Recent Posts

Sunday, January 19, 2025
ಸುದ್ದಿ

ಸಿದ್ದರಾಮಯ್ಯರವರ ವಿರುದ್ದ ಅವಹೇಳನಕಾರಿ ನೀಡಿರುವುದನ್ನು ಖಂಡಿಸಿ ಪ್ರತಿಭಟನೆ – ಕಹಳೆ ನ್ಯೂಸ್

ಮಂಗಳೂರು: ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರ ವಿರುದ್ದ ಅವಹೇಳನಕಾರಿ ನೀಡಿರುವುದನ್ನು ಖಂಡಿಸಿ ಕೇಂದ್ರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ವತಿಯಿಂದ ನಗರದ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಇಂದು ಪ್ರತಿಭಟನೆ ನಡೆಯಿತು.

ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಕ.ವಿ.ಕಾ. ಮಾಜಿ ಅಧ್ಯಕ್ಷ ಎಸ್.ಮನೋಹರ್, ಶೋಭಾ ಕರಂದ್ಲಾಜೆ ಪ್ರಚಾರದ ಹುಚ್ಚಿಗಾಗಿ ಹಿರಿಯರ ನಾಯಕರ ವಿರುದ್ಧ ಕೀಳುಮಟ್ಟದ ಭಾಷೆ ಬಳಸುತ್ತಿದ್ದಾರೆ. ಐದು ವರ್ಷಗಳ ಕಾಲ ಹಸಿವು ಮುಕ್ತ ಮತ್ತು ಪಾರರ‍್ಶಕ ಆಡಳಿತ, ಭ್ರಷ್ಟಚಾರಮುಕ್ತ ಆಡಳಿತ ನೀಡಿದ ರಾಜ್ಯದ ಜನಪ್ರಿಯ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ವಿರುದ್ಧ ಮಾತನಾಡಿರುವುದು ಶೋಭಾರ ಯೋಗ್ಯತೆಯನ್ನು ಮತ್ತೆಮತ್ತೆ ತೋರಿಸುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ರೀತಿ ಪ್ರಚಾರ ಪಡೆಯುವ ಶೋಭಾ ಬಿಜೆಪಿಯ ‘ವಿಷ’ದ ಹಾವು ಎಂಬುದು ಎಲ್ಲರಿಗೂ ತಿಳಿದ ವಿಷಯ ಎಂದರು.ಅಸಂಸದೀಯ ಪದ ಬಳಕೆ ಮಾಡುವ ಶೋಭಾ ಕರಂದ್ಲಾಜೆ ಮೊದಲು ತಮ್ಮ ಪಕ್ಷದಲ್ಲಿರುವ ಹಾವು-ಚೇಳುಗಳ ಬಗ್ಗೆ ಮಾತನಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪ್ರಚಾರ ಸಮಿತಿಯ ಪ್ರಚಾರ ಸಮಿತಿಯ ಅಧ್ಯಕ್ಷ ಜನಾರ‍್ದನ್, ಕಾಂಗ್ರೆಸ್ ಮುಖಂಡರಾದ ಸಲೀಂ, ಹೇಮರಾಜು, ಪರಿಸರ ರಾಮಕೃಷ್ಣ, ರಾಜು, ರವಿಶೇಖರ್ ಆನಂದ್, ಆದಿತ್ಯ ಮತ್ತು ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳಾದ ಆಶಾ, ರಚನಾ ವಿಜಯ ಮೊದಲಾದವರು ಭಾಗವಹಿಸಿದ್ದರು.