Recent Posts

Sunday, January 19, 2025
ಕ್ರೈಮ್ದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರು ನೆಹರೂ ನಗರದ ಕೋಕೋ ಗುರು ಅಡುಗೆಮನೆಯಲ್ಲಿ ಕಳವು ಪ್ರಕರಣ : 24 ಗಂಟೆಯ ಒಳಗಡೆ ಆರೋಪಿಯ ಹೆಡೆಮುರಿಕಟ್ಟಿದ ಪೋಲೀಸ್ ಇಲಾಖೆ – ಕಹಳೆ ನ್ಯೂಸ್

ಪುತ್ತೂರು : ನೆಹರೂನಗರದಲ್ಲಿ ಕಾರ್ಯಾಚರಿಸುತ್ತಿರುವ ಕೋಕೋ ಗುರು ಅಡುಗೆಮನೆಯಲ್ಲಿ ವೈಟರ್ ಆಗಿ ಕೆಲಸ ಮಾಡುತ್ತಿದ್ದ ಗಣೇಶ್ ಎಂಬಾತ 69,000 ರೂ. ಮತ್ತು ಮೊಬೈಲ್ ನೊಂದಿಗೆ ಪರಾರಿಯಾದ ಬಗ್ಗೆ ವರದಿಯಾಗಿದೆ.

ಕ್ಯಾಶಿಯರ್ ಅನ್ನು ಊಟ ಮಾಡಿಬರುವಂತೆ ತಿಳಿಸಿದ ಸಪ್ಲೈಯರ್ ತಾನು ಕ್ಯಾಶ್ ಕೌಂಟರ್ ಅನ್ನು ನೋಡಿಕೊಳ್ಳುವುದಾಗಿ ಹೇಳಿ ಕ್ಯಾಶಿಯರ್ ಅನ್ನು ಊಟಕ್ಕೆ ಕಳುಹಿಸಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕ್ಯಾಶಿಯರ್ ಊಟಕ್ಕೆ ತೆರಳುತ್ತಿದ್ದಂತೆ ಕ್ಯಾಶ್ ಡ್ರಯಾರ್ ನಲ್ಲಿದ್ದ ರೂ. 69,000 ಹಾಗೂ ಮೊಬೈಲ್‌ ಎತ್ತಿಕೊಂಡು ಪರಾರಿಯಾಗಿದ್ದಾನೆ. ಈ ಕುರಿತು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿತ್ತು. ಸದ್ಯ. 24 ಗಂಟೆಯ ಒಳಗೆ ಆರೋಪಿಯನ್ನು ಹೆಡೆಮುರಿಕಟ್ಟುವಲ್ಲಿ ಪುತ್ತೂರು ಪೋಲೀಸರು ಯಶಸ್ವಿಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಪ್ಲೈಯರ್ ನ ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.