Sunday, November 24, 2024
ಸುದ್ದಿ

ಮೀನುಗಾರರಿಗೆ ಗುಡ್‌ನ್ಯೂಸ್ : ಮತ್ಸ್ಯ ಸಂಪಕ್ಕೆ ಮತ್ತಷ್ಟು ಬಲ ತುಂಬಿದ ಬಜೆಟ್.. – ಕಹಳೆ ನ್ಯೂಸ್

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2024-25ನೇ ಸಾಲಿನ ಹಣಕಾಸು ವರ್ಷದ ಮಧ್ಯಂತರ ಬಜೆಟ್ ಅನ್ನು ಫೆಬ್ರವರಿ ಒಂದರ ಗುರುವಾರ ಮಂಡಿಸಿದ್ದಾರೆ. ವಿತ್ತ ಸಚಿವೆಯಾಗಿ ಆರನೇ ಬಜೆಟ್ ಮಂಡನೆ ಮಾಡಿರುವ ನಿರ್ಮಲಾ ಸೀತಾರಾಮನ್, ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ದಾಖಲೆಯನ್ನು ಸರಿಗಟ್ಟಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು, ಮಧ್ಯಂತರ ಬಜೆಟ್‌ನಲ್ಲಿ ಮೀನುಗಾರರಿಗೆ ಸಹಾಯ ಮಾಡುವ ಯೋಜನೆಯ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿದ್ದಾರೆ. ಮೀನುಗಾರರಿಗೆ ಸಹಾಯ ಮಾಡುವ ಮಹತ್ವವನ್ನು ಅರಿತು ಮೀನುಗಾರಿಕೆಗಾಗಿ ಪ್ರತ್ಯೇಕ ಇಲಾಖೆಯನ್ನು ಸ್ಥಾಪಿಸಿದ್ದು ನಮ್ಮ ಸರ್ಕಾರ. ಇದರಿಂದ ಇದು ಒಳನಾಡು ಮತ್ತು ಜಲಚರಗಳ ಉತ್ಪಾದನೆಯನ್ನು ದ್ವಿಗುಣಗೊಳಿಸಿದೆ ಎಂದು ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಅನುಷ್ಠಾನ ಯೋಜನೆ (PMMSY) ಬಗ್ಗೆ ಮಾಹಿತಿ ನೀಡಿದ್ದಾರೆ.

ಜತೆಗೆ ಈ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಅನುಷ್ಠಾನ ಯೋಜನೆಗೆ ಮತ್ತಷ್ಟು ಮಹತ್ವ ನೀಡಲಾಗಿದೆ. ಇದಕ್ಕಾಗಿ ಬಜೆಟ್‌ನಲ್ಲಿ ಪ್ರಮುಖ ನಾಲ್ಕು ಅಂಶಗಳನ್ನು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.

1. ಅಕ್ವಾಕಲ್ಚರ್ ಉತ್ಪಾದಕತೆಯನ್ನು ಪ್ರತಿ ಹೆಕ್ಟೇರ್‌ಗೆ 3 ರಿಂದ 5 ಟನ್‌ಗಳಿಂದ ಹೆಚ್ಚಿಸುವುದು

2. 1 ಲಕ್ಷ ಕೋಟಿಗೆ ರಫ್ತು ದ್ವಿಗುಣಗೊಳಿಸುವುದು

3. ಭವಿಷ್ಯದಲ್ಲಿ ಸ್ಥಳೀಯವಾಗಿ 55 ಲಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು

4. ಐದು ಇಂಟಿಗ್ರೇಟೆಡ್ ಅಕ್ವಾಪಾರ್ಕ್‌ಗಳನ್ನು ಸ್ಥಾಪಿಸಲಾಗುವುದು.

ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ (PMMSY)

ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ (PMMSY) ಯು ಮೀನುಗಾರಿಕಾ ವಲಯದಲ್ಲಿ ಸಮಗ್ರ ಅಭಿವೃದ್ಧಿ ಮತ್ತು ಮೀನುಗಾರ ಸಮುದಾಯದ ಸಾಮಾಜಿಕ, ಆರ್ಥಿಕ ಕಲ್ಯಾಣದ ಗುರಿಯನ್ನು ಹೊಂದಿದೆ. ಕೇಂದ್ರ ಸರ್ಕಾರದ ಮೀನುಗಾರಿಕೆ ಇಲಾಖೆ, ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಅಡಿಯಲ್ಲಿ ಸೆಪ್ಟೆಂಬರ್ 2020 ರಲ್ಲಿ ಈ ಯೋಜನೆ ಪ್ರಾರಂಭವಾಗಿದೆ.

ಈ ಯೋಜನೆಯಲ್ಲಿ SC/ST ವರ್ಗಕ್ಕೆ ಸೇರಿದ ಎಲ್ಲಾ ಮಹಿಳಾ ಫಲಾನುಭವಿಗಳು ಮತ್ತು ಸದಸ್ಯರಿಗೆ ಘಟಕ ಅಥವಾ ಯೋಜನಾ ವೆಚ್ಚದ 60 ಪ್ರತಿಶತದವರೆಗೆ ಸಬ್ಸಿಡಿ ನೀಡಲಾಗುತ್ತದೆ. ಸಾಮಾನ್ಯ ವರ್ಗದ ಅಡಿಯಲ್ಲಿ 40 ಪ್ರತಿಶತ ಸಬ್ಸಿಡಿಯನ್ನು ವಿಸ್ತರಿಸಲಾಗಿದೆ. PMMSY ಯೋಜನೆಯಲ್ಲಿ ಮೀನು ಸಾಗಣೆ ಸೌಲಭ್ಯಗಳು, ದೋಣಿಗಳು/ಬಲೆಗಳ ಬದಲಿ, ಯಾಂತ್ರೀಕೃತ ಮೀನುಗಾರಿಕೆ ಹಡಗುಗಳಲ್ಲಿ ಜೈವಿಕ ಶೌಚಾಲಯಗಳು ಸೇರಿದಂತೆ ಇತರ ಚಟುವಟಿಕೆಗಳಿಗೆ ಸಬ್ಸಿಡಿಗಳನ್ನು ನೀಡುತ್ತದೆ.

ಅಸ್ತಿತ್ವದಲ್ಲಿರುವ ಮೀನುಗಾರಿಕೆ ದೋಣಿಗಳು, ಮೀನು/ಪ್ರಾನ್ ಹ್ಯಾಚರಿಗಳು, ಐಸ್ ಪ್ಲಾಂಟ್‌ಗಳು/ಕೋಲ್ಡ್ ಸ್ಟೋರೇಜ್‌ಗಳು ಮತ್ತು ಆಳ ಸಮುದ್ರದ ಮೀನುಗಾರಿಕೆ ಹಡಗುಗಳು, ಸುರಕ್ಷತಾ ಕಿಟ್‌ಗಳು, ಸಂಭಾವ್ಯ ಮೀನುಗಾರಿಕೆ ವಲಯ (PFZ), ಸಂವಹನ ಮತ್ತು ಟ್ರ್ಯಾಕಿಂಗ್ ಸಾಧನಗಳನ್ನು ನವೀಕರಿಸಲು ಸಬ್ಸಿಡಿ ನೀಡಲಾಗುತ್ತದೆ. ಈ ಯೋಜನೆಯನ್ನು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 2020-21 ರಿಂದ 2024-25 ರ ಆರ್ಥಿಕ ವರ್ಷದವರೆಗೆ ಐದು ವರ್ಷಗಳ ಅವಧಿಗೆ ಜಾರಿಗೊಳಿಸಲಾಗಿದೆ.