Recent Posts

Monday, January 20, 2025
ಬಂಟ್ವಾಳಸುದ್ದಿ

ಅಮ್ಟೂರು ಶ್ರೀಕೃಷ್ಣ ಮಂದಿರದಲ್ಲಿ ನ್ಯೂ ವಿಷನ್ ಜನರೇಷನ್ ಪ್ರೋಗ್ರಾಮ್ ಕಾರ್ಯಕ್ರಮದಡಿಯಲ್ಲಿ ನಡೆದ ಕಣ್ಣಿನ ಉಚಿತ ತಪಾಸಣಾ ಶಿಬಿರ – ಕಹಳೆ ನ್ಯೂಸ್

ಶ್ರೀ ಕೃಷ್ಣ ಮಂದಿರ ಅಮ್ಟೂರು ಇದರ ಪ್ರಾಯೋಜಕತ್ವದಲ್ಲಿ ನ್ಯೂ ವಿಷನ್ ಜನರೇಷನ್ ಪ್ರೋಗ್ರಾಮ್ ಕಾರ್ಯಕ್ರಮದಡಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ (ಅಂಧತ್ವ ವಿಭಾಗ) ಜಂಟಿ ಆಶ್ರಯದಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರವು ಇಂದು ಅಮ್ಟೂರು ಶ್ರೀಕೃಷ್ಣ ಮಂದಿರದಲ್ಲಿ ನಡೆಯಿತು.

ಮಾರ್ನಬೈಲ್ ನ ಸುರಭಿ ಬಾರ್ & ರೆಸ್ಟೋರೆಂಟ್ ನ ಮಾಲಕರಾದ ರತ್ನಾಕರ ಪೂಜಾರಿ ಪಡೀಲ್ ಇವರ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮವನ್ನು ನಿವೃತ್ತ ಪಿಡಬ್ಯುಡಿ ಇಂಜಿನಿಯರ್ ಶ್ರೀನಿವಾಸ ಪಾದೆ ದೀಪ ಬೆಳಗಿಸಿ, ಚಾಲನೆ ನೀಡಿದರು. ಆರೋಗ್ಯ ಅಧಿಕಾರಿ ರಾಮಚಂದ್ರ ಶಿಬಿರ ಉಪಯೋಗಗಳ ಬಗ್ಗೆ ಮಾಹಿತಿ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಕಾರ್ಯಕ್ರಮದಲ್ಲಿ ಶ್ರೀಕೃಷ್ಣ ಮಂದಿರದ ಅಧ್ಯಕ್ಷ ರಮೇಶ್ ಕರಿಂಗಾಣ, ಅರ್ಚಕ ಮೋಹನ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಕುಶಾಲಪ್ಪ ಅಮ್ಟೂರು, ಕೋಶಾಧಿಕಾರಿ, ಜಿತೇಶ್ ಶೆಟ್ಟಿ ಬಾಳಿಕೆ, ಉಪಾಧ್ಯಕ್ಷರುಗಳಾದ ಶರತ್ ಕುಮಾರ್ ಅಮ್ಟೂರು, ಕೌಶಲ್ ಶೆಟ್ಟಿ ಬಾಳಿಕೆ, ಮಹಾಬಲ ಕುಲಾಲ್ ಕಾರ್ಯದರ್ಶಿ ರೋಹಿತ್ ಪ್ರಮುಖರಾದ ದಿವಾಕರ ಪಡೀಲ್, ಗೋಪಾಲ ಪೂಜಾರಿ, ಸುರೇಂದ್ರ ಪೊಯ್ಯಕಂಡ, ಸತೀಶ್ ಪೊಯ್ಯಕಂಡ, ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗ, ಮತ್ತಿತ್ತರರು ಉಪಸ್ಥಿತರಿದ್ದರು.