Sunday, November 24, 2024
ಸುದ್ದಿ

ಹುಬ್ಬಳ್ಳಿಯಲ್ಲಿ ನಡೆದ ಮಹಾ ಸ್ವಚ್ಛತೆ ಅಭಿಯಾನ ಕಾರ್ಯಕ್ರಮ : 2500 ಟನ್ ತ್ಯಾಜ್ಯ ಸಂಗ್ರಹಿಸಿದ 15 ಸಾವಿರ ಶ್ರೀ ಸದಸ್ಯರು – ಕಹಳೆ ನ್ಯೂಸ್

ಹುಬ್ಬಳ್ಳಿ : ಡಾ. ಶ್ರೀ ನಾನಾ ಸಾಹೇಬ್ ಧರ್ಮಧಿಕಾರಿ ಪ್ರತಿಷ್ಠಾನದ ಮುಖ್ಯಸ್ಥರಾದ ಪದ್ಮಶ್ರೀ ಅಪ್ಪ ಸಾಹೇಬ್ ಧರ್ಮಾಧಿಕಾರಿ ಮತ್ತು ಡಾ. ಶ್ರೀ ಸಚಿನ್ ದಾದಾ ಧರ್ಮಾಧಿಕಾರಿ ಇವರ ಮಾರ್ಗದರ್ಶನದಲ್ಲಿ ಮಹಾ ಸ್ವಚ್ಛತೆ ಅಭಿಯಾನ ಕಾರ್ಯಕ್ರಮ ಹುಬ್ಬಳ್ಳಿಯಲ್ಲಿ ನಡೆಯಿತು.

ಮಾನವಿ ನೀತಿ ಮೂಲ್ಯಗಳ ಜೋಪಾಸನೆ ಎಂಬ ಮೂಲ ಮಂತ್ರದೊಂದಿಗೆ ಎಲ್ಲರಿಗೂ ಆರೋಗ್ಯ ಎಲ್ಲೆಡೆಯು ಸ್ವಚ್ಛತೆ ಎಂಬ ಅಭಿಯಾನದೊಂದಿಗೆ ಸುಮಾರು 164 ಸ್ಥಳಗಳಲ್ಲಿ 15 ಸಾವಿರ ಶ್ರೀ ಸದಸ್ಯರು ಸೇರಿ ಸ್ವಚ್ಛತೆ ಅಭಿಯಾನ ಕಾರ್ಯಕ್ರಮ ನಡೆಸಿ, ಸುಮಾರು 2500 ಟನ್ ತ್ಯಾಜ್ಯ ಸಂಗ್ರಹಣೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಷ್ಠಾನದ ಮುಖ್ಯಸ್ಥ ಸಚಿನ್ ದಾದಾ ಧರ್ಮಾಧಿಕಾರಿ ಆದ್ಯಾತ್ಮಿಕ ನಿರೂಪಣೆ ಮತ್ತು ಆರೋಗ್ಯ ಸಮಾಜದ ಲಕ್ಷಾಂತರ ಕುಟುಂಬಗಳ ನಿರ್ಮಾಣ ಮತ್ತು ನಿರ್ವಹಣೆ ಕೈಗೆತ್ತಿಕೊಂಡು ಕೋಟ್ಯಂತರ ಶ್ರೀ ಸದಸ್ಯರ ಬದುಕಿನಲ್ಲಿ ಸಮಾಧಾನ ತಂದು ಕೊಡುವಲ್ಲಿ ಪ್ರತಿಷ್ಠಾನ ಸುಮಾರು 75 ವರ್ಷಗಳಿಂದ ತನ್ನ ಸಾಮಾಜಿಕ ಸೇವಾ ಕಳಕಳಿಯ ಕಾರ್ಯಕ್ರಮ ನಡೆಸುತ್ತಿದ್ದು, ನಾವು ಅನುಸರಿಸಿದಾಗ ಸಮಾಜದಲ್ಲಿ ಬದಲಾವಣೆ ಕಾಣಬಹುದು, ರಾಷ್ಟ್ರ ಸೇವೆ ನಮ್ಮೆಲ್ಲರ ಕರ್ತವ್ಯ, ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇತ್ತೀಚಿಗೆ ಪ್ರತಿಷ್ಠಾನ ಶಿಂಗಾಪುರ್ ನಲ್ಲಿ ನಡೆಸಿಕೊಟ್ಟ ಸ್ವಚ್ಚತಾ ಕಾರ್ಯಕ್ರಮದ ಮಾದರಿ, ಮ್ಯಾಪ್ ಮೂಲಕ ತಂತ್ರಜ್ಞಾನದ ಅಳವಡಿಕೆ ಮಾಡಿ, ಸುಮಾರು 15000 ಶ್ರೀಸದಸ್ಯರ ಮತ್ತು ಸಾವಿರಾರು ನಾಗರಿಕರೊಂದಿಗೆ ಯಶಸ್ವಿ ಮಾದರಿ ಕಾರ್ಯಕ್ರಮದ ಉದ್ಘಾಟನೆಯನ್ನು ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಶಿ ನಡೆಸಿಕೊಟ್ಟರು.

ವಿವಿಧ ಬಡಾವಣೆ, ಕೆರೆಗಳು, ರೈಲು ನಿಲ್ದಾಣ, ಬಸ್ ನಿಲ್ದಾಣಗಳು, ಮಾರುಕಟ್ಟೆಗಳು, ಪೆÇಲೀಸ್ ಠಾಣೆಗಳು, ಆಸ್ಪತ್ರೆಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು.
ಕರ್ನಾಟಕ ಮಹಾರಾಷ್ಟ್ರ ಮತ್ತು ಗೋವಾದ ಶ್ರೀ ಸದಸ್ಯರು ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಮಹಾಪೌರ ವೀಣಾ ಬರದ್ವಾಡ, ಉಪ ಮಹಾಪೌರ ಸತೀಶ ಹಾನಗಲ್ಲ ಇನ್ನಿತರರು ಸ್ವಚ್ಛತಾ ಕಾರ್ಯದಲ್ಲಿ ಉಪಸ್ಥಿತರಿದ್ದರು.