Saturday, November 23, 2024
ಸುದ್ದಿ

HSRP no ಪ್ಲೇಟ್ ಅಳವಡಿಸದಿದ್ದರೆ ಬಿಗ್ ಫೈನ್ – ಕಹಳೆ ನ್ಯೂಸ್

ದೇಶದಲ್ಲಿ 2019 ರ ಏಪ್ರಿಲ್ 1 ಕ್ಕಿಂತ ಮೊದಲು ನೋಂದಣಿಯಾದ ವಾಹನಗಳು ಫೆಬ್ರವರಿ 17 ರೊಳಗೆ High Security Registration Plate (HSRP)  ಅಳವಡಿಸಿಕೊಳ್ಳುವ ಬಗ್ಗೆ ಸುದ್ದಿ ವೈರಲ್ ಆಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು


ಜನರು 2019 ರ ಮೊದಲು ನೋಂದಣಿ ಮಾಡಿಕೊಂಡ ವಾಹನಗಳಿಗೆ HSRP ಅಳವಡಿಸುವುದು ಕಡ್ಡಾಯ. ಸದ್ಯ HSRP ಅಳವಡಿಕೆಯ ಬಗ್ಗೆ ಬಿಗ್ ಅಪ್ಲೇಟ್ ಹೊರಬಿದ್ದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಹಿಂದೆ HSRPಅಳವಡಿಕೆಗೆ ನವೆಂಬರ್ 17 ಕೊನೆಯ ದಿನಾಂಕವನ್ನು ನಿಗದಿಪಡಿಸಲಾಗಿತ್ತು. ಆದರೆ ದೇಶದಲ್ಲಿರುವ ಎಲ್ಲ ವಾಹನಗಳಿಗೆ ನಂಬರ್ ಪ್ಲೇಟ್ ಅಳವಡಿಕೆ ಆಗದೆ ಇರುವ ಕಾರಣ ಸಾರಿಗೆ ಇಲಾಖೆ ಇನ್ನಷ್ಟು ಸಮಯಕ್ವಕಾಶವನ್ನು ನೀಡಿತ್ತು. ದಿನಾಂಕ ವಿಸ್ತರಸಿ ಮತ್ತೆ ಕೊನೆಯ ದಿನಾಂಕ ಹತ್ತಿರವಾಗುತ್ತಿದರು ಕೂಡ ವಾಹನ ಸವರಾರು ಈ ಬಗ್ಗೆ ಗಮನ ಹರಿಸುತ್ತಿಲ್ಲ. ಇದನ್ನೆಲ್ಲಾ ಗಮನಿಸಿದ ಸಾರಿಗೆ ಇಲಾಖೆ ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡ ವಿಧಿಸಲು ಮುಂದಾಗಿದೆ. ವಾಹನ ಮಾಲೀಕರು ಈ ತಪ್ಪು ಮಾಡಿದರೆ ಇಷ್ಟು ದಂಡ ಪಾವತಿಸುವುದು ಕಡ್ಡಾಯ

ದೇಶದಲ್ಲಿ 2019 ರ ಹಿಂದಿನ ವರ್ಷದಿಂದ 1.70 ಕೋಟಿ ವಾಹನಗಳು ನೋಂದಣಿಯಾಗಿವೆ. ಇಷ್ಟು ವಾಹನಗಳು ಇನ್ನು ಕೂಡ ಊSಖP ಅಳವಡಿಕೆ ಮಾಡಿಕೊಂಡಿಲ್ಲ. ವಾಹನ ಮಾಲೀಕರು ಇದರ ಬಗ್ಗೆ ಅಸಡ್ಡೆ ತೋರುತ್ತಿದ್ದಾರೆ ಎಂದು ಅಂಕಿ ಅಂಸ ಹೇಳುತ್ತಿದೆ.

HSRP Number Plate ಇಲ್ಲದ ವಾಹನ ಮೊದಲ ಬಾರಿಗೆ ರಸ್ತೆಗಿಳಿದರೆ 1000 ಹಾಗೂ ಎರಡನೇ ಬಾರಿ ರಸ್ತೆಗಿಳಿದರೆ 2000 ಹಾಗೂ ಪದೇ ಪದೇ ಇದೆ ತಪ್ಪಾದರೆ ಇನ್ ಹೆಚ್ಚಿನ ದಂಡ ವಿಧಿಸಲು ಸಾರಿಗೆ ಇಲಾಖೆ ನಿರ್ಧರಿಸಿದೆ. ನೀವು HSRP Number Plate ಅಳವಡಿಸದೇ ನಿಮ್ಮ ವಾಹನವನ್ನು ರಸ್ತೆಗಿಳಿಸುವ ಮುನ್ನ ಸ್ವಲ್ಪ ಯೋಚಿಸಿ. ಇಲ್ಲವಾದರೆ ಬಾರಿ ದಂಡವನ್ನು ಕಟ್ಟಬೇಕಾಗುತ್ತದೆ ಎಚ್ಚರ.

ಎಚ್‌ಎಸ್‌ಆರ್‌ಪಿ ನೋಂದಣಿ ಫಲಕಗಳು ಹೆಚ್ಚು ಸುರಕ್ಷಿತವಾಗಿರುತ್ತವೆ ಮತ್ತು ಅವುಗಳನ್ನು ಬದಲಾಯಿಸಲು ಅಥವಾ ತಿದ್ದಲು ಸಾಧ್ಯವಿಲ್ಲ. ನಂಬರ್ ಪ್ಲೇಟ್ ನ ಒಂದು ಬದಿಯು ನೀಲಿ ಚಕ್ರವನ್ನು ಹೋಲುವ ಹೋಲೋಗ್ರಾಮ್ ಹೊಂದಿದೆ. ಇದರ ಕೆಳಗೆ 10-ಅಂಕಿಯ ವಿಶಿಷ್ಟ ಗುರುತಿನ ಸಂಖ್ಯೆ ಇರಲಿದೆ. HSRP ಅಲ್ಯೂಮಿನಿಯಂ ಲೋಹದಿಂದ ಮಾಡಲ್ಪಟ್ಟಿದೆ ಮತ್ತು ವಾಹನದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒದಗಿಸಲು ಸ್ಕ್ಯಾನ್ ಮಾಡಬಹುದಾದ ಲೇಸರ್ ಕೋಡ್ ಅನ್ನು ಹೊಂದಿದೆ.

ಏನಿದು ಎಚ್ಎಸ್ಆರ್‌ಪಿ ನಂಬರ್‌ ಪ್ಲೇಟ್‌?

ಎಚ್‌ಎಸ್‌ಆರ್‌ಪಿ ಎಂದರೆ ಅತಿ ಸುರಕ್ಷಿತ ನೋಂದಣಿ ಫಲಕವಾಗಿದೆ. ಇವುಗಳನ್ನು ಅಲ್ಯೂಮಿನಿಯಂ ಲೋಹದಿಂದ ಮಾಡಿರುತ್ತಾರೆ. ಈ ಪ್ಲೇಟ್‌ನ ಮೇಲ್ಭಾಗದ ಎಡಬದಿಯಲ್ಲಿ ಅಶೋಕ ಚಕ್ರ ಮುದ್ರೆಯ 20X20 ಮಿ.ಮೀ ಅಳತೆಯ ಕ್ರೋಮಿಯಂ ಹೋಲೋಗ್ರಾಮ್‌ ಇರುತ್ತದೆ. ಇಂಗ್ಲಿಷ್ ಅಕ್ಷರಗಳು ಹಾಗೂ ನಂಬರ್‌ಗಳು ಉಬ್ಬಿಕೊಂಡಿರುವ ರೀತಿ ಅಚ್ಚಾಗಿರುತ್ತವೆ. ಈ ನಂಬರ್‌ ಪ್ಲೇಟ್‌ಗಳನ್ನು ಎರಡು ಲಾಕ್‌ ಪಿನ್‌ಗಳನ್ನು ಬಳಸಿ ಅಳವಡಿಸುತ್ತಾರೆ. ಇದರಿಂದ ಒರಿಜಿನಲ್‌ ಯಾವುದು, ನಕಲಿ ಯಾವುದು ಎಂದು ಸುಲಭವಾಗಿ ಗುರುತಿಸಬಹುದು.

ಎಚ್ಎಸ್ಆರ್‌ಪಿ ಪಡೆಯುವುದು ಹೇಗೆ?

