Sunday, November 24, 2024
ಸುದ್ದಿ

ಉಡುಪಿ : ಇನ್ನಂಜೆ – ಬೇಟಿ ಬಚಾವೋ, ಬೇಟಿ ಪಡಾವೋ ಕಾರ್ಯಕ್ರಮ – ಕಹಳೆ ನ್ಯೂಸ್

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ ಜಿಲ್ಲೆ, ಶಿಶು ಅಭಿವೃದ್ಧಿ ಯೋಜನೆ ಉಡುಪಿ ಹಾಗೂ ಇನ್ನಂಜೆ ಗ್ರಾಮ ಪಂಚಾಯತ್‌ನ ಜಂಟಿ ಆಶ್ರಯದಲ್ಲಿ ” ಬೇಟಿ ಬಚಾವೋ ಬೇಟಿ ಪಡಾವೋ” ಕಾರ್ಯಕ್ರಮ ಇನ್ನಂಜೆ ಗ್ರಾಮ ಪಂಚಾಯತ್‌ನ ಅಧ್ಯಕ್ಷರಾದ ಶ್ರೀಮತಿ ಮಾಲಿನಿ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಇನ್ನಂಜೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಜರಗಿತು.


ಕೌಟುಂಬಿಕ ಬದುಕಿನ ವ್ಯವಸ್ಥೆಯಲ್ಲಿ ಮಹಿಳೆ ಬಹಳ ತಾಳ್ಮೆಯಿಂದ ಎಲ್ಲರೊಂದಿಗೂ ಹೊಂದಿಕೊAಡು ಸಮರ್ಥವಾಗಿ ಸಂಸಾರವನ್ನು ಮುನ್ನಡೆಸುವ ಮಹಿಳೆ, ತನ್ನ ಆರೋಗ್ಯದ ಬಗ್ಗೆ ಅಷ್ಟೋ ಕಾಳಜಿ ವಹಿಸಿ ಕ್ಲಪ್ತ ಸಮಯದಲ್ಲಿ ಸಮತೋಲನ ಆಹಾರ ಸೇವಿಸಿ. ಆರೋಗ್ಯವಂತರಾಗಿ ಶೈಕ್ಷಣಿಕವಾಗಿ, ಧಾಮೀಕವಾಗಿ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡು ಮುಖ್ಯವಾಹಿನಿಗೆ ಬರಬೇಕಾಗಿದೆಯೆಂದು ಕಾಠ್ಯಕ್ರಮದ ಉದ್ದೇಶದ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಶ್ರೀಮತಿ ಪೂರ್ಣಿಮಾ ರವರು ಕಾಠ್ಯಕ್ರಮದ ಬಗ್ಗೆ ಪ್ರಸ್ತಾವಿಕವಾಗಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಹೆಣ್ಣನ್ನು ದೇವತೆಯ ರೂಪದಲ್ಲಿ ನಾವು ನೋಡುತ್ತೇವೆ. ಆದರೂ ಹೆಣ್ಣನ್ನು ಸಮಾಜ ನೋಡುವ ದೃಷ್ಟಿ ಬದಲಾಗಬೇಕಾಗಿದೆ. ಹೆಣ್ಣಿನ ಬಗ್ಗೆ ತಾತ್ಸಾರ ಭಾವನೆ, ವರದಕ್ಷಿಣೆ ಕಿರುಕುಳ, ಹೆಣ್ಣಿನ ಭ್ರೂಣ ಹತ್ಯೆ, ಹೆಣ್ಣಿನ ಬಗ್ಗೆ ತಾರತಮ್ಯ, ಕೌಟುಂಬಿಕ ದೌರ್ಜನ್ಯ, ಇನ್ನಿತರ ಅನಾಚರಣೆಗಳಿಗೆ ದಿನನಿತ್ಯ ಮಹಿಳೆ ಗುರಿಯಾಗುತ್ತಾಳೆ. ಮಹಿಳೆಯು ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸದೆ, ಹೆಚ್ಚಿನ ಕಾಳಜಿ ವಹಿಸಿ ಆರೋಗ್ಯವಂತರಾಗಿ ದೇಶದ ಆಸ್ತಿಯಾಗಬೇಕಾಗಿದೆಯೆಂದು ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ರೋಶನಿ ಪೂಂಜರವರು ಆರೋಗ್ಯ ಸಲಹೆಯನ್ನಿತ್ತರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಚಂದ್ರಕಲಾರವರು ಆರೋಗ್ಯ ಮಾಹಿತಿಯನ್ನು ನೀಡಿದರು.ಮಹಿಳೆಯರಿಗೆ ಕ್ರೀಡಾಮನೋಭಾವನೆಯನ್ನು ಬೆಳೆಸುವ ಉದ್ದೇಶದಿಂದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಅಂಗವಾಗಿ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಹೆಣ್ಣು ಮಕ್ಕಳ ಶಿಕ್ಷಣ,ಪೌಷ್ಟಿಕತೆ, ಬಾಲ್ಯವಿವಾಹ, ಹೆಣ್ಣು ಮಕ್ಕಳ ರಕ್ಷಣೆಗೆ ಕಾನೂನಿನಡಿಯಲ್ಲಿ ರಕ್ಷಣೆ ಇತ್ಯಾದಿಗಳ ಬಗ್ಗೆಮಾಹಿತಿಯನ್ನು ನೀಡಲಾಯಿತು.
ಇನ್ನಂಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಸುರೇಖ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರು, ರಾಜರಾಜೇಶ್ವರಿ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಸುಗುಣ ಪಿ.ಹೆಚ್.ಸಿ.ಒ ಶ್ರೀಮತಿ ಶಕುಂತಳ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸ್ವಸಹಾಯ ಸಂಘದ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.