Sunday, November 24, 2024
ಉಡುಪಿಸುದ್ದಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ಕಾಪು ತಾಲೂಕು ವತಿಯಿಂದ ತಾಲೂಕು ಮಟ್ಟದ ಮಹಿಳಾ ಸಮಾವೇಶ ಹಾಗೂ ವಿಚಾರಗೋಷ್ಠಿ – ಕಹಳೆ ನ್ಯೂಸ್

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ಕಾಪು ತಾಲೂಕು, ತಾಲೂಕು ಜ್ಞಾನ ವಿಕಾಸ ಮಹಿಳಾ ವಿಭಾಗ ಇವರ ಸಹಯೋಗದೊಂದಿಗೆ ಕಾಪು ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ತಾಲೂಕು ಮಟ್ಟದ ಮಹಿಳಾ ಸಮಾವೇಶ ಹಾಗೂ ವಿಚಾರಗೋಷ್ಠಿ ಯನ್ನು ಕಾಪು ತಹಶೀಲ್ದಾರ್ ಡಾ ಪ್ರತಿಭಾ ಆರ್. ಉದ್ಘಾಟನೆ ಮಾಡಿದರು.
ಜಿ.ಪಂ. ಮಾಜಿ ಸದಸ್ಯೆ ಗೀತಾಂಜಲಿ ಸುವರ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ದೇಶ ಸಮಾಜ ಹಾಗೂ ಸಂಸಾರ ದಲ್ಲಿ ಮಾತೆ ಪಾತ್ರ ಅವಳು ನಿರ್ಮಾತೆ ಆದ್ದರಿಂದ ಮಹಿಳೆ ಸಮಸ್ಯೆ ಪರಿಹಾರ ವಾಗ ಬೇಕು ನಿಮ್ಮೊಂದಿಗೆ ನಾನು ಸಹಾಯ ಕ ಲಾಗಿ ಇದ್ದೇನೆ ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಉದ್ಯಾವರ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆಯ ಪ್ರಾಂಶುಪಾಲೆ ಮಮತಾ ಕೆ.ವಿ. ಅವರು ಗರ್ಭಕೋಶದ ಕ್ಯಾನ್ಸರ್ ಮತ್ತು ಸ್ತನ ಕ್ಯಾನ್ಸರ್ ಬಗ್ಗೆ ಮಾಹಿತಿ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾಪು ತಾಲೂಕು ಜನಜಾಗೃತಿ ವೇದಿಕೆ ಸದಸ್ಯ ಸತ್ಯೇಂದ್ರ ಪೈ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ರ ಯೋಜನಾಧಿಕಾರಿ ಜಯಂತಿ, ಕಾಪು ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕೇಸರ ಶೇಖರ್ ಆಚಾರ್ಯ, ಕಾಪು ವಲಯ ಅಧ್ಯಕ್ಷೆ ಸುಜಯಾ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಯೋಜನೆಯ ಸೇವಾ ಪ್ರತಿನಿಧಿಗಳು, ಸಂಯೋಜಕಿಯರು, ಸದಸ್ಯರು ಉಪಸ್ಥಿತರಿದ್ದರು. ಕಾಪು ವಲಯದ – ಮೇಲ್ವಿಚಾರಕಿ ಸರಿತಾ `ಸ್ವಾಗತಿಸಿದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ಸವಿತಾ ” ವರದಿ ವಾಚಿಸಿದರು. ಸೇವಾ ಪ್ರತಿನಿಧಿ – ರಜನಿ ವಂದಿಸಿದರು. ಶಿರ್ವ ವಲಯದ ಮೇಲ್ವಿಚಾರಕಿ ಗೀತಾ ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು