Sunday, November 24, 2024
ಸುದ್ದಿ

ಮಂಗಳೂರು : ವಿವಸ್ತ್ರಗೊಳಿಸಿ ಮಹಿಳೆಯೊಂದಿಗೆ ಫೋಟೋ ಕ್ಲಿಕ್ಕಿಸಿ ಬ್ಲಾಕ್ ಮೇಲ್ : ಹನಿಟ್ರಾಪ್ ತಂಡ ಪೊಲೀಸರ ವಶಕ್ಕೆ – ಕಹಳೆ ನ್ಯೂಸ್

ಕಾಸರಗೋಡು: ಮಹಿಳೆಯೊಬ್ಬಳನ್ನು ಬಳಸಿಕೊಂಡು ಹನಿಟ್ರ‍್ಯಾಪ್ ನಡೆಸಿ ಐದು ಲಕ್ಷ ಪೀಕಿಸಿದ ಪ್ರಕರಣಕ್ಕೆ ಸಂಬAಧಪಟ್ಟAತೆ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಉದುಮ ಮಾಂಗಾಡ್ ನಿವಾಸಿಯೋರ್ವರನ್ನು ಅಪಹರಿಸಿ ಮಂಗಳೂರಿನ ವಸತಿ ಗೃಹವೊಂದರಲ್ಲಿ ವಿವಸ್ತ್ರಗೊಳಿಸಿ ಫೊಟೋ ತೆಗೆಸಿಕೊಂಡು ಬ್ಲ್ಯಾಕ್‍ಮೇಲ್ ಮಾಡುತ್ತಿದ್ದ ಗ್ಯಾಂಗ್ ಕಂಬಿ ಎಣಿಸುವಂತಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು


ಮಾ0ಗಾಡ್ ತಾಮರಕ್ಕುಳಿಯ 49 ರ ಹರೆಯದ ವ್ಯಕ್ತಿಯನ್ನು ಅಪಹರಿಸಿ ಸುಮಾರು ಐದು ಲಕ್ಷ ರೂ. ವಂಚಿಸಿದ ಪ್ರಕರಣಕ್ಕೆ ಸಂಬAಧಪಟ್ಟAತೆ ಇಬ್ಬರು ಮಹಿಳೆಯರು ಸೇರಿದಂತೆ ಏಳುಮಂದಿಯನ್ನು ಬಂಧಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೋಜಿಕ್ಕೋಡ್ ನ ಪಿ.ಫೈಝಲ್ (37), ಈತನ ಪತ್ನಿ ಎಂ. ಪಿ ಲುಬ್ನಾ (29), ಕಾಸರಗೋಡು ಶಿರಿಬಾಗಿಲಿನ ಎನ್.ಸಿದ್ದೀಕ್(48), ಮಾಂಗಾಡ್ ನ ದಿಲ್ಷಾದ್ (40), ಮುಟ್ಟತ್ತೋಡಿ ಯ ನಫೀಸತ್ ಮಿಸ್ರಿಯಾ ( 40), ಮಾಂಗಾಡ್ ನ ಅಬ್ದುಲ್ ಕುಂuಟಿಜeಜಿiಟಿeಜ (32) ಮತ್ತು ಪಡನ್ನಕ್ಕಾಡಿನ ರಫೀಕ್ (42) ಬಂಧಿತರು ಎಂದು ಗುರುತಿಸಲಾಗಿದೆ.

ಮಾಂಗಾಡ್ ವ್ಯಕ್ತಿಯನ್ನು ಪರಿಚಯವಾದ ಲುಬ್ನಾ ಇತರರ ಸಹಾಯದಿಂದ ಮಂಗಳೂರಿಗೆ ಕರೆದೊಯ್ದಿದ್ದು, ವಸತಿ ಗೃಹ ವೊಂದರಲ್ಲಿ ಬೆದರಿಸಿ ಹಣ ಪಡೆದಿರುವುದಾಗಿ ಮೇಲ್ಪರಂಬ ಪೊಲೀಸರಿಗೆ ದೂರು ನೀಡಲಾಗಿತ್ತು.ಇದರಂತೆ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ಸಿಯಾಗಿದ್ದಾರೆ.ಜನವರಿ 29 ರಂದು ಘಟನೆ ನಡೆದಿತ್ತು. ವಸತಿ ಗೃಹ ದಲ್ಲಿ ವಿವಸ್ತ್ರ ದಲ್ಲಿ ನಿಲ್ಲಿಸಿ ಫೋಟೋ ತೆಗೆದು ಬೆದರಿಸಿದ್ದು, ಬ್ಲ್ಯಾಕ್ ಮೇಲ್ ನಡೆಸಿ ಹಣ ದೋಚಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ .