Monday, January 20, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಬಡವರ ಮನೆ‌ ಮೇಲೆ ಹಾಕಿರುವ ವಿದ್ಯುತ್ ತಂತಿಗಳನ್ನು ತೆರವು ಮಾಡಿ : ಇಂಧನ‌ ಸಚಿವರಿಗೆ ಶಾಸಕ ಅಶೋಕ್ ರೈ ಮನವಿ : ಶೀಘ್ರ‌ ಕ್ರಮಕೈಗೊಳ್ಳಲು ಇಂಧನ ಸಚಿವರ ಸೂಚನೆ– ಕಹಳೆ ನ್ಯೂಸ್

ಪುತ್ತೂರು: ಬಡವರ ಮನೆಯ ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿಗಳನ್ನು ಇಲಾಖೆಯ ಖರ್ಚಿನಲ್ಲೇ ತೆರವು ಮಾಡಬೇಕು, ಮನೆಯ ಮೇಲೆ ತಂತಿ ಹೋಗಿರುವ ಕಾರಣ ಸಮಸ್ಯೆ ಯಾಗಿದ್ದು ಶೀಘ್ರತೆರವು ಮಾಡಬೇಕು‌ಎಂದು ಶಾಸಕರಾದ ಅಶೋಕ್ ರೈ ಯವರು ಇಂಧನ‌ಸಚಿವರಾದ ಕೆ ಜೆ ಜಾರ್ಜ್ ಬಳಿ ಕೇಳಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಶಾಸಕರ ಪ್ರಶ್ನೆಗೆ ವಿವರಣೆ ನೀಡಿದ ಕೆಪಿಟಿಸಿಎಲ್ ಎಂ ಡಿ ಪಂಕಜ್ ಪಾಂಡೆಯವರು ಮನೆ ಕಟ್ಟಿದ ಮೇಲೆ ತಂತಿ ಎಳೆದಿಲ್ಲ, ತಂತಿಯ ಅಡಿಯಲ್ಲೇ ಮನೆ ಕಟ್ಟಿದ್ದಾರೆ ಎಂಬ ಮಾಹಿತಿ‌ನೀಡಿದರು. ಇದಕ್ಕೆ ಪ್ರತ್ಯುತ್ತರ ನೀಡಿದ ಶಾಸಕರು ಬಡವರಲ್ಲಿ ಇರುವುದೇ 5.ರಿಂದ 10 ಸೆಂಟ್ಸ್ ಜಾಗ. ಅದರಲ್ಲೇ ನೀವು ಲೈನ್ ಎಳೆದರೆ ಅವರು ಎಲ್ಲಿ‌ಮನೆ ಕಟ್ಟಬೇಕು. ಇದು ಮೆಸ್ಕಾಂ ನವರದ್ದೇ ಸಮಸ್ಯೆ. ಬಡವರ ಮನೆ ಮೇಲೆ ಹಾದು ಹೋಗಿರುವ ಎಲ್ಲಾ ತಂತಿಗಳನ್ನು ತೆರವು ಮಾಡಲೇಬೇಕು ಎಂದು ಹೇಳಿದರು.‌ ಇದಕ್ಕೆ ಉತ್ತರಿಸಿದ ಸಚಿವರಾದ ಕೆ ಜೆ ಜಾರ್ಜ್ ಅವರು ದೊಡ್ಡ ಸಮಸ್ಯೆಗಳಿರುವ ಮನೆಗಳನ್ನು ಪಟ್ಟಿ ಮಾಡಿ ಕ್ರಮಕೈಗೊಳ್ಳಿ ಎಂದು ಅಧಿಕಾರಿಗೆ ಸೂಚನೆ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು