Tuesday, January 21, 2025
ದಕ್ಷಿಣ ಕನ್ನಡಸುದ್ದಿ

ಕೆಲಿಂಜ ಶ್ರೀಉಳ್ಳಾಲ್ತಿ ದೈವಸ್ಥಾನದ ವರ್ಷಾವಧಿ ಮೆಚ್ಚಿ ಜಾತ್ರೆಯ ಗೊನೆ ಮುಹೂರ್ತ- ಕಹಳೆ ನ್ಯೂಸ್

ಇತಿಹಾಸ ಪ್ರಸಿದ್ಧ ಕೆಲಿಂಜ ಶ್ರೀ ಉಳ್ಳಾಲ್ತಿ ದೈವಸ್ಥಾನದಲ್ಲಿ ಫೆಬ್ರವರಿ 14 (ಕುಂಭ ಸಂಕ್ರಮಣ) ದಂದು ವರ್ಷಾವಧಿ ಮೆಚ್ಚಿ ಜಾತ್ರೆ ನಡೆಯಲಿದ್ದು, ಈ ಪ್ರಯುಕ್ತ ಇಂದು ಪುಂಡಿಕಾಯಿ ಮನೆಯಲ್ಲಿ ಗೊನೆ ಮುಹೂರ್ತ ಕಾರ್ಯಕ್ರಮ ನಡೆಯಿತು.

ಪುಂಡಿಕಾಯಿ ಮನೆಯಲ್ಲಿ ಗೊನೆ ಮುಹೂರ್ತ ನಡೆಯಿತು. ಬಳಿಕ ಪುಂಡಿಕಾಯಿ ಮನೆಯಿಂದ ಕೆಲಿಂಜ ಶ್ರೀ ಉಳ್ಳಾಲ್ತಿ ಅಮ್ಮನವರ ಸನ್ನಿಧಿಗೆ ಭಕ್ತಾದಿಗಳು ಆಗಮಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಗೊನೆ ಮುಹೂರ್ತ ಕಾರ್ಯಕ್ರಮದಲ್ಲಿ ಉಳ್ಳಾಲ್ತಿ ಅಮ್ಮನವರ ಸನ್ನಿಧಾನದ ಆಡಳಿತ ಮೊಕ್ತೇಸರಾದ ಶಂಕರ ನಾರಾಯಣ ಭಟ್ ಪುಂಡಿಕಾಯಿ, ಅನುವಂಶಿಕ ಮೊಕ್ತೇಸರಾದ ಬೆಂಞಣ್ತಿಮಾರ್ ಗುತ್ತು ಗಿರಿಧರ ರೈ, ಕೆಲಿಂಜ ಊರಿನ ಹಿರಿಯರು, ಗ್ರಾಮಸ್ಥರು ಉಪಸ್ಥಿತರಿದ್ದರು. ಗೊನೆ ಮುಹೂರ್ತ ಕಾರ್ಯಕ್ರಮದ ಬಳಿಕ ದೈವಸ್ಥಾನದಲ್ಲಿ ಕೋಳಿ ಗುಂಟ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು