Tuesday, January 21, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ನಂದನಹಿತ್ತಿಲು ಶ್ರೀ ವೈದ್ಯನಾಥ ಅರಸು ಜುಮಾದಿ ಬಂಟ ದೈವಸ್ಥಾನಕ್ಕೆ ನೂತನ ಕೊಡಿಮರ ಸಮರ್ಪಣೆ – ಕಹಳೆ ನ್ಯೂಸ್

ಬಂಟ್ವಾಳ : ನಂದನಹಿತ್ತಿಲು ಶ್ರೀ ವೈದ್ಯನಾಥ ಅರಸು ಜುಮಾದಿ ಬಂಟ ದೈವಸ್ಥಾನಕ್ಕೆ ಸಮರ್ಪಿಸಲಾಗುವ ನೂತನ ಕೊಡಿಮರದ (ಧ್ವಜ ಸ್ತಂಭ) ವೈಭವದ ಮೆರವಣಿಗೆ ಬಂಟ್ವಾಳ ನಗರದಲ್ಲಿ ನಡೆಯಿತು.

ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಗಣೇಶ್ ಸುವರ್ಣ ತುಂಬೆ ಅವರ ಸಾರಥ್ಯದಲ್ಲಿ ನಡೆದ ಮೆರವಣಿಗೆಯಲ್ಲಿ ಕೋಡಿಮರವನ್ನು ಇದೇ ಮೊದಲಿಗೆ 40 ಕ್ಕು ಹೆಚ್ಚು ಮಂದಿ ಯುವಕರು ಭಜದಲ್ಲಿರಿಸಿಕೊಂಡೆ ನಗರಪ್ರದಕ್ಷಿಣೆ ಹಾಕಿ ದೈವಸ್ಥಾನಕ್ಕೆ ತಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಬಂಟ್ವಾಳ ತ್ಯಾಗರಾಜರಸ್ತೆಯ ಕೀತಿಶೇಷ ಗುಂಡಿತೋಡಿ ಗಣಪತಿಕಾಮತ್ ಅವರ ಮನೆಯವರು ಈ ಕೋಡಿಮರವನ್ನು ದೈವಸ್ಥಾನಕ್ಕೆ ಉಚಿತವಾಗಿ ದಾನ ನೀಡಿದ್ದು,ಅಲ್ಲಿಂದ ತ್ಯಾಗರಾಜ ರಸ್ತೆಯ ಮೂಲಕ ತೆರಳಿ,ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರೆಗೆ ಸಾಗಿ ಅಲ್ಲಿಂದ ವಾಪಾಸ್ ರಥಬೀದಿಯಾಗಿ ಬಂದು ಮಾರ್ಕೆಟ್ ರಸ್ತೆ ಮೂಲಕ ಬಡ್ಡಕಟ್ಟೆ ಹನುಮಾನ್ ದೇವಸ್ಥಾನದವರೆಗೆ ತೆರಳಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಅಲ್ಲಿಂದ ವಾಪಸ್ ಅದೇ ರಸ್ತೆಯಾಗಿ ಬಂದು ತ್ಯಾಗರಾಜ ರಸ್ತೆ ಮೂಲಕ ಅಗಮಿಸಿ ದೈವಸ್ಥಾನದಲ್ಲಿ ಸಂಪನ್ನಗೊಂಡಿತು. ಬಳಿಕ ಕ್ಚೇತ್ರದ ತಂತ್ರಿಗಳಾದ ಪೆÇಳಲಿ ಗಿರಿಪ್ರಕಾಶ್ ತಂತ್ರಿಯವರ ಮಾರ್ಗದರ್ಶನದಲ್ಲಿ ವೈಧಿಕ ವಿಧಿವಿಧಾನದೊಂದಿಗೆ ತೈಲಾಧಿವಾಸ ಕಾರ್ಯಕ್ರಮ ನಡೆಯಿತು.

ಕುಣಿತ ಭಜನೆ, ಚೆಂಡೆ, ಪೂರ್ಣಕುಂಭ ಕಲಶದೊಂದಿಗೆ ಮಹಿಳೆಯರು ಹೆಜ್ಜೆ ಹಾಕಿದರು. ಕಣಿಯೂರು ಮಠದ ಶ್ರೀ ಮಹಾಬಲ ಸ್ವಾಮೀಜಿ , ಬಾಳಿಗಾ ಮನೆತನದ ಸುಧೀರ್ ಬಾಳಿಗಾ, ಕ್ಷೇತ್ರಕ್ಕೆ ಸಂಬಂಧಿಸಿದ ಮನೆತನದ ವಿಶ್ವನಾಥ ಪೂಜಾರಿ ಪೆÇನ್ನಂಗಿಲಗುತ್ತು, ಸಂಜೀವಪೂಜಾರಿ ಪೆಲತ್ತಿಮಾರು, ಲೋಕೇಶ್ ಬಂಗೇರ ಗಾಣದಪಡ್ಪು, ಲೋಕನಾಥ ಪೂಜಾರಿ ಬಡಕೊಟ್ಟು, ಧ್ವಜಸ್ತಂಭಕ್ಕಾಗಿ ಮರವನ್ನು ಉಚಿತವಾಗಿ ದಾನಗೈದ ಅವಿನಾಶ್ ಕಾಮತ್, ಪ್ರಮುಖರಾದ ಬಿ.ದೇವದಾಸ ಶೆಟ್ಟಿ, ರಾಮದಾಸ ಬಂಟ್ವಾಳ, ಬಾಬು ಶೆಟ್ಟಿ, ಶಿಲ್ಪಿ ಸದಾಶಿವ ಶೆಣೈ, ರವೀಂದ್ರ ಕಂಬಳಿ, ತಾರನಾಥ ಕೊಟ್ಟಾರಿ ತೇವು, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪ್ರಕಾಶ್ ಶೆಟ್ಟಿ ಶ್ರೀ ಶೈಲ, ಭುವನೇಶ್ ಪಚ್ಚಿನಡ್ಕ, ಅಮ್ಮು ಬಂಟ್ವಾಳ, ವಿಶ್ವನಾಥ ಬಿ., ಸದಾನಂದ ಪೂಜಾರಿ, ದೇವದಾಸ ಅಮೀನ್ ಬಂಟ್ವಾಳ, ಜಯ ಸುವರ್ಣ, ಶಿವಪ್ರಸಾದ್ ಕೊಟ್ಟಾರಿ, ಜಗನ್ನಾಥ ಸಾಲಿಯಾನ್ ತುಂಬೆ, ಅರುಣ್ ಕುಮಾರ್ ಬೊಳ್ಳಾರಿ, ಯೋಗೀಶ್ ಕೋಟ್ಯಾನ್ ತುಂಬೆ, ಸಂತೋμï ಕುಮಾರ್ ತುಂಬೆ, ಶೇಖರ್ ಮಂಡಾಡಿ, ಮಹಾಬಲ ಬಂಗೇರ, ಗೋಪಾಲಕೃಷ್ಣ ,ಅಶ್ವಿತ್ ಮೊದಲಾದವರು ಉಪಸ್ಥಿತರಿದ್ದರು.