Friday, January 24, 2025
ಕ್ರೈಮ್ದಕ್ಷಿಣ ಕನ್ನಡಸುದ್ದಿ

ವಿಟ್ಲ : ಮಾಧ್ಯಮ ವರದಿಗಾರ ಎಂದು ಬೆದರಿಸಿ ಅಮಾಯಕ ಯುವಕನಿಂದ ಹಣ ವಸೂಲಿ ; ಆರೋಪಿ NS. ಶರತ್‌ ಮತ್ತು ಇಬ್ಬರ ಮೇಲೆ ಎಫ್ಐಆರ್ ದಾಖಲು – ಕಹಳೆ ನ್ಯೂಸ್

ವಿಟ್ಲ: ಯುವಕನೋರ್ವನ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ರವಾನಿಸಿ, ಹಣ ನೀಡುವಂತೆ ಬ್ಲಾಕ್‌ಮೇಲ್‌ ಮಾಡಿದ ಘಟನೆ ವಿಟ್ಲದಲ್ಲಿ NS. ಶರತ್‌ ಮತ್ತು ಆತನ ತಂಡದಿಂದ ನಡೆದಿದೆ.

ಕಳೆದ ಕೆಲ ದಿನಗಳ ಹಿಂದೆ ಮಂಗಳೂರಿನ ಬೈಕಂಪಾಡಿ ಬಸ್‌ ನಿಲ್ದಾಣದ ಬಳಿ ವಾಹನ ನಿಲ್ಲಿಸಿ ಮೂತ್ರ ವಿಸರ್ಜನೆಗೆಂದು ನಿಂತಿದ್ದ ವಿಟ್ಲ ಮೂಲದ ಯುವಕನ ಮೇಲೆ ಅನುಮಾನಗೊಂಡು ಯಾರೋ ಅಪರಿಚಿತ ವ್ಯಕ್ತಿಗಳು ಬೈಕ್‌ನಲ್ಲಿ ಬಂದು ಸ್ಥಳೀಯ ಪ್ರಕರಣದ ಆರೋಪಿಯೆಂದು ಅವಾಚ್ಯ ಶಬ್ಧಗಳಿಂದ ಬೈದು ಪೊಲೀಸರಿಗೆ ಫೋನ್‌ ಮೂಲಕ ತಿಳಿಸಿರುತ್ತಾರೆ. ಬಳಿಕ ಪೊಲೀಸ್‌ ತನಿಖೆಯ ವೇಳೆ ಈತ ನೈಜ ಆರೋಪಿ ಅಲ್ಲ ಎಂಬ ನಿಜಾಂಶವೂ ತಿಳಿದು ಬಂದಿತ್ತು. ಯುವಕರ ತಂಡ ಅಡ್ಡಗಟ್ಟುವ ವೇಳೆ ಅಲ್ಲಿಯೇ ಇದ್ದ ಅಪರಿಚಿತ ವ್ಯಕ್ತಿಯೊಬ್ಬ ಈ ಸನ್ನಿವೇಶವನ್ನು ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡಿದ್ದ. ಈ ವೀಡಿಯೋವನ್ನು ವಿಟ್ಲದ NS. ಶರತ್ ಎಂಬಾತ ತನ್ನ ಗ್ಯಾಂಗ್ ನೊಂದಿಗೆ ಯುವಕನ ಹೋಟೇಲ್ ಬಳಿ ಬಂದು ನಾನು ಮಾಧ್ಯಮ ಪ್ರತಿನಿಧಿ, ವೀಡಿಯೋ ಡಿಲೀಟ್ ಮಾಡಬೇಕಾದರೆ ಹಣ ನೀಡುವಂತೆ ವಿಟ್ಲ ಮೂಲದ ಯುವಕನಿಗೆ ಬೆದರಿಕೆಯೊಡ್ಡಿ ಹಣ ದೋಚಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಬಗ್ಗೆ ವಿಟ್ಲ ಮೂಲದ ಯುವಕ ಪ್ರದೀಪ್‌ ಕೆ ಇವರು ನೀಡಿದ ದೂರಿನಂತೆ “ವಿಟ್ಲದ ಎಂ.ಆರ್‍ ನಾಯಕ್‌ ಪಂಪ್‌ ಬಳಿ ಮಿನಿ ಕ್ಯಾಂಟಿನ್‌ ಬಳಿ ಎರಡು ಅಪರಿಚಿತ ವ್ಯಕ್ತಿಗಳು ಬಂದು ಕೆಲ ದಿನಗಳ ಹಿಂದೆ ಮಂಗಳೂರಿನ ಬೈಕಂಪಾಡಿಯಲ್ಲಿ ನಡೆದ ವಿಚಾರವನ್ನು ತೆಗೆದು, ಅಪರಿಚಿತರು ಚಿತ್ರೀಕರಿಸಿದ ವೀಡಿಯೋವನ್ನು ತನ್ನ ಮೊಬೈಲ್‌ನಲ್ಲಿ ತೋರಿಸಿ ಹಣ ನೀಡುವಂತೆ ಒತ್ತಡ ಹೇರಿದ್ದಾರೆ. ಈ ಪೈಕಿ ವಿಟ್ಲ ಮೂಲದ NS. ಶರತ್‌ ಎಂಬಾತ ಹಣ ನೀಡದಿದ್ದಲ್ಲಿ ಮಾಧ್ಯಮದಲ್ಲಿ ವೈರಲ್‌ಗೊಳಿಸುವುದಾಗಿ ಬೆದರಿಕೆಯೊಡ್ಡಿದ್ದಾನೆ. ಅದೇ ದಿನ ಮತ್ತೆ NS. ಶರತ್‌ ಮತ್ತು