Tuesday, April 8, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಕುಟುಂಬ ಸಮೇತರಾಗಿ ಅಯೋಧ್ಯೆಗೆ ಬೇಟಿ ನೀಡಿ, ಪ್ರಭು ಶ್ರೀರಾಮಚಂದ್ರನ ದರ್ಶನ ಪಡೆದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು – ಕಹಳೆ ನ್ಯೂಸ್

ಬಂಟ್ವಾಳ: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಕುಟುಂಬ ಸಮೇತರಾಗಿ ಅಯೋಧ್ಯೆಗೆ ಬೇಟಿ ನೀಡಿ ಶ್ರೀರಾಮ ದೇವರ ಆಶೀರ್ವಾದ ಪಡೆದಿದ್ದಾರೆ.

ಶ್ರೀರಾಮಚಂದ್ರನ ಜನ್ಮಭೂಮಿ ಅಯೋಧ್ಯೆಯಲ್ಲಿ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀ ಪಾದರ ನೇತೃತ್ವದಲ್ಲಿ ನಡೆಯುತ್ತಿರುವ 48 ದಿನಗಳ ಮಂಡಲೋತ್ಸವದ ಅಂಗವಾಗಿ ಇಂದು ನಡೆದ ಕಲಶಾರಾಧನೆ ಮತ್ತು ಕಲಶಾಭಿಷೇಕದ ಪುಣ್ಯ ಕಾರ್ಯದಲ್ಲಿ ಸೇವಾಕರ್ತರಾಗಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ರವರು ಕುಟುಂಬ ಸಮೇತರಾಗಿ ಭಾಗವಹಿಸಿ ಶ್ರೀರಾಮನ ಸೇವಾಗೈದು, ಶ್ರೀರಾಮನ ಆಶೀರ್ವಾದ ಪಡೆದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಶಾಸಕರ ಪತ್ನಿ ಉಷಾ ಆರ್.ನಾಯಕ್, ಪುತ್ರ ಉನ್ನತ್ ನಾಯಕ್,ಸೊಸೆ ಶ್ರೀಶಾ ನಾಯಕ್ ಅವರು ಕೂಡ ಪೂಜೆಯಲ್ಲಿ ಭಾಗಿಯಾಗಿ ದೇವರ ಆಶೀರ್ವಾದ ಪಡೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಶಾಸಕರ ಪುತ್ರನ ಮದುವೆಯ ಬಳಿಕ ಪ್ರಥಮ ಕಾರ್ಯಕ್ರಮ, ಕುಟುಂಬ ಸಮೇತರಾಗಿ ಆಯೋಧ್ಯೆ ಬೇಟಿ ಮಾಡಿ ದೇವರ ಆಶ್ರೀರ್ವಾದ ಪಡೆದಿದ್ದಾರೆ.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