂಟರ್‌ಗೆ ಚಿಕಿತ್ಸೆಗಾಗಿ ಆಗಮಿಸಿದ್ದರು. ಅಲ್ಲಿ ಪರೀಕ್ಷೆ ನಡೆಸಿದಾಗ ಡೆಂಗ್ಯೂ ಜ್ವರ ಪತ್ತೆಯಾಗಿತ್ತು. ನಂತರದಲ್ಲಿ ಮನೆಗೆ ಬಂದ ಬಳಿಕ ಜ್ವರ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಮತ್ತೆ ಮಾರನೇ ದಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಯುವಕನನ್ನು ಪರೀಕ್ಷಿಸಿದ ವೈದ್ಯರು ಹೆಚ್ಚುವರಿ ಚಿಕಿತ್ಸೆಗಾಗಿ ಮಂಗಳೂರಿಗೆ ಕಳುಹಿಸಿಕೊಟ್ಟರು. ಆದರೆ ಮಂಗಳೂರಿನ ಆಸ್ಪತ್ರೆಗೆ ತಲುಪಿದ ವೇಳೆಗಾಗಲೇ ಯುವ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೃತರು ಮಲಂಕರ ಕ್ಯಾಥೋಲಿಕ್ ಚರ್ಚ್ ಪುತ್ತೂರು ಧರ್ಮಪ್ರಾಂತ್ಯದ ರೆ.ಫಾ. ಥಾಮಸ್ ಕಲ್ಲೋಳಿಕಲ್ ಅವರ ಸಹೋದರಾಗಿದ್ದಾರೆ. ಮೃತರ ಅಂತ್ಯ ಸಂಸ್ಕಾರ ಕಾರ್ಯಗಳು ವಿಮಲಗಿರಿ ಸಂತ ಮೇರಿಸ್ ಮಲಂಕರ ಕ್ಯಾಥೊಲಿಕ್ ಚರ್ಚಿನಲ್ಲಿ ನಡೆದಿದೆ.