Sunday, November 24, 2024
ಸುದ್ದಿ

ಮಾಲ್ಡೀವ್ಸ್‌ಗೆ ಮತ್ತೆ ಶಾಕ್..!? ಲಕ್ಷದ್ವೀಪ ಅಭಿವೃದ್ಧಿಗೆ ಬಜೆಟ್‍ನಲ್ಲಿ ಅನುದಾನ –ಕಹಳೆ ನ್ಯೂಸ್

ಬೆಂಗಳೂರು : ಕೇಂದ್ರ ಸರ್ಕಾರವು ಭಾರತೀಯ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಗಣನೀಯವಾಗಿ ಹೂಡಿಕೆ ಮಾಡಲಿದೆ. ಲಕ್ಷದ್ವೀಪದ  ಪ್ರವಾಸೋದ್ಯಮಕ್ಕೆ ಸರ್ಕಾರ ಉತ್ತೇಜನ ನೀಡಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ತಮ್ಮ ಮಧ್ಯಂತರ ಬಜೆಟ್ 2024 ಭಾಷಣದಲ್ಲಿ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇತ್ತೀಚೆಗೆ ಮಾಲ್ಡೀವ್ಸ್ ಮತ್ತು ಭಾರತದ ವಿವಾದ ಬಳಿಕ ಲಕ್ಷದ್ವೀಪ ಅನ್ವೇಷಣೆ, ಪ್ರವಾಸೋದ್ಯಮ ಕುರಿತು ಹೆಚ್ಚು ಚರ್ಚೆ ಆಯಿತು. ಆನ್‌ಲೈನ್‌ನಲ್ಲಿ ‘ಚಲೋ ಲಕ್ಷದ್ವೀಪ’ ಅಭಿಯಾನ ಸಹ ಆರಂಭವಾಗಿತ್ತು. ಅದರ ಬೆನ್ನಲ್ಲೆ ಕೇಂದ್ರ ಸರ್ಕಾರ ದ್ವೀಪ ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪದ ಪ್ರವಾಸಿ ಮೂಲಸೌಕರ್ಯವನ್ನು ಸುಧಾರಣೆ ನಿರ್ಧರಿಸಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಾಲ್ಡೀವ್ಸ್‌ ಗಿಂತಲೂ ಭಾರತಕ್ಕೆ ಅತೀ ಹತ್ತಿರುವಿರುವ ಸುಂದರ ಲಕ್ಷದ್ವೀಪವು ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದಿಂದ ಹಲವು ಯೋಜನೆಗಳನ್ನು, ಭಾರೀ ಅನುದಾನವನ್ನು ಪಡೆಯಲಿದೆ. ಈ ಭಾಗಕ್ಕೆ ತೆರಳಲು ಒಂದೇ ಒಂದು ವಿಮಾನ ನಿಲ್ದಾಣ ವಿದ್ದು, ಹೊಸ ವಿಮಾನ ನಿಲ್ದಾಣ ಮಾಡುವುದಾಗಿ ಇತ್ತೀಚೆಗಷ್ಟೇ ಭಾರತ ಸರ್ಕಾರ ತಿಳಿಸಿತ್ತು.

ಲಕ್ಷದ್ವೀಪಕ್ಕೆ ಭಾರತ ಆದ್ಯತೆ: ಮಾಲ್ಡೀವ್ಸ್‌ಗೆ ಆಘಾತ

ಇದರ ಬೆನ್ನಲ್ಲೆ ಲಕ್ಷದ್ವೀಪವನ್ನು ಪ್ರವಾಸಿಗರ ತಾಣವಾಗಿ ಮಾಡುವುದಾಗಿ, ಅಲ್ಲಿನ ಪ್ರವಾಸೋದ್ಯಮ ಸುಧಾರಣೆಗೆ ಆದ್ಯತೆ ನೀಡಲಾಗುವುದು. ಅದಕ್ಕಾಗಿ ಅನುದಾನ ಹಂಚಿಕೆ ಮಾಡುವುದಾಗಿ ಕೇಂದ್ರ ವಿತ್ತ ಸಚಿವೆ ತಮ್ಮ ಬಜೆಟ್‌ನಲ್ಲಿ ತಿಳಿಸಿದ್ದಾರೆ. ಅ ಈ ಮೂಲಕ ಕೇಂದ್ರ ಸರ್ಕಾರ ಮಾಲ್ಡಿವ್ಸ್‌ಗೆ ಮತ್ತೊಂದು ಆಘಾತ ನೀಡಿದರು.

ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಹೋಗುತ್ತಿದ್ದ ದ್ವೀಪ ಸಮೂಹ ರಾಷ್ಟ್ರವಾದ ಮಾಲ್ಡೀವ್ಸ್‌ನೊಂದಿಗಿನ ರಾಜತಾಂತ್ರಿಕ ಜಗಳದ ನಂತರ ಅನೇಕ ಭಾರತೀಯರು ಲಕ್ಷದ್ವೀಪವನ್ನು ಪರ್ಯಾಯ ತಾಣವಾಗಿ ನೋಡುತ್ತಿದ್ದಾರೆ.

ಪ್ರಧಾನಿ ಟೀಕಿಸಿ ಪೇಚಿಗೆ ಸಿಲುಕಿದ ಮಾಲ್ಡೀವ್ಸ್: ಆಗಿದ್ದೇನು?

ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಲೋಕಾರ್ಪಣೆ ಸಂಬಂಧ ಭಾರತದ ಪ್ರಧಾನಿ ಮೋದಿ ಲಕ್ಷದ್ವೀಪಕ್ಕೆ ತೆರಳಿದ್ದು. ಅಲ್ಲಿನ ಸುಂದರ ರಮಣೀಯ ತಾಣಗಳ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ಮೋದಿ ಹಂಚಿಕೊಂಡಿದ್ದರು.

ಇಷ್ಟಕ್ಕೆ ದ್ವೀಪ ಪ್ರವಾಸೋದ್ಯಮ ತಾಣವಾಗಿರುವ ಮಾಲ್ಡೀವ್ಸ್ ಸಚಿವರು ಪ್ರಧಾನಿ ಮೋದಿ ಪೋಸ್ಟ್ ಅನ್ನು ಟೀಕಿಸಿದ್ದರು. ಭಾರತದ ಪ್ರಧಾನಮಂತ್ರಿಗಳು ಲಕ್ಷದ್ವೀಪವನ್ನು ಮಾಲ್ಡೀವ್ಸ್‌ಗೆ ಪರ್ಯಾಯ ಪ್ರವಾಸಿ ತಾಣವಾಗಿ ಮಾಡಲು ಹೊರಟಿದ್ದಾರೆ ಎಂದು ದೂರಿದ್ದರು.

ಮಾಲ್ಡೀವ್ಸ್‌ ಈ ಹೇಳಿಕೆಗಳಿಂದ ರಾಜತಾಂತ್ರಿಕ ಸಮಸ್ಯೆ ಆಯಿತು. ಮೂವರು ಸಚಿರನ್ನು ಮಾಲ್ಡೀವ್ಸ್ ಸರ್ಕಾರ ಅಮಾನತು ಮಾಡಿತಲ್ಲದೇ ಈ ಹೇಳಿಕೆ ಆಯಾ ಸಚಿವರ ವೈಯಕ್ತಿಕ ಹೇಳಿಕೆ ಹೊರತು ಸರ್ಕಾರದ್ದಲ್ಲ ಎಂದು ಸ್ಪಷ್ಟಪಡಿಸಿತು.

ಲಕ್ಷದ್ವೀಪದತ್ತ ಭಾರತೀಯರ ಚಿತ್ತ

ಈ ಬೆಳವಣಿಗೆ ಆಗುತ್ತಿದ್ದಂತೆ ಭಾರತೀಯರು ಮಾಲ್ಡೀವ್ಸ್ ಬಹಿಷ್ಕಾರ- ಲಕ್ಷದ್ವೀಪ ಅನ್ವೇಷಣೆ ಅಭಿಯಾನ ಆರಂಭಿಸಿದರು. ಅನೇಕರು ಮಾಲ್ಡೀವ್ಸ್‌ ತೆರಳಲು ಮಾಡಿದ್ದ ವಿಮಾನ ಟಿಕೆಟ್‌ಗಳನ್ನು ರದ್ದು ಪಡಿಸಿದರು. ವಿಮಾನಯಾನ ಟಿಕೆಟ್ ಬುಕ್ಕಿಂಗ್ ಏಜೆನ್ಸಿಗಳು ಭಾರತರ ಪರವಾಗಿ ನಿಂತವು. ಅಭಿಯಾನ ಯಶಸ್ವಿಯಾಯಿತು. ಜನರು ಲಕ್ಷದ್ವೀಪದತ್ತ ಒಲವು ವ್ಯಕ್ತಪಡಿಸುತ್ತಿದ್ದರೆ ಇತ್ತ ಕ್ಷಮೆ ಕೇಳಿದ ಮಾಲ್ಡೀವ್ಸ್ ಪ್ರವಾಸಿಗರನ್ನು ಕಳಹಿಸುವಂತೆ ಚೀನಾ ಸರ್ಕಾರದ ಮುಂದೆ ಅಂಗಲಾಚಿತು.