ಇನ್ನಿಬ್ಬರು ಪರಿಚಿತರು ಬೆಳಗ್ಗಿನಿಂದ ಸಂಜೆ ಸುಮಾರು 8 ಬಾರಿ ಕೆಂಪು ಬಣ್ಣದ ಸ್ವಿಫ್ಟ್‌ ಕಾರು, ಸ್ಕೂಟರ್‌ ಮತ್ತು ಬೈಕಿನಲ್ಲಿ ಸುಮಾರು 8 ಬಾರಿ ನನ್ನ ಹೋಟೇಲ್‌ಗೆ ಬಂದು ಹತ್ತು ಸಾವಿರ ರೂ. ಹಣ ನೀಡುವಂತೆ ಒತ್ತಾಯಪಡಿಸಿದ್ದಾರೆ. ಈ ವೇಳೆ ಬೆದರಿಕೆಗೆ ಹೆದರಿ ಅನ್ಯಮಾರ್ಗ ತೋರದೆ 6,000/- ರೂ. ನೀಡಿರುತ್ತೇನೆ. ಮರುದಿನ NS. ಶರತ್‌ ಎಂಬಾತ ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು, ನನ್ನ ಪರಿಚಯಸ್ಥರ ಮೊಬೈಲ್‌ಗಳಿಗೆ ಈ ವೀಡಿಯೋ ರವಾನೆಯಾಗಿದೆ. ಇದರಿಂದ ನನ್ನ ಗೌರವಕ್ಕೆ ಧಕ್ಕೆ ಬಂದಿದ್ದು, ಸಾರ್ವಜನಿಕ ವಲಯದಲ್ಲಿ ತಲೆ ಎತ್ತಿ ಓಡಾಡದಂತ ಪರಿಸ್ಥಿತಿ ಎದುರಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇಷ್ಟು ಮಾತ್ರವಲ್ಲದೆ, ಇನ್ನೂ ಹೆಚ್ಚಿನ ಹಣವನ್ನು ನೀಡಬೇಕು ಇಲ್ಲವಾದಲ್ಲಿ ನಿನ್ನ ಸಂಬಂಧದವರ ಮತ್ತು ಇತರರೆಲ್ಲರ ಮೊಬೈಲ್‌ಗಳಿಗೆ ರವಾನಿಸುವುದಾಗಿ 8971284825 ಈ ಮೊಬೈಲ್‌ ಸಂಖ್ಯೆಯಿಂದ ಪೋನ್‌ ಕರೆಯ ಮೂಲಕ ಬೆದರಿಕೆಯೊಡ್ಡಿರುತ್ತಾನೆ. ಈ ವಿಚಾರದಿಂದ ನನ್ನ ಮಾನ ಮರ್ಯಾದೆಗೆ ಧಕ್ಕೆಯಾಗಿದ್ದು, ಊರಿನ ಜನರು, ಪರಿಚಯಸ್ಥರು ಎಲ್ಲರೂ ನನ್ನನ್ನು ಅನುಮಾನದ ದೃಷ್ಟಿಯಲ್ಲಿ ಕೇವಲವಾಗಿ ನೋಡುತ್ತಾರೆ. ಈ ಬಗ್ಗೆ ಬೈಕಂಪಾಡಿಯಲ್ಲಿ ಆದ ಘಟನೆಗೂ NS. ಶರತ್‌ ಎಂಬಾತನಿಗೂ ನಿಕಟ ಸಂಬಂಧವಿರುತ್ತದೆ ಎಂಬಿತ್ಯಾದಿ ದೂರಿನಲ್ಲಿ ದಾಖಲಿಸಿದ್ದಾರೆ.
ಈ ಪ್ರಕರಣದ ಬಗ್ಗೆ ಆರೋಪಿ NS. ಶರತ್‌ ಮತ್ತು ಇಬ್ಬರ ಮೇಲೆ ಎಫ್‌ಐಆರ್‍ ದಾಖಲಾಗಿದ್ದು, ವಿಟ್ಲ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

NS. ಶರತ್ KSRTC ಬಸ್‌ ಸ್ಟ್ಯಾಂಡ್‌ನ ಬಳಿ ನಡೆಯುವ ಅಕ್ರಮ ಚಟುವಟಿಕೆಗಳ ಕಿಂಗ್‌ಪಿನ್‌ ಆಗಲು ಪ್ರಯತ್ನಿಸುತ್ತಿದ್ದಾನೆ ಎಂಬಿತ್ಯಾದಿ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ. ಈ ಹಿಂದೆಯೂ ಕೂಡ ವಿಟ್ಲ ಪರಿಸರದಲ್ಲಿ ರಸ್ತೆ ಅಪಘಾತಗಳಾದ ಮತ್ತು ಸಣ್ಣ ಪುಟ್ಟ ವಾದ ವಿವಾದಗಳಾದ ಘಟನಾ ಸ್ಥಳಕ್ಕೆ ತೆರಳಿ ಹೆದರಿಸಿ ಬೆದರಿಸಿ ಈ ಮೂಲಕ ತನ್ನ ಚಾಳಿ ಬುದ್ಧಿಯನ್ನು ತೋರಿಸುತ್ತಿದ್ದಾನೆ ಎಂಬ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.