ಸುಳ್ಯ ನೆಹರೂ ಮೆಮೋರಿಯಲ್ ಕಾಲೇಜಿನ 1994-97 ಬ್ಯಾಚ್ ನ ಕಲಾ ಪದವಿ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ಕಾಲೇಜು ದೃಶ್ಯ ಶ್ರವಣ ಕಿರು ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು. ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿಗಳು ಅವರ ಎಲ್ಲಾ ಶಿಕ್ಷಕರನ್ನು ಆಹ್ವಾನಿಸಿ ಸನ್ಮಾನಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ನೆಹರೂ ಮೆಮೋರಿಯಲ್ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರುಗಳಾದ ಪ್ರೊ. ದಾಮೋದರ ಕೆ, ಪ್ರೊ. ಜವರೆ ಗೌಡ, ಡಾ. ಪ್ರಭಾಕರ್ ಶಿಶಿಲ, ಡಾ. ಯಶೋದಾ ರಾಮಚಂದ್ರ, ನಿವೃತ್ತರಾದ ಪ್ರೊ. ಹೊನ್ನಮ್ಮ, ಡಾ. ಚಂದ್ರಶೇಖರ್ ದಾಮ್ಲೆ, ದೈಹಿಕ ಶಿಕ್ಷಕರಾದ ರಾಧಾಕೃಷ್ಣ ಮಾಣಿಬೆಟ್ಟು, ಲೈಬ್ರೆರಿ ಸಹಾಯಕರಾಗಿದ್ದ ಉಮಾವತಿ, ಉಪನ್ಯಾಸಕರಾಗಿರುವ ಕಾಲೇಜು ವಿದ್ಯಾರ್ಥಿ ಕ್ಷೇಮಾಧಿಕಾರಿ ಪ್ರೊ. ರತ್ನಾವತಿ, ಕನ್ನಡ ವಿಭಾಗ ಮುಖ್ಯಸ್ಥರಾದ ಪ್ರೊ. ಸಂಜೀವ ಕುತ್ಪಾಜೆ ಉಪಸ್ಥಿತರಿದ್ದು ಮಾತನಾಡಿ ಹಿರಿಯ ವಿದ್ಯಾರ್ಥಿಗಳನ್ನು ಹಾರೈಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ 27 ವರ್ಷಗಳ ಹಿಂದೆ 1994-97 ಸಾಲಿನ ಶೈಕ್ಷಣಿಕ ಅವಧಿಯಲ್ಲಿ ಕಲಾ ಪದವಿಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಜೊತೆ ಸೇರಿ ಮತ್ತೆ ತಮ್ಮ ಕಾಲೇಜು ಜೀವನದ ನೆನಪುಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಕಾಲೇಜಿನಲ್ಲಿ ಪ್ರಸ್ತುತ ಉಪನ್ಯಾಸಕರಾಗಿರುವ ಐಕ್ಯೂಎಸಿ ಸಂಯೋಜಕಿ ಡಾ. ಮಮತಾ ಕೆ, ಗಣಿತಶಾಸ್ತ್ರ ವಿಭಾಗ ಮುಖ್ಯಸ್ಥೆ ಪ್ರೊ. ಉಷಾ ಎಂ.ಪಿ, ಇಂಗ್ಲಿಷ್ ವಿಭಾಗ ಮುಖ್ಯಸ್ಥೆ ಪ್ರೊ. ಭವ್ಯ ಪಿ.ಎಮ್, ಕನ್ನಡ ಉಪನ್ಯಾಸಕಿ ಡಾ. ಅನುರಾಧ ಕೆ ಪಿ, ದೈಹಿಕ ಶಿಕ್ಷಣ ನಿರ್ದೇಶಕರಾದ ಲೆ. ಸೀತಾರಾಮ ಎಂ ಡಿ, ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಾಪಕ ಪ್ರತಿನಿಧಿ ಸಸ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಕುಲದೀಪ್ ಪಿ ಪಿ ಉಪಸ್ಥಿತರಿದ್ದರು.
ಹಿರಿಯ ವಿದ್ಯಾರ್ಥಿಗಳಾದ ಅಡ್ವೋಕೇಟ್ ವಿಶ್ವನಾಥ್ ಮೈಸೂರ್ ಸ್ವಾಗತಿಸಿ, ಸಜ್ಜನ ಪ್ರತಿಷ್ಟಾನದ ಸ್ಥಾಪಕ ಡಾ. ಉಮ್ಮರ್ ಬೀಜದಕಟ್ಟೆ ಪ್ರಾಸ್ತಾವಿಕ ಮಾತುಗಳನ್ನಾಡಿ, ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿ ಪ್ರವೀಣ್ ಕುಂಟ್ಯಾಣ ವಂದಿಸಿದರು. ಪುಟ್ಟಣ್ಣ ಮುಳಿಯ ಅಗಲಿದ ವಿದ್ಯಾರ್ಥಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಮೂಡಬಿದಿರೆ ಜೈನ್ ಕಾಲೇಜಿನ ಪ್ರಾಂಶುಪಾಲರಾಗಿರುವ ಡಾ. ಪ್ರಭಾತ್ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಸಿಬ್ಬಂದಿಯವರಾದ ಶಿವಾನಂದ, ಭಾಗ್ಯನಂದ, ದಮಯಂತಿ ಮತ್ತು ಗೀತಾ ಸಹಕರಿಸಿದರು.