Wednesday, January 22, 2025
ಸುದ್ದಿ

ಕಾಪು ತಾಲೂಕು ಮಟ್ಟದ ವಿಪತ್ತು ನಿರ್ವಹಣಾ ಟಾಸ್ಕ್ ಪೋರ್ಸ್ ಮುಂಜಾಗ್ರತಾ ಸಭೆ – ಕಹಳೆ ನ್ಯೂಸ್

ನೀರಿನ ಅವಶ್ಯಕತೆ ಮತ್ತು ಅಗತ್ಯತೆಯ ಬಗ್ಗೆ ಅರಿವು ಮೂಡಿಸಿ ಕೊಳ್ಳಿ ಮುಂದೆ ಎದುರಿಸ ಬೇಕಾದ ಸಮಸ್ಯೆಗಳ ಬಗ್ಗೆ ಜಾಗೃತ ರಾಗಿ ಮುಂಜಾಗ್ರತ ಕ್ರಮಗಳ ಬಗ್ಗೆ ಚಿಂತನೆ ಮಾಡಿ ಕಾರ್ಯ ಪ್ರವೃತ್ತರಾಗಿ ಎಂದು ಕಾಪು ತಾಲೂಕು ಮಟ್ಟದ ವಿಪತ್ತು ನಿರ್ವಹಣಾ ಟಾಸ್ಕ್ ಪೋರ್ಸ್ ಮುಂಜಾಗ್ರತಾ ಸಭೆಯಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರು ಎಲ್ಲಾ ಅಧಿಕಾರಿಗಳಿಗೆ ಮುನ್ಸೂಚನೆ ನೀಡಿದರು.


ತಪಮಾನದ ಹೆಚ್ಚಳ ಪ್ರಕೃತಿ ಕ ಬದಲಾವಣೆ ಅಕಾಲಿಕ ಮಳೆ ಜಳಮಟ್ಟ ದ ಕುಷಿತದಿಂದಾಗಿ ವಿಶ್ವ ಸಮಸ್ಯೆ ಎದುರಿಸುತ್ತಿದೆ. ನಮ್ಮ ಕಾಪು ಸಮುದ್ರ ಕ್ಕೆ ಹತ್ತಿರ ಇರುವ ಹೆಚ್ಚು ಮಳೆ ಬೀಳುವ, ವಿವಿಧ ರೀತಿಯ ನೀರಿನ ಮೂಲಗಳು ಸುಂದರ ಪ್ರಕೃತಿ ಹೊಂದಿರುವ ದೇವರ ಕ್ರಪೆ ಯ ಪ್ರದೇಶವಾಗಿದ್ದು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಭಾಗದಲ್ಲಿರುವ ಕೆರೆ ಕಾಲುವೆ, ಬಾವಿ ಸರೋವರ ನದಿ ಮುಂತಾದ ಎಲ್ಲಾ ನೀರಿನ ಮೂಲಗಳ ಸಮಗ್ರ ಅದ್ಯಯನ ನಡೆಸಿ , ಸಮಸ್ಯೆ ಹಾಗೂ ವ್ಯವಸ್ಥೆಗಳ ಬಗ್ಗೆ ಪರಿಹಾರದ ಚಿಂತನೆ, ಸಂರಕ್ಷಣೆ, ಸದ್ಭಾಳಕೆ ಮತ್ತು ಜಳಮಟ್ಟದ ಹೆಚ್ಚಳದ ಕಾರ್ಯಕ್ರಮ ಕ್ರಮ ರೂಪಿಸಿಕೊಂಡು ಕೆಲಸ ಮಾಡಿ ಎಂದು ಅಧಿಕಾರಿಗಳನ್ನು ಉದ್ದೇಶೀಸಿ ಶಾಸಕರು ಸೂಚನೆ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ನಾವು ಸಮಸ್ಯೆಗಳ ಹತ್ತಿರ ಹೋಗಿ ಅಗತ್ಯ ಪರಿಹಾರ ಮತ್ತು ಸ್ಪಂದನೆ ಮಾಡಬೇಕು ಜಲ ಸಂರಕ್ಷಣೆ, ಸದ್ಭಾಳಕೆ ಸರ್ವ ಜೀವ ಸಂಕುಲನ ಮತ್ತು ಪರಿಸರದ ಉಳಿಸುವ ಸಂರಕ್ಷಿಸುವ ಮುಂದಿನ ಪೀಳಿಗೆ ನಮ್ಮ ಹಿರಿಯರು ಕೊಟ್ಟಿರುವ ಜವಾಬ್ದಾರಿಯ ಅರಿವು ಮೂಡಿಸುವ ಕೆಲಸ ನಾವೆಲ್ಲರೂ, ರೈತರು ಕಾರ್ಮಿಕರು ಸಾರ್ವಜನಿಕರು ಅಧಿಕಾರಿಗಳು ಮತ್ತು ತಜ್ಞರು ಸೇರಿ ಕೊಂಡು ಕಾರ್ಯ ಮಾಡೋಣ ಎಂದು ಆಡಿ ಪ್ರತಿಭಾ ಕಾಪು ತಾಲೂಕು ತಹಸೀಲ್ದಾರ್ ಇವರು ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಹಾಕುವ ಪ್ರಕ್ರಿಯೆಗೆ ಸಂಬAಧಿಸಿದAತೆ ಸಾಧಕ ಬಾಧಕಗಳನ್ನು ಗಮನದಲ್ಲಿಟ್ಟುಕೊಂಡು ಸಣ್ಣ ನೀರಾವರಿ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿಕೊಂಡು ಕ್ರಮವಹಿಸುವಂತೆ PDO  ಗಳಿಗೆ ಸೂಚನೆ ನೀಡಲಾಯಿತು.
ನೆರೆ ಜಿಲ್ಲೆಗಳಿಗೆ ಮೇವು ಸಾಗಿಸಬಾರದು. ಈ ಕುರಿತಂತೆ ತಾಲೂಕಿನ ಗಡಿ ವ್ಯಾಪ್ತಿಯ ಚೆಕ್ ಪೋಸ್ಟ್ ಗಳಲ್ಲಿ ಎಚ್ಚರಿಕೆ ವಹಿಸಬೇಕು. ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜೇಮ್ಸ್ ರವರು ಮಾತನಾಡಿ ಕುಡಿಯುವ ನೀರು ಸರಬರಾಜು ಮಾಡಲು ಪರ್ಯಾಯ ವ್ಯವಸ್ಥೆ ಸಿದ್ಧವಾಗಿಟ್ಟುಕೊಂಡಿರಲು ಸೂಚನೆ ನೀಡಿದರು.

