Tuesday, January 21, 2025
ರಾಜ್ಯಸುದ್ದಿ

ರಾಜ್ಯದ ವಿವಿಧೆಡೆ ಲೋಕಾಯುಕ್ತ ದಾಳಿ : ಭ್ರಷ್ಟ ಕುಬೇರರ ಅಕ್ರಮ ಆಸ್ತಿ ಕಂಡು ದಂಗಾದ ಅಧಿಕಾರಿಗಳು – ಕಹಳೆ ನ್ಯೂಸ್

ಬೆಂಗಳೂರು : ನಿನ್ನೆ ಬೆಳ್ಳಂ ಬೆಳಿಗ್ಗೆ ಸರ್ಕಾರಿ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಶಾಕ್ ನೀಡಿದ್ದು, ಆದಾಯ ಮೀರಿ ಆಸ್ತಿ ಸಂಪಾದನೆ ಮಾಡಿದ ಆರೋಪ ಸಂಬಂಧ ರಾಜ್ಯದ ವಿವಿಧೆಡೆ 10 ಅಧಿಕಾರಿಗಳಿಗೆ ಸಂಬಂಧಿಸಿದ ಮನೆ, ಸೇರಿ ಇತರೆ ಸ್ಥಳಗಳಲ್ಲಿ ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸರು ಬರೋಬ್ಬರಿ 23.17 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಲೋಕಾಯುಕ್ತ ಡಿಜಿ ಪ್ರಶಾಂತ್‌ಕುಮಾರ್ ಮಾರ್ಗದರ್ಶನದಲ್ಲಿ 200 ಪೊಲೀಸರನ್ನೊಳಗೊಂಡ 41 ಪ್ರತ್ಯೇಕ ತಂಡಗಳು ಬುಧವಾರ ಬೆಳ್ಳಂಬೆಳಗ್ಗೆ ಮಂಡ್ಯ, ತುಮಕೂರು, ಹಾಸನ ಸೇರಿ 10 ಅಧಿಕಾರಿಗಳಿಗೆ ಸಂಬಂಧಿಸಿದ 41 ಸ್ಥಳಗಳಲ್ಲಿ ದಾಳಿ ನಡೆಸಿದ್ದರು. ದಾಳಿ ವೇಳೆ ಅಧಿಕಾರಿಗಳು ಸಂಪಾದಿಸಿರುವ ಕೋಟ್ಯಂತರ ರೂ. ಮೌಲ್ಯದ ಆಸ್ತಿ ದಾಖಲೆಗಳು ಸಿಕ್ಕಿವೆ. ಜತೆಗೆ, ಲಕ್ಷಾಂತರ ರೂ.ನಗದು. ಕೆಜಿಗಟ್ಟಲೆ ಬಂಗಾರ, ವಾಹನಗಳು, ಐಷಾರಾಮಿ ಬಂಗಲೆಗಳನ್ನು ಕಂಡು ಲೋಕಾಯುಕ್ತ ಅಧಿಕಾರಿಗಳೇ ದಂಗಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಾತ್ರಿಯವರೆಗೂ ದಾಳಿ ಮುಂದುವರಿಸಿದ್ದ ಲೋಕಾಯುಕ್ತ ಅಧಿಕಾರಿಗಳು ಅಂತಿಮವಾಗಿ ಆರೋಪಿತ ಅಧಿಕಾರಿಗಳಿಗೆ ಸಂಬಂಧಿಸಿದ ಹಣ, ಆಭರಣ ಸೇರಿ ಇನ್ನಿತರೆ ಚರಾಸ್ತಿ ಜಪ್ತಿ ಮಾಡಿದ್ದಾರೆ. ಅಧಿಕಾರಿಗಳ ಚರಾಸ್ತಿ-ಸ್ಥಿರಾಸ್ತಿ ಸೇರಿ 23.17 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.ಭ್ರಷ್ಟ

ಅಧಿಕಾರಿಗಳ ಬಳಿ ಸಿಕ್ಕ ಅಕ್ರಮ ಆಸ್ತಿ ಹಾಗೂ ಅವರ ವಿವರ ಕೆಳಗಿನಂತಿದೆ

ಕೆ.ಆರ್.ನೇತ್ರಾವತಿ

ತರೀಕೆರೆ ವಾಣಿಜ್ಯ ತೆರಿಗೆ ಅಧಿಕಾರಿ ಆಸ್ತಿ ಮೌಲ್ಯ: ₹1.2 ಕೋಟಿ. -ವಾಣಿಜ್ಯ ಸಂಕೀರ್ಣ, ಚಿಕ್ಕಮಗಳೂರಿನಲ್ಲಿ ನಿವಾಸ, ನಿವೇಶನ, ಕೃಷಿ ಭೂಮಿ, ಚಿನ್ನಾಭರಣ ಪತ್ತೆ

ಶಾಂತಕುಮಾ‌ರ್, ಮೆಸ್ಕಾಂ ಎಂಜಿನಿಯರ್

ಆಸ್ತಿ ಮೌಲ್ಯ: 11.28 3. 1 ಪ್ಲಾಟ್, 4 ನಿವೇಶನ, 1 ಮನೆ, 2 ಎಕರೆ ಕೃಷಿ ಜಮೀನು, 41 ಲಕ್ಷ ರೂ. ಗೃಹೋಪಯೋಗಿ ವಸ್ತು, 761 ಗ್ರಾಂ ಚಿನ್ನಾಭರಣ, 86 ಸಾವಿರ ರೂ. ನಗ ದು, 3.25 ಕೆಜಿ ಬೆಳ್ಳಿ, ಟೆಕ್ಸಾನ್ ಕಾರು.

• ಜಗನ್ನಾಥ್ ಹಾಸನದ ಆಹಾರ ನಿರೀಕ್ಷಕ

ಆಸ್ತಿ ಮೌಲ್ಯ: ₹2 ಕೋಟಿ. -ಅಕ್ರಮವಾಗಿ ಗಳಿಸಿರುವ ಹಣವನ್ನು ಸಹೋದರನ ಮೂಲಕ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿ ದ್ದಾರೆ ಎನ್ನುವ ಶಂಕೆ.

ರೇಣುಕಮ್ಮ, ವಿಜಯನಗರ ವಲಯ ಅರಣ್ಯಾಧಿಕಾರಿ

ಆದಾಯ ಮೀರಿದ ಆಸ್ತಿ ಮೌಲ್ಯ: ₹1.9 ಕೋಟಿ. 150 ಗ್ರಾಂ ಚಿನ್ನ ಸ್ಥಾರ್ಪಿಯೊ ಜೀಪ್, 1 ಕಾರು, 2 ದ್ವಿಚಕ್ರ ವಾಹನ, ಅಪಾರ ನಗದು, ಫಾರ್ಮ್ ಹೌಸ್, 45 ಲಕ್ಷ ರೂ. ಮೌಲ್ಯದ ನಿವೇಶನ, 2 ಮನೆ ಮತ್ತು 6 ಎಕರೆ ಜಮೀನು ನಗದು, 9,12,600 ರೂ. ಮೌಲ್ಯದ ಚಿನ್ನಾಭರಣ.

ಶಾಂತಕುಮಾ‌ರ್, ಮೆಸ್ಕಾಂ ಎಂಜಿನಿಯರ್

ಆಸ್ತಿ ಮೌಲ್ಯ: ₹1.3 ಕೋಟಿ. ಮಂಗಳೂರಿನಲ್ಲಿ 4 ಸೈಟು, 2 ಮನೆ, 1 ಕೋಟಿ ರೂ. ಬ್ಯಾಂಕ್ ಬ್ಯಾಲೆನ್ಸ್, 35 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ವಾಹನಗಳು, ಅಕ್ರಮ ಆಸ್ತಿ ಪತ್ರ

.ಎಚ್.ಆರ್.ಹರ್ಷ, ಮಂಡ್ಯದ ಲೋಕೋಪಯೋಗಿ ಇಲಾಖೆ ಇಇ ಆಸ್ತಿ ಮೌಲ್ಯ : ₹1.68 ಕೋಟಿ.

ಪಿ.ರವಿಕುಮಾ‌ರ್, ಎಇಇ, ಲೋಕೋಪಯೋಗಿ ಇಲಾಖೆ, ಹುಣಸೂರು

ಆಸ್ತಿ ಮೌಲ್ಯ: ₹1.7 ಕೋಟಿ. 1 ನಿವೇಶನ, 1 ಮನೆ, ವಾಣಿಜ್ಯ ಕಟ್ಟಡ, 4 ಎಕರೆ ಕೃಷಿ ಜಮೀನು, 5.9 ಎಕರೆ ಕೃಷಿ ಜಮೀನು ಅಡಮಾನ ಪತ್ರ, 13 ಲಕ್ಷ ರೂ. ಚಿನ್ನಾಭರಣ, 1 ಸ್ವಿಫ್ಟ್ ಕಾರು, 11 ಲಕ್ಷರೂ. ಗೃಹೋಪ ಯೋಗಿ ವಸ್ತು.

ಆರ್.ಆರ್. ಭಾಸ್ಕರ್, ಹಗರಿಬೊಮ್ಮನಹಳ್ಳಿ ಜೆಸ್ಕಾಂ ಎಇಇ ಆಸ್ತಿ ಮೌಲ್ಯ: ₹1.4 ಕೋಟಿ. ಹೊಸಪೇಟೆ ನಗರದಲ್ಲಿ 3 ಮನೆ, ಕೃಷಿ ಜಮೀನು ಮತ್ತು ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆ

ಪ್ರೊ.ಬಿ.ರವಿ, ವಿಜಯನಗರ ಶ್ರೀಕೃಷ್ಣದೇವರಾಯ ವಿವಿ ವ್ಯಾಪ್ತಿಯ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ

ಆಸ್ತಿ ಮೌಲ್ಯ: ₹1.57 ಕೋಟಿ ರೂ. 1.57 ಕೋಟಿ ರೂ. ಮೌಲ್ಯದ 7 2, 2 4, 59,800 .

ಎ. ಹನುಮಂತರಾಯಪ್ಪ, ಜೂನಿಯ‌ರ್ ಎಂಜಿನಿಯರ್, ಕೆಆ‌ರ್ ಐಡಿಎಲ್ ಉಪ ವಿಭಾಗ, ಮಧುಗಿರಿ ಆಸ್ತಿ ಮೌಲ್ಯ: ₹2.3 ಕೋಟಿ.