Recent Posts

Monday, January 20, 2025
ದಕ್ಷಿಣ ಕನ್ನಡಬಂಟ್ವಾಳಸಂತಾಪ

ಅನಾರೋಗ್ಯದಿಂದ ಬಳಲುತ್ತಿದ್ದ ಬಿ.ಸಿ.ರೋಡಿನ ಶ್ರೀ ಹೋಟೆಲ್‌ ನ ಪಾಲುದಾರ ಮನೋಜ್ ಪೂಜಾರಿ ನಿಧನ – ಕಹಳೆ ನ್ಯೂಸ್

ಬಂಟ್ವಾಳ: ಬಿ.ಸಿ.ರೋಡಿನ ಶ್ರೀ ಹೋಟೆಲ್‌ನ ಪಾಲುದಾರ ಮನೋಜ್ ಪೂಜಾರಿ(38) ಅವರು ತಲೆಗೆ ಸಂಬಂಧಿ ಖಾಯಿಲೆಗೆ ತುತ್ತಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಫೆ. 2ರಂದು ನಡೆದಿದೆ.

ಸಜೀಪ ಕೋಟೆಕಣಿ ನಿವಾಸಿಯವರಾದ ಅವರು ಕಳೆದ ಕೆಲವು ದಿನಗಳಿಂದ ತಲೆನೋವು ಎಂದು ಹೇಳುತ್ತಿದ್ದು, ಜ. 29ರಂದು ಹೋಟೆಲ್‌ಗೆ ಆಗಮಿಸಿ ಕೆಲಸ ಮುಗಿಸಿ ತೆರಳಿದ್ದರು. ಆದರೆ ಮನೆಯಲ್ಲಿ ಬಿದ್ದು ಮೂರ್ಚೆ ಕಳೆದುಕೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಲ್ಲಿ ಕೆಲವು ದಿನಗಳ ಕಾಲ ಕೋಮ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆದರೆ ಇಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಿ.ಸಿ.ರೋಡಿನ ಶ್ರೀ ಹೋಟೆಲ್ ಊಟಕ್ಕೆ ವಿಶೇಷ ಖ್ಯಾತಿಯನ್ನು ಗಳಿಸಿದ್ದು, ಪ್ರತಿನಿತ್ಯ ನೂರಾರು ಗ್ರಾಹಕರು ನಿತ್ಯವೂ ಅದೇ ಹೋಟೆಲ್‌ನ ಊಟವನ್ನು ಇಷ್ಟಪಡುತ್ತಿದ್ದರು. ಮನೋಜ್ ಅವರು ಪ್ರತಿ ಗ್ರಾಹಕರನ್ನು ನಗುಮೊಗದಿಂದಲೇ ಬಹಳ ಪ್ರೀತಿಯಿಂದ ಉಪಚರಿಸುತ್ತಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಬಿ.ಸಿ.ರೋಡು ಶ್ರೀ ಅನ್ನಪೂರ್ಣೇಶ್ವರೀ ಸೇವಾ ಸಂಘದ ಕಾರ್ಯದರ್ಶಿಯಾಗಿದ್ದು, ಕೋಟೆಕಣಿ ಶ್ರೀರಾಮ ಮಂದಿರದಲ್ಲಿಯೂ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು.