Sunday, January 19, 2025
ಸುದ್ದಿ

ದಿಲ್ಲಿಯಲ್ಲಿ ಪಟಾಕಿ ಇಲ್ಲದ ದೀಪಾವಳಿ : ಸುಪ್ರೀಂ ಕೋರ್ಟ್‌ ನಿಷೇಧ.

ಹೊಸದಿಲ್ಲಿ : ದೀಪಾವಳಿಗೆ ಸಾಕಷ್ಟು ಮುನ್ನವೇ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಪಟಾಕಿ ಮಾರಾಟದ ಲೈಸನ್ಸ್‌  ಅಮಾನತು ಆದೇಶವನ್ನು ಸುಪ್ರೀಂ ಕೋರ್ಟ್‌ ಇಂದು ಸೋಮವಾರ ಎತ್ತಿ ಹಿಡಿದಿದೆ.
ದಿಲ್ಲಿಯಲ್ಲಿ  ಸುಡು ಮದ್ದುಗಳ ಮಾರಾಟ ಹಾಗೂ ದಾಸ್ತಾನನ್ನು 2017 ನವೆಂಬರ್‌ 1ರ ವರೆಗೆ ನಿಷೇಧಿಸಲಾಗಿದೆ.
ಕಳೆದ ವರ್ಷ ಸುಪ್ರೀಂ ಕೋರ್ಟ್‌, ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಆರ್‌) ಸುಡುಮದ್ದುಗಳ ಚಿಲ್ಲರೆ ಹಾಗೂ ರಖಂ ಮಾರಾಟ ಮತ್ತು ದಾಸ್ತಾನಿಗೆ ಅವಕಾಶ ನೀಡುವ ಎಲ್ಲ ಲೈಸನ್ಸ್‌ಗಳನ್ನು ಅಮಾನತುಮಾಡಿತ್ತು.
ಪಟಾಕಿ ಮಾರಾಟ ಹಾಗೂ ದಾಸ್ತಾನು ಲೈಸನ್ಸ್‌ಗಳನ್ನು ಅಮಾನತು ಮಾಡುವ ಆದೇಶದ ವಿರುದ್ಧ ಹಾಗೂ ಅದನ್ನು ತೆರವುಗೊಳಿಸಬೇಕು ಎಂಬ ಕೋರಿಕೆಯೊಂದಿಗೆ ಬಾಲಕ ಅರ್ಜುನ್‌ ಗೋಪಾಲ್‌ ಸುಪ್ರೀಂ ಕೋರ್ಟಿಗೆ ಮನವಿ ಮಾಡಿಕೊಂಡಿದ್ದ.
ಕಳೆದ ಅಕ್ಟೋಬರ್‌ 6ರಂದು ನ್ಯಾಯಮೂರ್ತಿಗಳಾದ ಎ ಕೆ ಸಿಕ್ರಿ, ಅಭಯ್‌ ಮನೋಹರ್‌ ಸಪ್ರ ಮತ್ತು ಅಶೋಕ್‌ ಭೂಷಣ್‌ ಅವರು ಎನ್‌ಸಿಆರ್‌ ವಲಯದಲ್ಲಿ ಪಟಾಕಿ ಮಾರಾಟ ಹಾಗೂ ದಾಸ್ತಾನನ್ನು ನಿಷೇಧಿಸುವ ಉನ್ನತ ನ್ಯಾಯಾಲಯದ ಆದೇಶವನ್ನು ಮರಳಿ ಊರ್ಜಿತಗೊಳಿಸುವ ನಿಟ್ಟಿನಲ್ಲಿ ತನ್ನ ತೀರ್ಪನ್ನು ಕಾದಿರಿಸಿತ್ತು.

ಜಾಹೀರಾತು

ಜಾಹೀರಾತು
ಜಾಹೀರಾತು

Leave a Response