Friday, September 20, 2024
ಸುದ್ದಿ

ವ್ಯಕ್ತಿಯನ್ನು ಕಲ್ಲೆಸೆದು ಕೊಂದ ಮಂಗಗಳು – ಕಹಳೆ ನ್ಯೂಸ್

ಭಾಗಪತ್: ಮಂಗಗಳೇ ಮಾನವನನ್ನು ಕಲ್ಲು ಎಸೆದು ಕೊಂದ ಘಟನೆ ಎಲ್ಲಿಯಾದರೂ ನಡೆದದ್ದು ಉಂಟೇ? ವಿಚಿತ್ರವಾದರೂ ಸತ್ಯ ಘಟನೆ ಉತ್ತರ ಪ್ರದೇಶದ ಭಾಗಪತ್ ಜಿಲ್ಲೆಯ ಟಿಕ್ರಿ ಗ್ರಾಮದಲ್ಲಿ ನಡೆದಿದೆ.

ಧರ್ಮಪಾಲ್ (72) ಎಂಬವರು ಹವನಕ್ಕೋಸ್ಕರ ಕಟ್ಟಿಗೆಗಳನ್ನು ಸಂಗ್ರಹಿಸಲು ತಮ್ಮ ಗ್ರಾಮದಲ್ಲಿ ಶಿಥಿಲವಾಗಿ ಬಿದ್ದಿದ್ದ ಕಟ್ಟಡದ ಸಮೀಪಕ್ಕೆ ತೆರಳಿದ್ದರು. ಅಲ್ಲಿಗೆ ಹೋಗಿ ಕಟ್ಟಿಗೆ ಸಂಗ್ರಹಿಸುತ್ತಿದ್ದಾಗ ಮಂಗಗಳು ಅವರನ್ನು ಗುರಿಯಾಗಿಸಿಕೊಂಡು ಇಟ್ಟಿಗೆ ಎಸೆದಿವೆ. ತಲೆಗೆ, ಎದೆಗೆ ಇಟ್ಟಿಗೆ ಬಿದ್ದು ಗಾಯಗಳಾಗಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೂಕ್ತ ಚಿಕಿತ್ಸೆ ನೀಡಿದರೂ ಅವರನ್ನ ಉಳಿಸುವಲ್ಲಿ ವೈದ್ಯ ಲೋಕ ವಿಫಲವಾಯಿತು.

ಜಾಹೀರಾತು