Wednesday, January 22, 2025
ಸುದ್ದಿ

ಬಂಟ್ವಾಳದ ಬಿಜೆಪಿ ಮಂಡಲದ ಅಧ್ಯಕ್ಷರಾಗಿ ಚೆನ್ನಪ್ಪ ಕೋಟ್ಯಾನ್ ಆಯ್ಕೆ – ಕಹಳೆ ನ್ಯೂಸ್

ಬಂಟ್ವಾಳ : ಬಿಜೆಪಿ ಬಂಟ್ವಾಳ ಮಂಡಲದ ಅಧ್ಯಕ್ಷರಾಗಿ ಚೆನ್ನಪ್ಪ ಕೋಟ್ಯಾನ್ ಅವರನ್ನು ಅಯ್ಕೆ ಮಾಡಲಾಗಿದೆ.ಮಾಜಿ ಜಿ.ಪಂ.ಸದಸ್ಯ ಚೆನ್ನಪ್ಪ ಕೋಟ್ಯಾನ್ ಅವರು ಬಂಟ್ವಾಳ ಮಂಡಲದ ಅಧ್ಯಕ್ಷರಾಗಿ ಎರಡನೇ ಬಾರಿ ಆಯ್ಕೆಯಾಗಿದ್ದಾರೆ.


ಆರ್.ಎಸ್. ಎಸ್. ಕಾರ್ಯಕರ್ತನಾಗಿ ಸೇವೆ ಮಾಡಿದ ಕೋಟ್ಯಾನ್ ಅಬಳಿಕ ಬಿಜೆಪಿ ಪಕ್ಷದ ಸಕ್ರೀಯ ಕಾರ್ಯಕರ್ತನಾಗಿ ವಿವಿಧಮಜಲುಗಳಲ್ಲಿ ಕೆಲಸ ಮಾಡಿದ ಓರ್ವ ಅನುಭವಿಯನ್ನು ಮಂಡಲದ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತಾ.ಪಂ.ಸದಸ್ಯರಗಿ, ಮಂಡಲದ ಪ್ರಧಾನ ಕಾರ್ಯದರ್ಶಿಯಾಗಿ,ಬಂಟ್ವಾಳ ಮಂಡಲದ ಅಧ್ಯಕ್ಷರಾಗಿ,ಜಿ.ಪಂಸದಸ್ಯರಾಗಿ,ಕಲ್ಲಡ್ಕ ಶ್ರೀರಾಮ ಮಂದಿರದ ಅಧ್ಯಕ್ಷರಾಗಿ, ಪೂರ್ಲಿಪಾಡಿ ಶ್ರೀ ಅಣ್ಣಪ್ಪ ಪಂಜುರ್ಲಿ ಮಹಮ್ಮಾಯಿ ಅಮ್ಮನವರ ಸೇವಾ ಟ್ರಸ್ಟ್ ಅಧ್ಯಕ್ಷರಾಗಿ, ಶ್ರೀ ರಾಮವಿದ್ಯಾಕೇಂದ್ರದ ಅಡಳಿತ ಮಂಡಳಿಲ ಸದಸ್ಯ ರಾಗಿ ಅನುಭವ ಹೊಂದಿದ ಬಿಜೆಪಿ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

1990 ನೇ ಇಸವಿಯಲ್ಲಿ ಮುಲಾಯಂಸಿAಗ್ ಸರಕಾರದ ಸಮಯದಲ್ಲಿ ಅಯೋಧ್ಯೆಯ ಕರಸೇವೆಯಲ್ಲಿ ಭಾಗಿಯಾಗಿದ್ದಾರೆ.