Recent Posts

Monday, January 20, 2025
ದಕ್ಷಿಣ ಕನ್ನಡಸುದ್ದಿ

ಮಂಗಳೂರು: ಸಾರ್ವಜನಿಕ ರಸ್ತೆ ಬದಿಯಲ್ಲಿ ಮಾದಕ ವಸ್ತುಗಳ ಮಾರಾಟ : ಇಬ್ಬರು ಅರೆಸ್ಟ್.! – ಕಹಳೆ ನ್ಯೂಸ್

ಮಂಗಳೂರು : ಸಾರ್ವಜನಿಕ ರಸ್ತೆ ಬದಿಯಲ್ಲಿ ಮಾದಕ ವಸ್ತುಗಳ ಮಾರಾಟದಲ್ಲಿ ತೊಡಗಿದ್ದ ಇಬ್ಬರನ್ನು ಕೇಂದ್ರ ಉಪ- ವಿಭಾಗ ಆ್ಯಂಟಿ ಡ್ರಗ್ ತಂಡದ ಅಧಿಕಾರಿ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಅತ್ತಾವರದ ಆದಿತ್ಯ ಕೆ (29), ಅಡ್ಯಾರ್ ಪದವು ನಿವಾಸಿ ರೋಹನ್ ಸಿಕ್ವೇರಾ (33) ಬಂಧಿತರು. ಬಂಧಿತರಿಂದ ಸುಮಾರು ರೂ 50,000 ಮೌಲ್ಯದ 27 ಗ್ರಾಂ ಹೈಡೋವೀಡ್ ಗಾಂಜಾ, ಸುಮಾರು ರೂ 1,00,000 ಮೌಲ್ಯದ 2 ಕೆಜಿ 95 ಗ್ರಾಂನ ಗಾಂಜಾ, ರೂ. 8000 ಮೌಲ್ಯದ ಗಾಂಜಾ ಆಪ್ ಆಯಿಲ್, ರೂ,16,800 ಮೌಲ್ಯದ ಎಲ್.ಎಸ್.ಡಿ ಸ್ಟಾಂಫ್. ಡಿಜಿಟಲ್ ತೂಕ ಮಾಪನಗಳು-2, ಕೃತ್ಯಕ್ಕೆ ಬಳಸಿದ ರೂ 90,000 ಮೌಲ್ಯದ ಎರಡು ಮೊಬೈಲ್ ಫೋನ್ ಮತ್ತು ರೂ 20 ಲಕ್ಷ ಮೌಲ್ಯದ ಕಪ್ಪು ಬಣ್ಣದ ಹುಂಡೈ ಕಂಪೆನಿಯ ವರ್ನ ಮಾಡೆಲ್ ನ ಕಾರು- 1 ಮತ್ತು ಇತರ ಸೊತ್ತುಗಳನ್ನು ಸ್ವಾದೀನಪಡಿಸಿಕೊಳ್ಳಲಾಗಿದ್ದು, ಆರೋಪಿಗಳ ವಿರುದ್ಧ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಎನ್ ಡಿ ಪಿ ಎಸ್ ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿ ತನಿಖೆ ನಡೆಸಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಾಚರಣೆಯನ್ನು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಅವರ ರವರ ನಿರ್ದೇಶನದಂತೆ, ಸಿದ್ದಾರ್ಥ್ ಗೋಯಲ್ ಐ.ಪಿ.ಎಸ್ ಉಪ ಪೊಲೀಸ್ ಆಯುಕ್ತರು ( ಕಾನೂನು ಸುವ್ಯವಸ್ಥೆ), ದಿನೇಶ್ ಕುಮಾರ್ ಉಪ ಪೊಲೀಸ್ ಆಯುಕ್ತರು (ಅಪರಾಧ ಮತ್ತು ಸಂಚಾರ) ರವರ ಮಾರ್ಗದರ್ಶನದಲ್ಲಿ, ಕೇಂದ್ರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಪ್ರತಾಪ್ ಸಿಂಗ್ ತೋರಟ್ ರವರ ನೇತೃತ್ವದಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣೆಯ ನಿರೀಕ್ಷಕರಾದ ಅಜ್ಜತ್ ಆಲಿ ಮತ್ತು ಆ್ಯಂಟಿ ಡ್ರಗ್ ತಂಡದ ಕೇಂದ್ರ ಉಪ ವಿಭಾಗದ ಅಧಿಕಾರಿ ಪಿಎಸ್ ಐ ಪ್ರದೀಪ್ ಟಿ ಆರ್ ಮತ್ತು ಸಿಬ್ಬಂದಿಗಳು ನಡೆಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು