Sunday, November 24, 2024
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಂಟ್ವಾಳ : ಅನಂತಾಡಿ ಗ್ರಾಮ ಪಂಚಾಯಿತಿಯಲ್ಲಿ ನರೇಗಾ ದಿವಸ ಆಚರಣೆ- ಕಹಳೆ ನ್ಯೂಸ್

ಬಂಟ್ವಾಳ : ನರೇಗಾ ದಿವಸದ ಅಂಗವಾಗಿ ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾಮ ಪಂಚಾಯಿತಿಯಲ್ಲಿ ರೋಜ್‌ಗಾರ್‌ ದಿನಾಚರಣೆ ನಡೆಯಿತು. ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ತಾಪಂ ಸಹಾಯಕ ನಿರ್ದೇಶಕರಾದ ವಿಶ್ವನಾಥ್‌ ಬಿ. ಮಾತನಾಡಿ, ಉದ್ಯೋಗ ಖಾತರಿ ಯೋಜನೆಯಡಿ ಅರ್ಜಿ ಸಲ್ಲಿಸಿ ಗ್ರಾಮದ ಅರ್ಹ ಫಲಾನುಭವಿಗಳು ಕಾಮಗಾರಿ ಕೈಗೊಳ್ಳಬೇಕು. ವರ್ಷದಲ್ಲಿ 100 ದಿನಗಳನ್ನು ಪೂರೈಸುವವರ ಸಂಖ್ಯೆ ಇನ್ನಷ್ಟು ಹೆಚ್ಚಾಗಬೇಕು. ಗ್ರಾಮ ಪಂಚಾಯತ್‌ ಕಾರ್ಯಕ್ರಮ, ಸಭೆಗಳಲ್ಲಿ ಜನರ ಭಾಗವಹಿಸುವಿಕೆ ಹೆಚ್ಚಾದಂತೆ ಸರ್ಕಾರದ ಯೋಜನೆ ಮಾಹಿತಿಯನ್ನು ಪಡೆಯಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ನರೇಗಾ ತಾಲೂಕು ಐಇಸಿ ಸಂಯೋಜಕ ರಾಜೇಶ್‌ ಮಾತನಾಡಿ, ನರೇಗಾ ಯೋಜನೆಯ ಆರಂಭ ಹಾಗೂ ಗ್ರಾಮಸ್ಥರು ಕೈಗೊಳ್ಳಬಹುದಾದ ಕಾಮಗಾರಿಗಳ ಬಗ್ಗೆ ತಿಳಿಸಿದರು. ಅಮೃತ ಆರೋಗ್ಯ ತಾಲೂಕು ಸಂಯೋಜಕರಾದ ಅಲ್ಲಾಭಕ್ಷ್‌, ಆಯುಷ್ಮಾನ್‌ ಕಾರ್ಡ್‌ ಮಾಡಿಸಿಕೊಳ್ಳುವುದು, ಅದರಿಂದ ಸಿಗುವ ಸವಲತ್ತುಗಳ ಮಾಹಿತಿ ನೀಡಿದರು. ಇದೇ ವೇಳೆ 2023-24ನೇ ಸಾಲಿನಲ್ಲಿ ವೈಯಕ್ತಿಕ ಕಾಮಗಾರಿ ಕೈಗೊಂಡು 100 ಮಾನವದಿನಗಳನ್ನು ಪೂರೈಸಿದ ಫಲಾನುಭವಿ ಮಾಲತಿ ಅವರಿಗೆ ಸಸಿ ವಿತರಿಸಲಾಯಿತು. ” ಹಸಿರೇ ಉಸಿರು” ಧ್ಯೇಯದಡಿ ಗ್ರಾಮ ಆವರಣದಲ್ಲಿ ಗಿಡ ನೆಡಲಾಯಿತು. ಗ್ರಾಪಂ ಉಪಾಧ್ಯಕ್ಷೆ ಸಂಧ್ಯಾ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಶಶಿಕಲಾ, ಪುರಂದರಗೌಡ ಹಾಗೂ ಗ್ರಾಪಂ ಸಿಬ್ಬಂದಿ ಕುಶಾಲ್, ಲಿಂಗಪ್ಪ ಟಿ., ಹರಿಣಾಕ್ಷಿ, ಸೇವಂತಿಕ ರೈ, ಮಮತಾ, ಸಂಜೀವಿನಿ ಒಕ್ಕೂಟದ ಎಂಬಿಕೆ ಪ್ರೇಮಲತಾ ಹಾಗೂ ಗ್ರಾಮಸ್ಥರು, ಭಾಗವಹಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು