Recent Posts

Tuesday, January 21, 2025
ರಾಜಕೀಯರಾಜ್ಯಸುದ್ದಿ

ಕೇಂದ್ರ ಬಜೆಟ್‌ ನಲ್ಲಿ ಮಹಿಳೆಯರಿಗೆ ಭರ್ಜರಿ ಉಡುಗೊರೆ ನೀಡಿದ ನಿರ್ಮಲಾ ಸೀತಾರಾಮನ್‌ – ಕಹಳೆ ನ್ಯೂಸ್

ನವದೆಹಲಿ : ಕೇಂದ್ರ ಬಜೆಟ್‌ ನಲ್ಲಿ ದೇಶದ ರೈತರಿಗೆ ಹಾಗು ಮಹಿಳೆಯರಿಗೆ ಭಾರೀ ಸಿಹಿಸುದ್ದಿಯನ್ನು ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್‌ ಘೋಷಣೆ ಮಾಡಿದ್ದಾರೆ. ಡಿಬಿಟಿಯಿಂದಾಗಿ 2.7 ಲಕ್ಷ ಕೋಟಿ ರೂ. ಹಣ ಸರ್ಕಾರಕ್ಕೆ ಉಳಿತಾಯವಾಗಿದ್ದು, ಫಲಾನುಭವಿಗಳಿಗೆ ಒಟ್ಟು 34 ಲಕ್ಷ ಕೋಟಿ ರೂ. ಸಬ್ಸಿಡಿ ಹಣವನ್ನು ವರ್ಗಾವಣೆ ಮಾಡಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ಸೀತಾರಾಮನ್‌ ಬಜೆಟ್‌ ನಲ್ಲಿ ನಾರಿ ಶಕ್ತಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದಿದ್ದಾರೆ. 10 ವರ್ಷಗಳಲ್ಲಿ ಉನ್ನತ ಶಿಕ್ಷಣದಲ್ಲಿ ಮಹಿಳೆಯರ ದಾಖಲಾತಿ 28% ಹೆಚ್ಚಾಗಿದೆ. ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ ಕೋರ್ಸ್‌ಗಳಲ್ಲಿ ಹುಡುಗಿಯರು ಮತ್ತು ಮಹಿಳೆಯರು 43% ದಾಖಲಾತಿಯನ್ನು ಮಾಡುತ್ತಾರೆ. ಇದು ವಿಶ್ವದಲ್ಲೇ ಅತಿ ಹೆಚ್ಚು ಎಂದು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತ್ರಿವಳಿ ತಲಾಖ್ ನಿಷೇಧ, ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ 1/3 ಸ್ಥಾನಗಳನ್ನು ಮೀಸಲಿಡುವುದು. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ 70% ರಷ್ಟು ಮನೆಗಳು ಮಹಿಳೆಯರ ಸ್ಥಾನಮಾನವನ್ನು ಸಮಾಜದಲ್ಲಿ ಮತ್ತಷ್ಟು ಸದೃಡಗೊಳಿಸಿದೆ ಎಂದಿದ್ದಾರೆ

ಜಾಹೀರಾತು
ಜಾಹೀರಾತು
ಜಾಹೀರಾತು