Sunday, January 19, 2025
ಕ್ರೀಡೆಸುದ್ದಿ

ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಜಯಗಳಿಸಿದ ಟೀಮ್ ಇಂಡಿಯಾ – ಕಹಳೆ ನ್ಯೂಸ್

ದೆಹಲಿ: ನಾಯಕ ವಿರಾಟ್ ಕೊಹ್ಲಿ ಮತ್ತು ಉಪ ನಾಯಕ ರೋಹಿತ್ ಶರ್ಮಾ ಶತಕದ ನೆರವಿನಲ್ಲಿ ಟೀಮ್ ಇಂಡಿಯಾ ಗುಹಾವಟಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 8 ವಿಕೆಟ್‍ಗಳ ಜಯ ಗಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬರ್ಸಪಾರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಗೆಲುವಿಗೆ 323 ರನ್‍ಗಳ ಸವಾಲನ್ನು ಪಡೆದ ಭಾರತ ಇನ್ನೂ 47 ಎಸೆತಗಳು ಬಾಕಿ ಇರುವಾಗ 2 ವಿಕೆಟ್ ನಷ್ಟದಲ್ಲಿ 326ರನ್ ಸೇರಿಸಿ ಗೆಲುವಿನ ದಡ ಸೇರಿತು. ಕೊಹ್ಲಿ ಮತ್ತು ರೋಹಿತ್ ಶರ್ಮಾ ಜೊತೆಯಾಟ ನೀಡಿ ತಂಡದ ಗೆಲುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಟಾಸ್ ಸೋತು ಬ್ಯಾಟಿಂಗ್‍ಗೆ ಇಳಿಸಲ್ಪಟ್ಟ ವೆಸ್ಟ್‍ಇಂಡೀಸ್ ತಂಡ ನಿಗದಿತ 50 ಓವರ್‍ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 322 ರನ್ ಗಳಿಸಿತ್ತು. ಗೆಲುವಿಗೆ 323 ರನ್‍ಗಳ ಸವಾಲನ್ನು ಪಡೆದ ಭಾರತ ನಿರಾಯಾಸವಾಗಿ ಗೆಲುವನ್ನು ಸಾಧಿಸಿತು.