Thursday, January 23, 2025
ಸುದ್ದಿ

ಶ್ರೀ ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನ(ರಿ.) ವತಿಯಿಂದ ಫೆ. 19ರಿಂದ 22ರವರೆಗೆ ಹರಿದಾಸವರೇಣ್ಯರುಗಳ ಆರಾಧನಾ ಮಹೋತ್ಸವ : ಪ್ರಶಸ್ತಿ ಪ್ರಧಾನ ಹಾಗೂ ರಾಷ್ಟ್ರಮಟ್ಟದ ಖ್ಯಾತ ಕಲಾವಿದರಿಂದ ಸಂಗೀತ, ನೃತ್ಯೋತ್ಸವ ಕಾರ್ಯಕ್ರಮ – ಕಹಳೆ ನ್ಯೂಸ್

ಫೇ. 19ರಿಂದ 22ರವರೆಗೆ ಶ್ರೀ ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನ (ರಿ.) ಇವರ ವತಿಯಿಂದ ನೂತನ ವರ್ಷದ ಶುಭಾಶಯಗಳೊಂದಿಗೆ ಹರಿದಾಸವರೇಣ್ಯರುಗಳಾದ ಪುರಂದರದಾಸರು-ಕನಕದಾಸರು-ತ್ಯಾಗರಾಜರು ಆರಾಧನಾ ಮಹೋತ್ಸವ ಹಾಗೂ ನಮ್ಮ ನಾಡಿನ ಹಿರಿಯ ಸಾಹಿತಿ “ದಿ ಬೆಳಗೆರೆ ಮಹಾಲಕ್ಷೈಮೈ ಸ್ಮರಣಾರ್ಥ ಪ್ರಶಸ್ತಿ” “ ಶ್ರೀ ಗುರಾಘವೇಂದ್ರಸಂಸ್ಮರಣ ಪ್ರಶಸ್ತಿ” “ ವ್ಯಾಸ ಪ್ರಶಸ್ತಿ” ! “ಕನಕಶ್ರೀ ಪ್ರಶಸ್ತಿ” ! “ಸಪ್ತಸ್ವರ ಸಂಗೀತ ಸ್ಪರ್ಷಮಣಿ ಬಿರುದು” ! ಧೈವ ಪ್ರಶಸ್ತಿ” ಹಾಗೂ 24ನೇ ವರ್ಷದ ಸಂಸ್ಥೆಯ ವಾರ್ಷಿಕೊತ್ಸವದ ಅಂಗವಾಗಿ ಅಂತರ ರಾಷ್ಟ್ರಮಟ್ಟದ ಖ್ಯಾತ ಕಲಾವಿದರಿಂದ ಸಂಗೀತ ಮತ್ತು ನೃತ್ಯೋತ್ಸವ ಕಾರ್ಯಕ್ರಮ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ದಿ.19ರ ಸೋಮವಾರ ಶ್ರೀ ಪುರಂದರದಾಸರ ಆರಾಧನ ಮಹೋತ್ಸವ ಕಾರ್ಯಕ್ರಮದ ಉದ್ಘಾಟನೆ ಮತ್ತು ಅಧ್ಯಕ್ಷತೆಯನ್ನು ಸಹಕಲಾವಿದರು ಕೀಬೋರ್ಡ್ ಕಿರಣ್ ಕುಮಾರ್,ತಬಲ ಮಾರುತಿ ಪ್ರಸಾದ್, ಬೆಂಗಳೂರು ದಕ್ಷಿಣ ಭಾರತದ ಪ್ರಖ್ಯಾತ ಗಾಯಕರು ಗಾನಕಲಾ ಭೊಷಣ ಡಾ.ಆರ್.ಕೆ ಪದ್ಮನಾಭರವರು, ವಿ.ಡಾ.ಅರ್ಚನ ಕುಲಕರ್ಣಿರವರು ವಹಿಸಲಿದ್ದಾರೆ. ಇನ್ನು ಈ ಕಾರ್ಯಕ್ರದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗುರುರಾಘವೇಂದ್ರ ಸಂಸ್ಮರಣ ಪ್ರಶಸ್ತಿ ಹಾಗೂ ವ್ಯಾಸಪ್ರಶಸ್ತಿ, ನಡೆಯಲಿದೆ. ಮೈಸೂರು ಶ್ರೀ ರಾಘವೇಂದ್ರ ಅನುಗ್ರಹ ಪ್ರಶಸ್ತಿ ಪುರಸ್ಕೃತರು ಮಂತ್ರಾಲಯ ಮಠ ಶ್ರೀ ಹೆಚ್. ಶ್ರೀನಿವಾಸಮೂರ್ತಿ ಆಚಾರ್ಯ, ಸುಗಾವಿ,ವ್ಯಸ್ಥಾಪಕರು, ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನ ಸೋಂದ ಶಿರಸಿ, ಉತ್ತರಕನ್ನಡ ರತ್ನಾಕರ ಶ್ರೀ ರಘುಪತಿ ನಾರಯಣ ಭಟ್ಟ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಕರ್ನಾಟಕ ರಾಜ್ಯ ಸರ್ಕಾರ ಶ್ರೀ ಪುತ್ತೂರು ನರಸಿಂಹನಾಯಕ್, ರವರು ಪಡೆಯಲ್ಲಿದ್ದಾರೆ.

ತದನಂತರ ಫಾರ್ಮರ್ ಜಡ್ಜ್ ಸುಪ್ರೀಂಕೋರ್ಟ್ ಆಪ್ ಇಂಡಿಯಾ, ಲೋಕಾಯುಕ್ತ ಕರ್ನಾಟಕ, ಡಾ.ಎನ್ ಸಂತೋಷ್ ಹೆಗ್ಡೆ, ಗೌರವ ಕಾರ್ಯದರ್ಶಿಗಳು ಶ್ರೀ ವೆಂಕಟೇಶ್ವರ ಟ್ರಸ್ಟ್. ಶ್ರೀ ಮದನ್ ಜಿ.ಹೆಚ್, ಪಿ.ಹೆಚ್.ಡಿ- ಎಫ್ ಐ ಎಸ್ ಎಸ್ ಟಿ ಅಧ್ಯಕ್ಷರು, ದೇವಸ್ಥಾನದ ಟ್ರಸ್ಟ್, ಶ್ರೀಹರಿ ಕ್ಷೇತ್ರ ವೈಕುಂಠಪುರ ಪ್ರೋ.ಡಿ.ಎಂ ವೆಂಕಟರೆಡ್ಡಿ, ಇವರಿಗೆ ವಿಶೇಷ ಗೌರವ ಸನ್ಮಾನ ನಡೆಯಲಿದೆ.

20ರ ಮಂಗಳವಾರ ಶ್ರೀ ಕನಕದಾಸರ ಆರಾಧನಾ ಮಹೋತ್ಸವ ಕಾರ್ಯಕ್ರಮದಲ್ಲಿ ಶ್ರೀ ಗುರುರಾಘವೇಂಧ್ರ ಸಂಸ್ಮರಣ, ಪಂಡಿತ್ ಅನಂತಕುಲಕರ್ಣಿಯವರು, ಬಾಗಲಕೋಟೆ(ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು,ಕರ್ನಾಟಕ ಸರ್ಕಾರ)ಇವರು ಪ್ರಶಸ್ತಿ ಪ್ರದಾನ ನಡೆಸಲಿದ್ದಾರೆ. ನಂತರ ಡಾ|| ಮೋಹನ್ ಮೆಡಿಕಲ್ ಸೂಪಿರಡೆಂಟ್, ದಿ ಆಕ್ರ‍್ಡ್_ ಮೆಡಿಕಲ್ ಕಾಲೇಜ್ ಹಾಸ್ಪೆಟಲ್ ಮತ್ತು ರೀಸರ್ಚಸೆಂಟರ್, ಹೊಸೂರು ರಸ್ತೆ, ಬೆಂಗಳೂರು, ವಿಶೇಷ ಗೌರವ ಸಮಾರಂಭ ನಡೆಯಲಿದ್ದು. ಸಂಜೆ ನೃತ್ಯ ವಿ|| ಶ್ರೀಮತಿ ಭಾರತಿ ರಾಜೇಶ್.ಬೆಂಗಳೂರು, ಕನಕ ವೈಭವಂ ನೃತ್ಯರೂಪಕ ನೃತ್ಯ ವಿ|| ಡಾ|| ನಿಶಿತ, ಪುತ್ತೂರು, ಅಸಿಸ್ಟೆಂಟ್ ಪ್ರೊಫೆಸರ್ ಕ್ರಿಸ್ತು ಜಯಂತಿ ಕಾಲೇಜ್, ನೃತ್ಯ ನಿರತಾ ನೃತ್ಯಶಾಲೆ,ಬೆಂಗಳೂರು ಇವರಿಂದ ನಡೆಯಲಿದೆ.

21ರ ಬುಧವಾರ ಶ್ರೀ ತ್ಯಾಗರಾಜರ ಆರಾಧನಾ ಮಹೋತ್ಸವದ ಪ್ರಯುಕ್ತ ಅಂತರಾಷ್ರೀಯ ಪ್ರಖ್ಯಾತ ಗಾಯಕರು ಪಂಡಿತ್ ಡಾ|| ರಾಯಚೂರು ಶೇಷಗಿರಿದಾಸ್, ಬೆಂಗಳೂರು ಇವರಿಗೆ ಬಿರಿದು ಪ್ರದಾನ ನಡೆಯಲಿದೆ. ಸಂಜೆ ನೃತ್ಯ ವಿ. ಶ್ರೀಮತಿ ಪದ್ಮಿನಿ ಅಚ್ಚಿ ಮತ್ತು ಶಿಷ್ಯರಿಂದ “ತ್ಯಾಗ ವೈಭವ ನೃತ್ಯ ರೂಪಕ” ನಡೆಯಲಿದೆ.

22ರಂದು ನಮ್ಮ ನಾಡಿನ ಹಿರಿಯ ಸಾಹಿತಿ ದಿ|| ಬಿ.ಎಸ್.ಬೆಳೆಗೆರೆ ಮಹಾಲಕ್ಷ್ಮಮ್ಮ ಸ್ಮರಣಾರ್ಥ ಪ್ರಶಸ್ತಿ ಹಾಗೂ ಅವರು ರಚಿಸಿರುವ ಸಂಗೀತ ನೃತ್ಯ ಕಾರ್ಯಕ್ರಮ ನಡೆಯಲಿದ್ದು,ಮತ್ತು ಘನ ಅಧ್ಯಕ್ಷತೆಯನ್ನು ಗಾನಕಲಾಭೂಷಣ ಸಂಗೀತ ವಿ|| ಡಾ.ಆರ್.ಕೆ.ಪದ್ಮನಾಭರವರು ಮಹೋಪಧ್ಯಾಯ ಡಾ|| ಎಸ್ .ರಂಗನಾಥ್ ಬೆಂಗಳೂರು ಇವರು ವಹಿಸಲ್ಲಿದ್ದಾರೆ.ನಂತರ ಮುಖ್ಯ ಅತಿಥಿಗಳಾಗಿ ದಿ||| ಬೆಳಗೆರೆ ಮಹಾಲಕ್ಮ್ಷಮ್ಮ ಕುಟುಂಬದವರು ಹಾಗೂ ಶ್ರೀ ಸುಂದರೇಶ್, ನಿವೃತ್ತ ಧೈಹಿಕ ಶಿಕ್ಷಕರು,ಚಿಕ್ಕಬಾಣವರ,ಬೆಂಗಳೂರು, ಚಂದ್ರಕ ಮನೋಹರ್, ಚಿಕ್ಕಬಾಣವರ,ಬೆಂಗಳೂರು, ಶ್ರಿಮತಿ ಶ್ಯಾಮಲ ಮಂಜುನಾಥ್, ಚಿಕ್ಕಬಾಣವರ, ವಿಶೇಷ ಗೌರವ ಸನ್ಮಾನ ನಡೆಯಲಿದೆ.