ಬೆಂಗಳೂರು: ಕರಾವಳಿ ಬೆಡಗಿ ದೀಪಿಕಾ ಪಡುಕೋಣೆ ರಣ್‌ವೀರ್ ಜೊತೆಗೆ ಮದುವೆಯಾಗಲು ಒಪ್ಪಿರೋದು ಗೊತ್ತೆ ಇದೆ. ಆದ್ರೆ ಮದ್ವೆ ಯಾವಾಗ ಅಂತ ಹೇಳಿಕೊಂಡಿರಲಿಲ್ಲ. ಆದರೆ ಈಗ ಡಿಪ್ಪಿ ಮದುವೆ ಡೇಟ್‌ನ್ನು ಬಹಿರಂಗಗೊಳಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟ್ವಿಟ್ ಮಾಡಿರುವ ದೀಪಿಕಾ ನಾವಿಬ್ಬರು ಇಬ್ಬರೂ ವಿವಾಹವಾಗುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ಉಭಯ ಕುಟುಂಬಗಳ ಆಶೀರ್ವಾದದೊಂದಿಗೆ ನ. 14 ಮತ್ತು 15ರಂದು ವಿವಾಹವಾಗುತ್ತಿದ್ದೇವೆ. ನಮ್ಮ ಪ್ರೀತಿಯ ಪ್ರಯಾಣದಲ್ಲಿ ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ ಎಂದು ಬಯಸುತ್ತೇವೆ. ಕಳೆದ ಹಲವು ವರ್ಷಗಳಿಂದ ನಮ್ಮ ಮೇಲೆ ನೀವು ತೋರಿಸುತ್ತಿರುವ ಪ್ರೀತಿ, ಕಾಳಜಿಗೆ ಆಭಾರಿಯಾಗಿದ್ದೇವೆ ಎಂದು ದೀಪಿಕಾ ಪಡುಕೋಣೆ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.