ಗುರುಪುರ : ಗುರುಪುರದ ಅಲೈಗುಡ್ಡೆಯಲ್ಲಿ ನವೀಕರಿಸಲಾದ ಹಿಂದೂ ರುದ್ರಭೂಮಿ `ಮುಕ್ತಿಧಾಮ’ವನ್ನು ಕ್ಷೇತ್ರದ ಶಾಸಕರಾದ ಡಾ.ಭರತ್ ಶೆಟ್ಟಿ ವೈ ಉದ್ಘಾಟಿಸಿದರು.
ಈ ಸೇವಾ ಕಾರ್ಯದಲ್ಲಿ ಕೈಜೋಡಿಸಿರುವ ಪಂಚಾಯತ್ ಮತ್ತು ಊರಿನವರ ಶ್ರಮವನ್ನು ಶಾಸಕರು ಅಭಿನಂದಿಸಿದರು. ಈ ಸಂದರ್ಭದಲ್ಲಿ ಲಕ್ಷ್ಮಣ ಶೆಟ್ಟಿ , ಗುರುಪುರ ಪಂಚಾಯತ್ ಅಧ್ಯಕ್ಷೆ ಸಫರಾ ಎನ್, ನಿರ್ವಹಣಾ ಸಮಿತಿ ಅಧ್ಯಕ್ಷ ವಿಷ್ಣು ಕಾಮತ್,ರುದ್ರಭೂಮಿ ಸಮಿತಿ ಕಾರ್ಯದರ್ಶಿ ಪಾಂಡುರ0ಗ ಕಾಮತ್, ಪಂಚಾಯತ್ ಸದಸ್ಯರಾದ ಜಿ. ಎಂ. ಉದಯ ಭಟ್, ರಾಜೇಶ್ ಸುವರ್ಣ, ಯಶವಂತ ಶೆಟ್ಟಿ, ಸಚಿನ್ ಅಡಪ, ಹೋಟೆಲ್ ಉದ್ಯಮಿ ಸುಧೀರ್ ಕಾಮತ್,ಹಾಗೂ ಪಂಚಾಯತ್ ಸದಸ್ಯರು,ಬಿಜೆಪಿ ಮುಖಂಡರು,ಪದಾಧಿಕಾರಿಗಳು, ಕಾರ್ಯಕರ್ತರು,ಗ್ರಾಮಸ್ಥರು ಉಪಸ್ಥಿತರಿದ್ದರು.