  1. ಕರ್ನಾಟಕ ಸಾರಿಗೆ ಇಲಾಖೆ ವೆಬ್‌ಸೈಟ್‌ ಅಥವಾ ಸೊಸೈಟಿ ಆಫ್‌ ಇಂಡಿಯನ್‌ ಆಟೋಮೊಬೈಲ್‌ ಮ್ಯಾನುಫ್ಯಾಕ್ಚರರ್ಸ್‌ (ಎಸ್‌ಐಎಎಂ) ವೆಬ್‌ಸೈಟ್‌ ಭೇಟಿ ನೀಡಿ ಮತ್ತು Book HSRP ಅನ್ನು ಕ್ಲಿಕ್‌ ಮಾಡಿ.
  2. ನಿಮ್ಮ ವಾಹನ ತಯಾರಕರನ್ನು ಆಯ್ಕೆ ಮಾಡಿ.
  3. ವಾಹನದ ಮೂಲ ವಿವರಗಳನ್ನು ಭರ್ತಿ ಮಾಡಿ.
  4. HSRP ಅಳವಡಿಕೆಗಾಗಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಡೀಲರ್ ಸ್ಥಳವನ್ನು ಆಯ್ಕೆ ಮಾಡಿ.
  5. HSRP ಶುಲ್ಕವನ್ನು ಅನ್‌ಲೈನ್‌ನಲ್ಲಿ ಪಾವತಿಸಿ, ಶುಲ್ಕ ಪಾವತಿಯನ್ನು ನಗದು ರೂಪದಲ್ಲಿ ಮಾಡುವಂತಿಲ್ಲ.
  6. ವಾಹನ ಮಾಲೀಕರ ಮೊಬೈಲ್ ಸಂಖ್ಯೆಗೆ ಒ.ಟಿ.ಪಿ ರವಾನಿಸಲಾಗುವುದು.
  7. ನಿಮ್ಮ ಅನುಕೂಲಕ್ಕೆ ತಕ್ಕಂತಹ HSRP ಅಳವಡಿಕೆಯ ದಿನಾಂಕ ಮತ್ತು ಸಮಯವನ್ನು ಆಯ್ಕೆ ಮಾಡಿ.
  8. ನಿಮ್ಮ ವಾಹನದ ಯಾವುದೇ ತಯಾರಕ/ಡೀಲರ್ ಸಂಸ್ಥೆಗೆ ಭೇಟಿ ನೀಡಿ.
  9. ವಾಹನ ಮಾಲೀಕರ ಕಚೇರಿ ಆವರಣ / ಮನೆಯ ಸ್ಥಳದಲ್ಲಿ HSRP ಅಳವಡಿಕೆಗಾಗಿ ಆಯ್ಕೆಯನ್ನು ಹೊಂದಬಹುದು.

