Tuesday, January 21, 2025
ಕ್ರೈಮ್ಬೆಂಗಳೂರುರಾಜ್ಯಸುದ್ದಿ

ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಸ್ಥಳ ಹೆಗ್ಗಡೆ ಕುಟುಂಬಸ್ಥರ ವಿರುದ್ಧ ಅವಹೇಳನಾಕಾರಿಯಾಗಿ ಮಾತನಾಡದಂತೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ‌ಮಾಡದಂತೆ ಗಿರೀಶ್ ಮಟ್ಟಣ್ಣನವರ್ ಹಾಗೂ ರಾಧಿಕಾ ಕಾಸರಗೋಡು ಅಲಿಯಾಸ್ ಅನಿತಾ ಕಾಸರಗೋಡು ವಿರುದ್ಧ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ನಿರ್ಬಂಧ ಆಜ್ಞೆ – ಕಹಳೆ ನ್ಯೂಸ್

ಬೆಂಗಳೂರು : ನಗರದ ಸಿಟಿ ಸಿವಿಲ್ ಕೋರ್ಟಿನಲ್ಲಿ OS number 797/2024 ಧರ್ಮಸ್ಥಳ ನಿಶ್ಚಲ್ ಜೈನ್, ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಸ್ಥಳ ಹೆಗ್ಗಡೆ ಕುಟುಂಬಸ್ಥರ ವಿರುದ್ಧ ಅವಹೇಳನಾಕಾರಿಯಾಗಿ ಮಾತನಾಡದಂತೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ‌ಮಾಡದಂತೆ ಗಿರೀಶ್ ಮಟ್ಟಣ್ಣನವರ್ ಹಾಗೂ ರಾಧಿಕಾ ಕಾಸರಗೋಡು ಅಲಿಯಾಸ್ ಅನಿತಾ ಕಾಸರಗೋಡು ವಿರುದ್ಧ ನಿರ್ಬಂಧ ಆಜ್ಞೆಯನ್ನು ಹೊರಡಿಸಿದೆ.

ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಸ್ಥಳ ಹೆಗ್ಗಡೆಯವರ ಕುಟುಂಬಸ್ಥರ ವಿರುದ್ಧ ಗಿರೀಶ್ ಮಟ್ಟಣ್ಣನವರ್ ಹಾಗೂ ರಾಧಿಕಾ ಕಾಸರಗೋಡು ಅವಾಚ್ಯವಾಗಿ, ಅವಹೇಳನಾಕಾರಿಯಾಗಿ ಸಾರ್ವಜನಿಕವಾಗಿ ಮಾತನಾಡುತ್ತಿದ್ದರು, ಅವರ ಇಬ್ಬರ ವಿರುದ್ಧ ತಲಾ ಐದು ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆಯನ್ನು
ನಿಶ್ಚಲ್ ಜೈನ್ ಅವರು ಹೂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಾದ ವಿವಾದಗಳು ಆಲಿಸಿದ ಘನ ನ್ಯಾಯಾಲಯವು ಸದ್ರಿ ಪ್ರಕರಣ ದಲ್ಲಿ ಗಿರೀಶ್ ಮಟ್ಟಣ್ಣನವರ್ ಹಾಗೂ ರಾಧಿಕಾ ಕಾಸರಗೋಡು ಅಲಿಯಾಸ್ ಅನಿತಾ ಕಾಸರಗೋಡು ಅವರಿಗೆ ಅರ್ಜಿದಾರರ ವಿರುದ್ಧ ಅವಹೇಳನಾಕಾರಿಯಾಗಿ ಮಾತನಾಡದಂತೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪೋಸ್ಟ್ ಮಾಡದಂತೆ ನಿರ್ಬಂಧಕ ಅಜ್ಞೆ ನೀಡಿದೆ. ಹಾಗೂ ಕೆಲವು ದಿನಗಳ ಹಿಂದೆ ಇಂತಹದ್ದೇ ಒಂದು ಪ್ರಕರಣದಲ್ಲಿ ಆರೋಪಿ ರಾಧಿಕಾ ಕಾಸರಗೋಡು ಅಲಿಯಾಸ್ ಅನಿತಾ ಕಾಸರಗೋಡು ಎಂಬ ಮಹಿಳೆಯನ್ನು ಮೂಡಬಿದಿರೆ ಪೋಲೀಸರು ಬಂಧಿಸಿದ್ದು, ನಂತರ ಜಾಮೀನಿನಲ್ಲಿ ಹೊರ ಬಂದಿರುವುದನ್ನು ಸ್ಮರಿಸಬಹುದಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀ ಕ್ಷೇತ್ರ ಧರ್ಮಸ್ಥಳದ ಪರ ರಾಜಶೇಖರ್ ಹಿಲ್ಯಾರ್ ವಾದಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು