Thursday, January 23, 2025
ಸುದ್ದಿ

ಬಂಟ್ವಾಳ: MDMA ನಿದ್ರಾಜನಕ ಮಾದಕ ವಸ್ತುಗಳ ಮಾರಾಟ ಯತ್ನ : ಇಬ್ಬರ ಬಂಧನ : ಒರ್ವ ಪರಾರಿ – ಕಹಳೆ ನ್ಯೂಸ್

ಬಂಟ್ವಾಳ : MDMA ನಿದ್ರಾಜನಕ ಮಾದಕ ವಸ್ತುಗಳ ಮಾರಾಟ ಮಾಡಲು ಬೈಕಿನಲ್ಲಿ ರೈಡ್ ಮಾಡುತ್ತಿದ್ದ ಮೂವರ ಪೈಕಿ ಇಬ್ಬರನ್ನು ಬಂಟ್ವಾಳ ನಗರ ಠಾಣಾ ಎಸ್. ಐ.ರಾಮಕೃಷ್ಣ ನೇತ್ರತ್ವದ ತಂಡ ಬಂಧಿಸಿದ್ದು ಇನ್ನೋರ್ವ ಪರಾರಿಯಾಗಿರುವ ಘಟನೆ ನಡೆದಿದೆ.
ಮಂಚಿ ಗ್ರಾಮದ ಅಬ್ದುಲ್ ರಹೀಜ್ (23) ಸಹಸವಾರ ಮಂಚಿ ನಿವಾಸಿ ದಾವುದುಲ್ ಅಮೀರ್ (26) ಬಂಧಿತರಾಗಿದ್ದು ಇನ್ನೋರ್ವ ಸಹಸವಾರ ಬಂಟ್ವಾಳ ನಿವಾಸಿ ನಝೀರ್ ಎಂಬಾತ ಪರಾರಿಯಾಗಿದ್ದಾನೆ , ಈತನ ಮೇಲೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು


ಬಂಧಿತರ ಕೈಯಿಂದ ಸುಮಾರು 4 ಸಾವಿರ ರೂ ಮೌಲ್ಯದ 4 ಗ್ರಾಂ 04 ಮಿ.ಗ್ರಾಂ ತೂಕದ ನಿದ್ರಾಜನಕMDMA ಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಗರ ಠಾಣಾ ಎಸ್.ಐ.ಅವರು ಬ್ರಹ್ಮರಕೋಟ್ಲು ಎಂಬಲ್ಲಿ ವಾಹನ ತಪಾಸಣೆ ಮಾಡುತ್ತಿರುವ ವೇಳೆ ನಂಬರ್ ಪ್ಲೇಟ್ ಇಲ್ಲದೆ ತ್ರಿಬಲ್ ರೈಡಿನಲ್ಲಿ ಬರುತ್ತಿದ್ದ ದ್ಬಿಚಕ್ರವಾಹನವೊಂದನ್ನು ನಿಲ್ಲಿಸಿ ಎಂದು ಸೂಚನೆ ನೀಡಿದಾಗ ಅದರಲ್ಲಿ ಓರ್ವ ಹಾರಿ ಪರಾರಿಯಾಗಿದ್ದ.
ಈ ಸಂದರ್ಭದಲ್ಲಿ ಸಂಶಯಗೊAಡ ಎಸ್.ಐ. ಉಳಿದ ಇಬ್ಬರನ್ನು ವಿಚಾರಣೆ ನಡೆಸಿ ದಾಗ ಇವರು ನಿದ್ರಾಜನಕ ಮಾದಕವಸ್ತು ವನ್ನು ಸೇವನೆ ಮಾಡಿರುವುದು ಗಮನಕ್ಕೆ ಬಂದಿದೆ. ವಾಹನ ತಪಾಸಣೆ ನಡೆಸಿದಾಗ ಅದರಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಇರಿಸಲಾಗಿದ್ದ ಮಾದಕವಸ್ತು ಕಂಡು ಬಂದಿದ್ದು ,ಇವರ ಮೇಲೆ ಪ್ರಕರಣ ದಾಖಲಿಸಲಾಗಿದೆ.