ಪ್ರಮುಖ ಅಂಶಗಳು

  1. ಕರ್ನಾಟಕ ಸಾರಿಗೆ ಇಲಾಖೆ ವೆಬ್‌ಸೈಟ್‌ ಅಥವಾ ಎಸ್‌ಐಎಎಂ ವೆಬ್‌ಸೈಟ್‌ ಮೂಲಕ HSRP ಅಳವಡಿಕೆಗೆ ಕಾಯ್ದಿರಿಸಿಕೊಳ್ಳಿ.
  2. ಯಾವುದೇ ತೆರೆದ ಮಾರುಕಟ್ಟೆಯ ರಸ್ತೆ ಬದಿಯ ಮಾರಾಟಗಾರರಿಂದ ನಕಲಿ ಹೊಲೊಗ್ರಾಮ್ / IND ಮಾರ್ಕ್ ಇಂಡಿಯಾ ಎಂದು ಕೆತ್ತಲಾದ ಅಥವಾ ಕೆತ್ತಿದಂತಹ ಅನುಕರಣೆಯ HSRP, ಒಂದೇ ರೀತಿಯ ಪ್ಲೇಟ್‌ಗಳು, ಸ್ಮಾರ್ಟ್ ನಂಬರ್ ಪ್ಲೇಟ್‌ಗಳನ್ನು ಅಳವಡಿಸುವಂತಿಲ್ಲ. ಅವುಗಳು HSRP ಫಲಕಗಳಾಗಿರುವುದಿಲ್ಲ.
  3. HSRP ಅಳವಡಿಸದ ಹೊರತು, ವಾಹನ ಮಾಲೀಕತ್ವ ವರ್ಗಾವಣೆ, ವಿಳಾಸ ಬದಲಾವಣೆ, ಕಂತು ಕರಾರು, ನಮೂದು, ರದ್ದತಿ, ಅರ್ಹತಾಪತ್ರ ನವೀಕರಣ ಇತ್ಯಾದಿ ಯಾವುದೇ ಸೇವೆಗಳಿಗೆ ಅನುಮತಿಸುವುದಿಲ್ಲ.
  4. ಶುಲ್ಕ ಪಾವತಿಸಿರುವ ಪ್ರಕರಣದಲ್ಲಿ HSRP ಅಳವಡಿಕೆಗೆ ನಿಗದಿತ ದಿನಾಂಕದಿಂದ 30 ದಿನಗಳವರೆಗೆ ಮಾನ್ಯವಾದ ಎಚ್‌ಎಸ್‌ಆರ್‌ಪಿ ರಸೀದಿಯನ್ನು ಪ್ರಸ್ತುತಪಡಿಸುವ ವಾಹನಗಳಿಗೆ ಯಾವುದೇ ದಂಡವಿರುವುದಿಲ್ಲ.
  5. HSRP ಅಳವಡಿಕೆಗೆ ನವೆಂಬರ್‌ 17 ಆಗಿದ್ದು, ಕೂಡಲೇ ಅರ್ಜಿ ಸಲ್ಲಿಸಿ

ಎಚ್‌ಎಸ್‌ಆರ್‌ಪಿ ಯಾಕೆ ಮತ್ತು ವಿಶೇಷತೆ ಏನು?

  1. HSRP ನೋಂದಣಿ ಫಲಕಗಳು ಅತ್ಯಂತ ಸುರಕ್ಷಿತವಾಗಿದ್ದು ಇವುಗಳನ್ನು ಬದಲಿಸುವುದು, ವಿರೂಪಗೊಳಿಸುವುದು ಸಾಧ್ಯವಿಲ್ಲ.
  2. ನಂಬರ್‌ ಪ್ಲೇಟ್‌ನ ಒಂದು ಬದಿಯಲ್ಲಿ ನೀಲಿ ಬಣ್ಣದ ಚಕ್ರವನ್ನು ಹೋಲುವ ಹಾಲೋಗ್ರಾಮ್‌ ಇರುತ್ತದೆ. ಇದರ ಕೆಳಗಡೆ 10 ನಂಬರಿನ ವಿಶಿಷ್ಟ ಗುರುತಿನ ಸಂಖ್ಯೆ ಇರುತ್ತದೆ. ಅಂಕಿಗಳ ಮೇಲೆ ಆಂಗ್ಲಭಾಷೆಯಲ್ಲಿ ‘ಇಂಡಿಯಾ’ ಎಂಬ ಪದ ಹಲವೆಡೆ ಇರುತ್ತದೆ.
  3. ಸುರಕ್ಷಿತ ನಂಬರ್‌ ಪ್ಲೇಟ್‌ನಲ್ಲಿ ನಂಬರ್‌ ಪ್ಲೇಟ್‌ ನಕಲು ಮಾಡುವುದು ಸಾಧ್ಯವಿಲ್ಲ.
  4. ವಾಹನಗಳ ಕಳವು, ಅವುಗಳನ್ನು ಬಳಸಿ ಅಪರಾಧ ಚಟುವಟಿಕೆ ಮಾಡಿದಾಗ ಪರಿಶೀಲಿಸಲು ಎಚ್‌ಎಸ್‌ಆರ್‌ಪಿ ಸಹಕಾರಿಯಾಗಲಿದೆ.
  5. ರಸ್ತೆಗಳಲ್ಲಿ ಸಂಚರಿಸುವ ಎಲ್ಲ ವಾಹನಗಳನ್ನು ಗುರುತಿಸಲು ಸಹಕಾರಿ.
  6. ನೋಂದಣಿ ಫಲಕಗಳಲ್ಲಿ ಏಕರೂಪತೆ ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತವೆ.