Recent Posts

Monday, January 20, 2025
ಸುದ್ದಿ

ಬಲ್ಯದ ಶ್ರೀ ಉಮಾಮಹೇಶ್ವರಿ ದೇವಸ್ಥಾನದಲ್ಲಿ ವಿಜಯದಶಮಿಯಲ್ಲಿ ಲಂಡನ್ನಿನ ಇಸ್ಕಾನ್ ದೇವಾಲಯದ ಅರ್ಚಕರಾದ ಜೋಕಾನವಿಕ್ ವಾಯುದಾಸ್ – ಕಹಳೆ ನ್ಯೂಸ್‌

ಬಲ್ಯ : ಶ್ರೀ ಉಮಾಮಹೇಶ್ವರಿ ದೇವಸ್ಥಾನದಲ್ಲಿ ವಿಜಯದಶಮಿಯ ದಿನ ವಿಶೇಷ ಕಾರ್ಯಕ್ರಮ ನಡೆಯಿತು. ಆಲಂಕಾರಿನ ಶ್ರೀ ಭಾರತೀ ಹಿರಿಯ ಪ್ರಾಥಮಿಕ ಶಾಲೆಯ ಬೆಳ್ಳಿ ಹಬ್ಬದ ಪ್ರಯುಕ್ತ ಮನೆ ಮನೆ ಭಗವದ್ಗೀತೆ ಅಭಿಯಾನ ಹಾಗೂ ಗೀತಾ ಸಾರೋದ್ಧಾರ-೧೮ ಪ್ರವಚನ ಮಾಲಿಕೆಯ ಕಾರ್ಯಕ್ರಮ ನಡೆಯಿತು.

ಸುಧನ್ವಾ ಕೂಡೂರು ಮತ್ತು ದೇವಕಿ ಕೂಡೂರು ಅವರು ಶ್ರೀಮದ್ಭಗವದ್ಗೀತೆಯ ಹತ್ತನೆಯ ಅಧ್ಯಾಯದ ವಾಚನ ನಡೆಸಿದರು. ಸ್ಥಳೀಯ ಶ್ರೀಪೂರ್ಣ ಆಯುರ್ವೇದ ಚಿಕಿತ್ಸಾಲಯದಲ್ಲಿ ಪಂಚಕರ್ಮ ಚಿಕಿತ್ಸೆ ಪಡೆಯುತ್ತಿರುವ ಲಂಡನ್ನಿನ ಇಸ್ಕಾನ್ ದೇವಾಲಯದ ಅರ್ಚಕರಾದ ಜೋಕಾನವಿಕ್ ವಾಯುದಾಸ್ ಅವರು ಭಗವದ್ಗೀತೆಯ ಮಹತ್ವವನ್ನು ಹೇಳುತ್ತಾ ಶ್ರೀಕೃಷ್ಣನ ಸಂದೇಶವು ಕಾಲಾತೀತ ಮತ್ತು ದೇಶ ಜನಾಂಗಗಳನ್ನು ಮೀರಿ ಇಡೀ ಜಗತ್ತಿಗೇ ಮಾರ್ಗದರ್ಶಕವಾಗಿದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪಡು ಪಣಂಬೂರಿನ ವಿದ್ವಾನ್ ಕಿರಣ್ ಕುಮಾರ್ ಭಗವದ್ಗೀತೆ ಮತ್ತು ಮನಸ್ಸು ಈ ವಿಷಯವಾಗಿ ಪ್ರವಚನ ನೀಡಿದರು. ರಜತ ಸಮಿತಿಯ ಅಧ್ಯಕ್ಷ ಕೃಷ್ಣ ಕುಮಾರ್ ಅತ್ರಿಜಾಲು, ದೇವಾಲಯದ ಅಧ್ಯಕ್ಷ ಚಿತ್ತರಂಜನ್ ರೈ, ಶಾಲೆಯ ಅಧ್ಯಕ್ಷ ಡಾ. ಸುರೇಶ್ ಕುಮಾರ್ ಕೂಡೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಾರಾಯಣ ಬಲ್ಯ ಕಾರ್ಯಕ್ರಮ ನಿರ್ವಹಿಸಿ ವಿದ್ಯಾ ಭಾರತಿಯ ಜಿಲ್ಲಾ ಅಧ್ಯಕ್ಷ ಗಂಗಾಧರ ಕುಂಡಡ್ಕ ವಂದಿಸಿದರು.