ಬಂಟ್ವಾಳ: ಬಿ.ಸಿ.ರೋಡಿನ ಕೈಕುಂಜೆ ರೈಲ್ವೆ ನಿಲ್ದಾಣದ ಸಮೀಪ ಸಂಜೆ ವೇಳೆ ನಿಲ್ಲಿಸಿದ್ದ ಆಟೋರಿಕ್ಷಾ ಬೆಳಗ್ಗೆ ನೋಡುವಾಗ ಕಾಣೆಯಾದ ಘಟನೆ ನಡೆದಿದೆ.
ಅಜಿಲಮೊಗರು ನಿವಾಸಿ ದೇಜಪ್ಪ ಯಾನೆ ಸತೀಶ್ ಎಂಬವರಿಗೆ ಸೇರಿದ ಆಟೊ ಇದಾಗಿದ್ದು, ಅನ್ಯಕಾರ್ಯನಿಮಿತ್ತ ಮತ್ತೊಂದು ವಾಹನದಲ್ಲಿ ತೆರಳಿದ್ದು,ಮುಂಜಾನೆ ಸುಮಾರು 3.30ರ ಸಮಯದಲ್ಲಿ ಬಂದು ನೋಡಿದಾಗ ಆಟೋರಿಕ್ಷಾ ಇಟ್ಟ ಜಾಗದಲ್ಲಿ ಕಾಣಿಸಲಿಲ್ಲ. ಎನ್ನಲಾಗಿದೆ. ಈ ಕುರಿತು ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಬಂಟ್ವಾಳ ನಗರ ಪೊಲೀಸರು ರಿಕ್ಷಾ ಪತ್ತೆಗಾಗಿ ಕಾರ್ಯಾಚರಣಾ ಮುಂದುವರಿಸಿದ್ದಾರೆ.
ಅಪರಿಚಿತ ವ್ಯಕ್ತಿಗಳು ಇಬ್ಬರು ಆರಂಭದಲ್ಲಿ ರಿಕ್ಷಾವನ್ನು ಹಿಂಬದಿಗೆ ದೂಡುತ್ತಾರೆ, ಬಳಿಕ ಯಾವುದೋ ಸಾಧನ ಬಳಸಿ ರಿಕ್ಷಾವನ್ನು. ಕಳವು ಮಾಡಿ ಕೊಂಡುಹೋಗುವ ದೃಶ್ಯ ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾಗಿದೆ.