Wednesday, January 22, 2025
ಸುದ್ದಿ

ಮಂಗಳೂರು : ಮಾದಕ ದೃವ್ಯ ಮಾರಾಟ ಆರೋಪ ; ಇಬ್ಬರನ್ನು ಬಂಧಿಸಿದ ಕಾವೂರು ಪೊಲೀಸರು – ಕಹಳೆ ನ್ಯೂಸ್

ಮಂಗಳೂರು : ಮಂಗಳೂರು ನಗರ ಹೊರವಲಯದ ಬೋಂದೆಲ್ ಮೈದಾನದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.


ನಗರದ ಹಿಮ ನೀಶ್ (26) ಮತ್ತು ಕೋಟೆಕಾರ್ ಪವನ್‌ರಾಜ್ ಪಿ. (28) ಬಂಧಿತ ಆರೋಪಿಗಳಾಗಿದ್ದಾರೆ .

ಜಾಹೀರಾತು
ಜಾಹೀರಾತು
ಜಾಹೀರಾತು

ಆರೋಪಿಗಳು ಬೈಕಿನಲ್ಲಿ ಸುಮಾರು 19 ಗ್ರಾಂ ತೂಕದ 57,000 ರೂ. ಮೌಲ್ಯದ ಮೆಥಪಟೈನ್ ಎಂಬ ಮಾದಕ ದ್ರವ್ಯ ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಮಂಗಳೂರು ಉತ್ತರ ಉಪ ವಿಭಾಗದ ಆ್ಯಂಟಿ ಡ್ರಗ್ಸ್ ಸ್ಕ್ವಾಡ್ ದಾಳಿ ನಡೆಸಿದೆ.
ಬಂಧಿತರಿAದ ಮೊಬೈಲ್, ಬೈಕ್ ಸಹಿತ ಗಾಂಜಾ ವಶಪಡಿಸಿಕೊಂಡಿದೆ. ಗಾಂಜ ಮಾರಾಟಕ್ಕೆ ಸಂಬo ಧಿಸಿ ದಂತೆ ಕಾವೂರು ಪೊಲೀಸ್ ಠಾಣಾ ಆಕ್ರಾ 21/2024 ಕಲಂ 8 ಸಿ 21 b 27 b NDPSactಕೇಸು ದಾಖಲಿಸಿಕೊಂಡಿದ್ದಾರೆ. ನಗರದಲ್ಲಿ ಮಾದಕ ದ್ರವ್ಯಗಳ ದಂಧೆಯನ್ನು ಮಟ್ಟ ಹಾಕಲು ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಅನುಪಮ್ ಅಗ್ರವಾಲ್ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು