Monday, January 20, 2025
ಸುದ್ದಿ

ಮಂಗಳೂರು: ಕೆನರಾ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ನಡೆದ ಡಾರ್ಕ್ ಪ್ಯಾಟರ್ನ್ಸ್ ರಾಷ್ಟ್ರ್ರೀಯ ಹ್ಯಾಕಥಾನ್-2023 – ಕಹಳೆ ನ್ಯೂಸ್

ಮಂಗಳೂರು : ಡಾರ್ಕ್ ಪ್ಯಾಟರ್ನ್ಸ್ ರಾಷ್ಟ್ರ್ರೀಯ ಹ್ಯಾಕಥಾನ್-2023 ಗೆ ನಡೆದ ಅರ್ಹತಾ ಸುತ್ತಿನಲ್ಲಿ ಅತ್ಯುತ್ತಮ ಸಾಧನೆ ತೋರಿದ 5 ತಂಡಗಳನ್ನು ಅಂತಿಮ ಮೌಲ್ಯಮಾಪನಕ್ಕಾಗಿ ಐಐಟಿ ಬನಾರಸ್ ಹಿಂದೂ ವಿವಿಗೆ ಸಲ್ಲಿಸಲಾಗಿದೆ. ಈ ಮೂಲಕ ತಾಂತ್ರಿಕ ಅನ್ವೇಷಣಾ ರಂಗದಲ್ಲಿ ಕೆನರಾ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಮತ್ತು ಅರ್ಹತೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶಿಸುವ ಅವಕಾಶ ದೊರೆತಂತಾಗಿದೆ.

ಕಾಲೇಜಿನಲ್ಲಿ ಈ ಹ್ಯಾಕಥಾನ್ ಗೆ ನೋಡಲ್ ಸೆಂಟರ್ ಜವಾಬ್ದಾರಿಯನ್ನು ತನ್ನದಾಗಿಸಿಕೊಂಡಿರುವ ಕೆನರಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ಡಾ.ಪ್ರಹಾಸ್ ಅಮೀನ್ ನೋಡಲ್ ಅಧಿಕಾರಿಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅರ್ಹತಾ ಸುತ್ತಿನ ಮೊದಲ ಹಂತದಲ್ಲಿ 31 ತಂಡಗಳಲ್ಲಿ 139 ವಿದ್ಯಾರ್ಥಿ ಸ್ಪರ್ಧಿಗಳಿದ್ದರು. ಇಲ್ಲಿ ಉತ್ತಮ ನಿರ್ವಹಣೆ ತೋರಿದ ಟಾಪ್ 10 ತಂಡಗಳ 47 ವಿದ್ಯಾರ್ಥಿಗಳನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಲಾಯಿತು .ನಿಟ್ಟೆ ಎನ್.ಎಂ.ಎ. ಎಂ. ಐ.ಟಿಯ ಡಾ. ಜೇಸನ್ ಎಲೊರಿ ಮಾರ್ಟಿ ಸ್ ಸಹಿತ ಕಾಲೇಜಿನ ಪರಿಣತರು ಎರಡನೇ ಹಂತದಲ್ಲಿ ಆಯ್ಕೆಯಲ್ಲಿ ಸಹಕರಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಆಯ್ಕೆಯಾದ ವಿಜೇತರನ್ನು ಅಭಿನಂದಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ನಾಗೇಶ್ ಹೆಚ್. ಆರ್. ವಿದ್ಯಾರ್ಥಿಗಳ ಪ್ರತಿಭೆ, ಅನ್ವೇಷಣಾ ಮನೋಭಾವ, ತಾಂತ್ರಿಕ ಕೌಶಲ ಅಭಿವೃದ್ಧಿಯಲ್ಲಿ ಹ್ಯಾಕಥಾನ್ ಗಳು ಮಹತ್ವದ ಪಾತ್ರ ನಿರ್ವಹಿಸುತ್ತಿವೆ ಎಂದು ವಿವರಿಸಿ ಸ್ಪರ್ಧಿಗಳಿಗೆ ಅಂತಿಮ ಹಂತದ ಸ್ಪರ್ಧೆಗೆ ಶುಭ ಹಾರೈಸಿದರು. ಸಹ ಪ್ರಾಧ್ಯಾಪಕಿ ಕ್ಯಾರೆಲ್ ಡಿ.ಮೆಲ್ಲೋ ಕಾರ್ಯಕ್ರಮ ನಿರೂಪಿಸಿದ್ದರು.

ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಆಂಡ್ ಮೆಶಿನ್ ಲರ್ನಿಂಗ್ ವಿಭಾಗದ ನುರಿತ ತಂತ್ರಜ್ಞರ ಮೂಲಕ ಭಾಗವಹಿಸುವ ತಂಡಗಳಿಗೆ ಪೂರಕ ಮಾರ್ಗದರ್ಶನ ನೀಡುವಲ್ಲಿ ಈ ತಂಡದಲ್ಲಿ ಕಾಲೇಜಿನ ಸಿ.ಎಸ್.ಇ ವಿಭಾಗದ ವಿನಯ್ ಪಿ, ಡಾ.ನಿಶ್ಚಯ್ ಕುಮಾರ್ ಹೆಗ್ಡೆ , ರಕ್ಷಿತ್ ಎಂ.ಡಿ, ಐ.ಎಸ್.ಇ ವಿಭಾಗದ ಅಜಿತ್ ಕುಮಾರ್ ಬಿ.ಪಿ, ಎ.ಐ.ಎಮ್ .ಎಲ್ ವಿಭಾಗದ ನಿತಿನ್ ಕುರುಪ್ ಯು.ಜಿ. ಸಿಜು.ವಿ.ಸೊಮನ್, ಪೂಜಾ ಎನ್.ಎಸ್, ಯೋಜನ ಕಿರಣ್ ಕುಮಾರ್, ಇ ಆಂಡ್ ಸಿಯ ಶ್ರೀರಾಮ ಸಮರ್ಥ ಕರ್ತವ್ಯ ನಿರ್ವಹಿಸಿದ್ದರು