Recent Posts

Thursday, November 21, 2024
ಕ್ರೈಮ್ದಕ್ಷಿಣ ಕನ್ನಡರಾಜ್ಯಸುದ್ದಿ

ಬೆಂಗಳೂರಿನ ಹಿಂದು ಯುವತಿ, ಅನ್ಯಮತೀಯ ಯುವಕ ಪಣಂಬೂರು ಬೀಚ್ ಗೆ ಭೇಟಿ – ಸಾರ್ವಜನಿಕ ಸ್ಥಳದಲ್ಲಿ ಅನುಚಿತ ವರ್ತನೆ ಆರೋಪ ; ಪ್ರಶ್ನಿಸಿದ ಬೆಳ್ತಂಗಡಿಯ ಹಿಂದು ಯುವಕರ ವಿರುದ್ಧ ಖಾಸಗಿತನಕ್ಕೆ ಧಕ್ಕೆ, ನೈತಿಕ ಗೂಂಡಾಗಿರಿ ಆರೋಪ, ಪಣಂಬೂರು ಠಾಣೆಯಲ್ಲಿ ಪ್ರಕರಣ – ಕಹಳೆ ನ್ಯೂಸ್

ಮಂಗಳೂರು, ಫೆ 06 : ಮಂಗಳೂರಿನ ಪಣಂಬೂರು ಬೀಚ್ ನಲ್ಲಿ ನೈತಿಕ ಗೂಂಡಾಗಿರಿ ನಡೆದ ಆರೋಪ, ಈ ಬಗ್ಗೆ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬಗ್ಗೆ ಬೆಂಗಳೂರಿನ ಹಿಂದು ಯುವತಿ ಪಣಂಬೂರು ಠಾಣೆಗೆ ದೂರು ನೀಡಿದ್ದು ಪೊಲೀಸರು ನಾಲ್ವರು ಯುವಕರನ್ನು ಬಂಧಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಂಧಿತರನ್ನು ಬಂಟ್ವಾಳ ಪಿಲಾತಬೆಟ್ಟು ನಿವಾಸಿ ಪ್ರಶಾಂತ ಭಂಡಾರಿ (38), ಬೆಳ್ತಂಗಡಿ ಕರಾಯ ನಿವಾಸಿ ಉಮೇಶ್ (23), ಬೆಳ್ತಂಗಡಿ ಪುತ್ತಿಲ ನಿವಾಸಿ ಸುಧೀರ್ (26), ಬೆಳ್ತಂಗಡಿ ಮಚ್ಚಿ‌ನ ನಿವಾಸಿ ಕೀರ್ತನ್ ಪೂಜಾರಿ (20) ಎಂದು ಗುರುತಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅನ್ಯಮತೀಯ ಯುವಕ ಮತ್ತು ಹಿಂದು ಯುವತಿ ಸಾರ್ವಜನಿಕ ಸ್ಥಳ ದ ಲ್ಲಿ ಅನುಚಿತ ವರ್ತನೆ ಮಾಡುತ್ತಿದ್ದಾಗ ಅವರನ್ನು ತಡೆದ ಹಿಂದು ಯುವಕರು ಪ್ರಶ್ನಿಸಿದ್ದು, ಅಡ್ಡಗಟ್ಟಿ ಹಲ್ಲೆಗೆ ಯತ್ನಿಸಿ ಡಿಯೋ ಮಾಡಿದ್ದಾರೆ ಎಂಬ ಆರೋಪ. ‌ಆ ಬಳಿಕ ಪಣಂಬೂರು ಪೊಲೀಸರು ಸ್ಥಳಕ್ಕಾಗಮಿಸಿ, ಪರಿಸ್ಥಿತಿ ತಿಳಿಗೊಳಿಸಿ ಯುವಕರನ್ನು ವಶಕ್ಕೆ ಪಡೆದಿದ್ದಾರೆ.

ಇನ್ನು ಯುವತಿ ನೀಡಿದ ದೂರಿನಲ್ಲಿ, ಮಲ್ಪೆಗೆ ತೆರಳುತ್ತಿದ್ದಾಗ ಪರಿಚಯದ ಯುವಕ ಸಿಕ್ಕಿದ್ದು ಪಣಂಬೂರು ಬೀಚ್ ಗೆ ಭೇಟಿಯಾಗಿದ್ದೆ. ಆತನಿಗೆ ಸಾಹಿತ್ಯ ಕ್ಷೇತ್ರದಲ್ಲಿ ಪ್ರಶಸ್ತಿ ಬಂದಿದ್ದರಿಂದ ಅಭಿನಂದಿಸಲು ಹೋಗಿದ್ದೆ. ನಾವು ಜೊತೆಗೆ ಇದ್ದುದಕ್ಕೆ ಯುವಕರು ಬೈದು ಅಡ್ಡಗಟ್ಟಿ ನಮ್ಮ ಖಾಸಗಿತನಕ್ಕೆ ಧಕ್ಕೆ ತಂದಿದ್ದಾರೆ ಎಂದು ತಿಳಿಸಿದ್ದಾರೆ.