Recent Posts

Sunday, January 19, 2025
ಉಡುಪಿಸುದ್ದಿ

ಕಾಪು ಬೀಚ್ ಸಮುದ್ರ ಬದಿಯಲ್ಲಿ ಫೆ.20ರಂದು ಶ್ರೀ ಶ್ರೀ ಶಂಕರ್ ಗುರೂಜಿ ಆಶೀರ್ವಾದದಲ್ಲಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮುತುವರ್ಜಿಯಲ್ಲಿ ಆನಂದ ಲಹರಿ ಕಾರ್ಯಕ್ರಮ – ಕಹಳೆ ನ್ಯೂಸ್

ಕಾಪು ಬೀಚ್ ಸಮುದ್ರ ಬದಿಯಲ್ಲಿ ಫೆ.20ರಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮುತುವರ್ಜಿಯಲ್ಲಿ ಆನಂದ ಲಹರಿ ಕಾರ್ಯಕ್ರಮ ನಡೆಯಲಿದೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಪಡೆದು WHO (World Health Organization) ನಿಂದ ಮಾನ್ಯತೆಯನ್ನು ಪಡೆದಿರುವ, ಸಂಪೂರ್ಣ ವ್ಯಕ್ತಿತ್ವವನ್ನು ವಿಕಸನಗೊಳಿಸುವಲ್ಲಿ ಸಫಲವಾಗಿರುವ ಜೀವನ ಕಲೆ ಹಾಗೂ ಸುದರ್ಶನ ಕ್ರೀಯಾಯೋಗದ ಸ್ಥಾಪಕಾಚಾರ್ಯ, ವಿಶ್ವವಿಖ್ಯಾತರಾದ ಪದ್ಮವಿಭೂಷಣ ಪರಮಪೂಜ್ಯ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರು ಪ್ರಥಮ ಬಾರಿಗೆ ಉಡುಪಿ ಜಿಲ್ಲೆಯ ಕಾಪುವಿನಲ್ಲಿ ನಡೆಯಲಿರುವ ದಿವ್ಯ ಸತ್ಸಂಗ ಆನಂದ ಲಹರಿ (ಗಾನ, ಜ್ಞಾನ ಹಾಗೂ ಧ್ಯಾನಗಳ ಸುಮಧುರ ಸಂಜೆ) ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇಡೀ ವಿಶ್ವವೇ ಒಂದು ಕುಟುಂಬ- ‘ವಸುಧೈವ ಕುಟುಂಬಕಂ” ಎನ್ನುವ ಮೂಲ ಆದರ್ಶದ ಮೇರೆಗೆ ಇಡೀ ವಿಶ್ವದ ಎಲ್ಲಾ ಸಮಾಜ ಮತ್ತು ಸಮುದಾಯಗಳನ್ನು ಒಟ್ಟು ಸೇರಿಸಿ ಮಾಡಿದ ಅನೇಕ ಆಚರಣೆಗಳಿವೆ . ಎμÉ್ಟೂೀ ಸಂತಪುರುಷರು, ಸಾಧಿಗಳು,ಧಾರ್ಮಿಕ ಮುಖಂಡರುಗಳು, ರಾಜಕಾರಣಿಗಳು, ಹಾಗೂ ವಿಶ್ವದ ವಿವಿಧ ಕಲಾವಿದರನ್ನು ಒಗ್ಗೂಡಿಸಿ ವಿವಿಧತೆಯಲ್ಲಿ ಏಕತೆಯನ್ನು ಸಾರಿದ ಹಾಗೂ ಜಾಗತಿಕ ಶಾಂತಿ ಮತ್ತು ಸಾಮರಸ್ಯದ ಜೀವನವನ್ನು ನಡೆಸುವ ಸಂದೇಶವನ್ನು ಪೂಜ್ಯ ಗುರೂಜಿ ಈ ಉತ್ಸವಗಳ ಮೂಲಕ ಇಡೀ ವಿಶ್ವದ ಜನತೆಗೆ ನೀಡಿದ್ದಾರೆ. ಇತ್ತೀಚಿಗೆ ವಾಷಿಂಗ್ಟನ್ ಡಿ ಸಿ ಯಲ್ಲಿ ಶ್ವೇತ ಭವನದ ಎದುರಿನ ಮೈದಾನದಲ್ಲಿ ನಡೆದ ನಾಲ್ಕನೇಯ ಅಂತರಾಷ್ಟ್ರೀಯ ಕಲಾ ಸಾಂಸ್ಕøತಿಕ ಉತ್ಸವದ ಐತಿಹಾಸಿಕ ಘಟನೆಯು, ಪೂಜ್ಯರ ಪ್ರಖ್ಯಾತಿಗೆ ಇನ್ನೊಂದು ಅದ್ಭುತವಾದ ಮೈಲಿಗಲ್ಲಾಗಿದೆ. ಇಂತಹ ಸದು ಉದ್ದೇಶದ ಈ ಸತ್ಕರ್ಮ ಕಾರ್ಯಕ್ರಮದ ಲಾಭ ಎಲ್ಲರೂ ಪಡೆದು ಕೊಳ್ಳಿ ಎಂದು ಶಾಸಕರು ಅಭಿಪ್ರಾಯ ಪಟ್ಟರು.

ಜಾಹೀರಾತು
ಜಾಹೀರಾತು
ಜಾಹೀರಾತು