Wednesday, January 22, 2025
ಸುದ್ದಿ

ದತ್ತು ಸ್ವೀಕಾರ: ದಂಪತಿಗೆ ಮಗು ಹಸ್ತಾಂತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಬೆಳಗಾವಿ: ಇಲ್ಲಿಯ ಸ್ವಾಮಿ ವಿವೇಕಾನಂದ ದತ್ತು ಸ್ವೀಕಾರ ಕೇಂದ್ರದ ಅಭಿರಕ್ಷಣೆಯಲ್ಲಿ ಇದ್ದ ಮಗುವನ್ನು CARA ನಿಯಮಗಳಂತೆ ಆಯ್ಕೆಯಾದ ದಂಪತಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಶನಿವಾರ ಹಸ್ತಾಂತರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕೇರಳ ರಾಜ್ಯದ ದತ್ತು ಪೋಷಕರಿಗೆ ಮೂರುವರೆ ತಿಂಗಳ ಗಂಡು ಮಗುವನ್ನು ಹಸ್ತಾಂತರಿಸಿದ ಸಚಿವರು, ಮಗುವನ್ನು ಅತ್ಯಂತ ಕಾಳಜಿಯಿಂದ ಸಾಕಿ ಸಲಹುವಂತೆ ವಿನಂತಿಸಿದರು.

ಮಗು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಾಮಿ ವಿವೇಕಾನಂದ ದತ್ತು ಸ್ವೀಕಾರ ಕೇಂದ್ರದ ಅಭಿರಕ್ಷಣೆಯಲ್ಲಿ ಇರಿಸಲಾಗಿತ್ತು.

ನಿಯಮಾವಳಿಯಂತೆ ಕಾನೂನು ಪ್ರಕ್ರಿಯೆಗಳನ್ನು ಪೂರೈಸಿ ಮಗುವನ್ನು ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಮಹಾಂತೇಶ್ ಭಜಂತ್ರಿ, ಸಚಿವರ ಮಾಧ್ಯಮ ಸಲಹೆಗಾರ ಎಂ.ಕೆ.ಹೆಗಡೆ, ವಿಶೇಷಾಧಿಕಾರಿ ರವೀಂದ್ರ ರತ್ನಾಕರ್, ಆರ್ ಆರ್. ನಾಡಗೌಡರ್, ಸಚಿನ್ ಹಿರೇಮಠ್ ಮೊದಲಾದವರು ಉಪಸ್ಥಿತರಿದ್ದರು.