ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ಹಾಗೂ ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯಿಂದ ವಿಕಲಚೇತನ ಫಲಾನುಭವಿಗಳಿಗೆ ಮಂಜೂರಾದ ಮೋಟೋರೈಸ್ಡ್ ಟ್ರೈಸಿಕಲ್, ಶ್ರವಣ ಸಾಧನ, ಕೃತಕ ಕಾಲನ್ನು ಇಂದು ದಿನಾಂಕ 09-02-2024 ರಂದು ಕಾಪು ಶಾಸಕ ಕಚೇರಿಯಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ವಿತರಿಸಿದರು.
ವಿಕಲಚೇತನ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆ ಕರ್ನಾಟಕ ಸರ್ಕಾರ ಮತ್ತು ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಮತ್ತು ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯಿಂದ ಶೇಕಡಾ 75 ಕ್ಕೂ ಅಧಿಕ ಅಂಗವಿಕಲತೆಯನ್ನು ಹೊಂದಿರುವ ಮತ್ತು ಕೈ ಸ್ವಾಧೀನವಿರುವ ಮಾನಸಿಕವಾಗಿ ಸ್ವಸ್ಥರಿರುವವರಿಗೆ ಸಂಚಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ 3 ಫಲಾನುಭವಿಗಳಿಗೆ ಮೋಟೋರೈಸ್ಡ್ ಟ್ರೈಸಿಕಲ್, 1 ಫಲಾನುಭವಿಗೆ ಕೃತಕ ಕಾಲು, 5 ಫಲಾನುಭವಿಗಳಿಗೆ ಶ್ರವಣ ಸಾಧನಗಳನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ವಿಕಲಚೇತನರ ಇಲಾಖೆಯ ಪ್ರದೀಪ್, ಶಿವಾಜಿ, ನೆಲಿಶಾ ಉಪಸ್ಥಿತರಿದ್ದರು.