ಇತ್ತೀಚೆಗೆ ಮಳೆ ಕೊರತೆ ಉಂಟಾಗಿದೆ. ಇದರಿಂದ ಅಂತರ್‌ಜಲ ಮಟ್ಟ ಹಾಗೂ ಜಲಾಶಯಗಳ ನೀರಿನ ಮಟ್ಟ ಕಡಿಮೆಯಾಗಿದ್ದು, ಮುಂಬರುವ ದಿನಗಳಲ್ಲಿ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆಗಳಿವೆ. ಈ ಬಗ್ಗೆ ಈಗಿನಿಂದಲೇ ಎಚ್ಚರ ವಹಿಸಿ
ಕೃಷಿ, ತೋಟಗಾರಿಕೆ ಇಲಾಖೆಗೆ ಸೇರಿದ ಫಾರ್ಮ್ಗಳಲ್ಲಿ ಮೇವುಗಳನ್ನು ಬೆಳೆಯಲು ಕ್ರಮ ವಹಿಸಬೇಕು. ಹಡಿಲು ಭೂಮಿಗಳಲ್ಲೂ ಮೇವು ಬೆಳೆಯಲು ರೈತರಿಗೆ ಅಥವಾ ಸಂಜೀವಿನಿ ಸಂಘದ ಸದಸ್ಯರುಗಳಿಗೆ ಪ್ರೋತ್ಸಾಹಿಸಬೇಕು ಎಂದು ಮಾನ್ಯ ಶಾಸಕರು ಸೂಚನೆಗಳನ್ನು ನೀಡಿದರು.

ಕಾಪು ತಾಲ್ಲೂಕು ತಹಶಿಲ್ದಾರ್ ಡಾ. ಪ್ರತಿಭಾ ಆರ್ . ಕಾಪು ತಾ.ಪಂ ಇಒ ಜೇಮ್ಸ್, ತೋಟಗಾರಿಕೆ ಇಲಾಖೆ ಅಧಿಕಾರಿ ಹೇಮಂತ್ ಕುಮಾರ್, ಪುರಸಭೆ ಮುಖ್ಯಾಧಿಕಾರಿ ಸಂತೋಷ್ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಂಜಿನಿಯರ್, ಪಶುಸಂಗೋಪನೆ ಇಲಾಖೆ ಅಧಿಕಾರಿ ಅರುಣ್ ಹೆಗಡೆ ಉಪತಹಶೀಲ್ದಾರರಾದ ರವಿಕಿರಣ್ ಗ್ರಾಮ ಆಡಳಿತಾಧಿಕಾರಿ ದೀಕ್ಷಿತಾ ಹಾಗೂ ಎಲ್ಲಾ ಗ್ರಾಮ ಪಂಚಾಯತಿ PDO ಗಳು ಉಪಸ್ಥಿತರಿದ್ದರು.