Monday, January 20, 2025
ಸುದ್ದಿ

ಮೊಗ್ರು ಮುಗೇರಡ್ಕ ದೈವಸ್ಥಾನದ ವತಿಯಿಂದ ಜೈ ಶ್ರೀರಾಮ್ ಫ್ರೆಂಡ್ಸ್ ಕ್ಲಬ್ ಅಲೆಕ್ಕಿ ಶಿಶುಮಂದಿರಕ್ಕೆ ಸ್ಮಾರ್ಟ್ ಎಲ್.ಇ.ಡಿ ಟಿವಿ ಹಸ್ತಾಂತರ – ಕಹಳೆ ನ್ಯೂಸ್

ಬೆಳ್ತಂಗಡಿ : ಫೆ 01 ಬೆಳ್ತಂಗಡಿ ತಾಲೂಕು ಮೊಗ್ರು ಗ್ರಾಮದ ಮುಗೇರಡ್ಕ ದೈವಸ್ಥಾನದ ವತಿಯಿಂದ ಜೈ ಶ್ರೀರಾಮ್ ಫ್ರೆಂಡ್ಸ್ ಕ್ಲಬ್ ಅಲೆಕ್ಕಿ ಶಿಶುಮಂದಿರದ ವಿದ್ಯಾರ್ಥಿಗಳಿಗೆ ಧರ್ಮ ಶಿಕ್ಷಣ ಮತ್ತು ನೋಡಿ ಕಲಿ ಶಿಕ್ಷಣದ ಭಾಗವಾದ ಸ್ಮಾರ್ಟ್ ಕ್ಲಾಸ್ ಗೆ ಅನುಕೂಲವಾಗಲು ಈ ವರ್ಷ ಸ್ಮಾರ್ಟ್ ಎಲ್.ಇ.ಡಿ ಟಿವಿ ಮತ್ತು ಹೆಚ್.ಡಿ ಸೆಟ್ ಆಫ್ ಬಾಕ್ಸ್ (6 ತಿಂಗಳ ರಿಚಾರ್ಜ್ ಪ್ಯಾಕೇಜ್)ನ್ನು ಹಸ್ತಾಂತರಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಮುಗೇರಡ್ಕ ದೈವಸ್ಥಾನದ ಆಡಳಿತ ಮೊಕ್ತೇಶರರಾದ ರಾಮಣ್ಣ ಗೌಡ ದೇವಸ್ಯ ಗುತ್ತು, ಮನೋಹರ್ ಗೌಡ ಅಂತರ, ಸುಧಾಕರ್ ಗೌಡ ನೈಮಾರ್, ರಾಮಣ್ಣ ಗೌಡ ಎರ್ಮಲ,ಬಂದಾರು ಗ್ರಾಮ ಪಂಚಾಯತ್ ಸದಸ್ಯರಾದ ಬಾಲಕೃಷ್ಣ ಗೌಡ ಮುಗೇರಡ್ಕ,ಗಂಗಾಧರ ಪೂಜಾರಿ ದಂಬೆತ್ತಿಮಾರು,ಜೈ ಶ್ರೀರಾಮ್ ಫ್ರೆಂಡ್ಸ್ ಕ್ಲಬ್ ಇದರ ಅಧ್ಯಕ್ಷರಾದ ರಮೇಶ್ ನೆಕ್ಕರಾಜೆ,ಚಂದ್ರಹಾಸ ದೇವಸ್ಯ, ಸತ್ಯಪ್ರಕಾಶ್ ಉಂತನಾಜೆ, ವಿನಯ್, ವರುಣ್ ಮಾತಾಜಿ ಗೀತಾ ಹಾಗೂ ಮಕ್ಕಳು ಉಪಸ್ಥಿತರಿದ್ದರು

ಜಾಹೀರಾತು
ಜಾಹೀರಾತು
ಜಾಹೀರಾತು