ಬಾರೆಬೆಟ್ಟುವಿನ ಶ್ರೀಮಲರಾಯಿ ಮಂಟಮೆ ಕಾಲಾವಧಿ ಜಾತ್ರೆ ಪ್ರಯುಕ್ತ ಪುತ್ತೂರು ಸಾಯಿ ಕಲಾ ಯಕ್ಷ ಬಳಗದವರಿಂದ ನಡೆದ “ಕೊಲ್ಲೂರು ಕ್ಷೇತ್ರ ಮಹಾತ್ಮೆ” ಯಕ್ಷಗಾನ ಬಯಲಾಟ – ಕಹಳೆ ನ್ಯೂಸ್
ಬಂಟ್ವಾಳ ತಾಲೂಕಿನ ಕೊಳ್ನಾಡು ಬಾರೆಬೆಟ್ಟುವಿನ ಶ್ರೀಮಲರಾಯಿ ಮಂಟಮೆ ದೈವಸ್ಥಾನದ ಕಾಲಾವಧಿ ಜಾತ್ರೆ ಫೆ.02ರಿಂದ ಫೆ.03ರವೆರೆಗೆ ನಡೆಯಿತು.
ಕಾಲಾವಧಿ ಜಾತ್ರೆ ಪ್ರಯುಕ್ತ ಫೆ.03ರಂದು ಪುತ್ತೂರು ಸಾಯಿ ಕಲಾ ಯಕ್ಷ ಬಳಗ ಬಾಲವನ ಇವರಿಂದ ಗುರುಗಳಾದ ಬಾಲಸುಬ್ರಹ್ಮಣ್ಯ ಭಟ್ ಗುತ್ತಿಗಾರು ಇವರ ನಿರ್ದೇಶನದ “ಕೊಲ್ಲೂರು ಕ್ಷೇತ್ರ ಮಹಾತ್ಮೆ” ಎಂಬ ಯಕ್ಷಗಾನ ಬಯಲಾಟ ನಡೆಯಿತು.
ಬಳಿಕ ಗುರುಗಳಾದ ಬಾಲಸುಬ್ರಹ್ಮಣ್ಯ ಭಟ್ ಗುತ್ತಿಗಾರು ಇವರ ಹಾಗೂ ಪ್ರೇಮಾ ಕಿಶೋರ್ ಅವರಿಗೆ ಶಾಲು ಹೊದಿಸಿ, ಫಲಪುಷ್ಪ ನೀಡಿ ಸನ್ಮಾನಿಸಲಾಯಿತು. ಹಾಗೂ ಎಲ್ಲಾ ಕಲಾವಿದರಿಗೆ ಶಾಲು ಹೊದಿಸಿ, ಗೌರವಿಸಲಾಯಿತು. ಈ ಸಂಧರ್ಭದಲ್ಲಿ ಬಾರೆಬೆಟ್ಟುವಿನ ಶ್ರೀಮಲರಾಯಿ ದೈವಸ್ಥಾನದ ಆಡಳಿತ ಮಂಡಳಿಯ ಸರ್ವಸದಸ್ಯರು ಉಪಸ್ಥಿತರಿದ್ದರು.