ಮಂಗಳೂರು : ರಾಮಂದಿರ ಕಟ್ಟುವ ಮೂಲಕ ಅಯೋಧ್ಯೆ ವೈಭವವನ್ನು ಮರು ಸೃಷ್ಟಿಸಿದ ಪ್ರಧಾನಿಗೆ ಸಾವಿರಾರು ಪೋಸ್ಟ್ ಕಾರ್ಡ್ ಮೂಲಕ ಅಭಿನಂದನೆ – ಕಹಳೆ ನ್ಯೂಸ್
ಮಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆ ವೈಭವವನ್ನು ಮರು ಸೃಷ್ಟಿಸಿ ಶ್ರೀ ಬಾಲರಾಮನ ಪ್ರತಿಷ್ಟೆಯನ್ನು ಮಾಡಿ ಕೋಟಿ ಕೋಟಿ ಜನರ ಆಶಯ ಈಡೇರಿಸಿದ್ದುಇದಕ್ಕಾಗಿ ಮಂಗಳೂರು ನಗರ ಉತ್ತರ ಮಂಡಲದ ವತಿಯಿಂದ ಪ್ರಧಾನಿಗೆ ಸಾವಿರಾರು ಪೋಸ್ಟ್ ಕಾರ್ಡ್ ಮೂಲಕ ಅಭಿನಂದನೆ ಸಲ್ಲಿಸುವ ಅಭಿಯಾನ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರಾದ ಡಾ.ಭರತ್ ಶೆಟ್ಟಿ ವೈ ಅವರು, ಸಂತನoತೆ ಬದುಕು ನಡೆಸುತ್ತಾ ಸನಾತನ ಧರ್ಮದ ಅಸ್ಮಿತೆಯ ಪ್ರತೀಕವಾದ ಶ್ರೀರಾಮನ ಮಂದಿರವನ್ನು ನಿರ್ಮಿಸಿ ದೇಶದಲ್ಲಿ ಸಂಸ್ಕೃತಿ ಪುನರೋತ್ಥಾನ ಮಾಡುವ ಕಾಯಕದಲ್ಲಿ ಸ್ವತಃ ಪಾಲ್ಗೊಂಡು ಕೋಟಿ ಕೋಟಿ ಜನರ ಆಶಯ ನಿಜವಾಗಿಸಿದ ಪ್ರಧಾನಿ ಮೋದಿ ಅವರು ದೇಶದ ಹಿಂದೂ ಪೀಳಿಗೆಯ ಪ್ರತೀಯೊಬ್ಬನು ವರ್ಷಾನುವರ್ಷ ನೆನಪಿಸಿಕೊಳ್ಳುವ ಅವಸ್ಮರಣೀಯ ಕಾಯಕ ಮಾಡಿದ್ದಾರೆ ಎಂದು ನುಡಿದರು.
ಪೋಸ್ಟ್ ಕಾರ್ಡ್ ಅಭಿಯಾನ ದಲ್ಲಿ ಮಂಗಳೂರು ಉತ್ತರ ಶಾಸಕರಾದ ಡಾ. ಭರತ್ ಶೆಟ್ಟಿ ವೈ,ಪೋಸ್ಟ್ ಕಾರ್ಡ್ ಅಭಿಯಾನದ ಜಿಲ್ಲೆಯ ಸಂಚಾಲಕರು ಹಾಗೂ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ಕಿಶೋರ್ ಕುಮಾರ್,ಗ್ರಾಮ ಚಲೋ ಅಭಿಯಾನದ ಸಂಚಾಲಕರು ಹಾಗೂ ಜಿಲ್ಲೆಯ ಪ್ರಧಾನಕಾರ್ಯದರ್ಶಿ ಯತೀಶ್ ಅರ್ವಾರ್,ಜಿಲ್ಲೆಯ ಉಪಾಧ್ಯಕ್ಷರಾದ ತಿಲಕ್ ರಾಜ್ ಕೃಷ್ಣಾಪುರ,ಶ್ರೀಮತಿ ಪೂಜಾ ಪ್ರಶಾಂತ್ ಪೈ,ಮಂಡಲ ಅಧ್ಯಕ್ಷರಾದ ರಾಜೇಶ್ ಕೊಟ್ಟಾರಿ ,ಮಂಡಲ ಪ್ರಮುಖರು,ಮಹಾ ನಗರ ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು.