Recent Posts

Sunday, January 19, 2025
ಸುದ್ದಿ

ಇಚ್ಲಂಪಾಡಿ: ಅಪರಿಚಿತ ವಾಹನ ಡಿಕ್ಕಿ-ಬೈಕ್ ಸವಾರನಿಗೆ ಗಂಭೀರ ಗಾಯ – ಕಹಳೆ ನ್ಯೂಸ್

ನೆಲ್ಯಾಡಿ: ಅಪರಿಚಿತ ವಾಹನವೊಂದು ಬೈಕ್‌ಗೆ ಡಿಕ್ಕಿಯಾಗಿ ಬೈಕ್ ಸವಾರ ಗಾಯಗೊಂಡಿರುವ ಘಟನೆ ಇಚ್ಲಂಪಾಡಿ ಗ್ರಾಮದ ಪೆರಿಯಶಾಂತಿ ಬಳಿಯ ಅಡ್ಕರಜಾಲು ಎಂಬಲ್ಲಿ ಫೆ.10ರಂದು ಮಧ್ಯಾಹ್ನ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು


ಜೋಯಿ ಎಮ್.ಜೆ.ಎಂಬವರು ಚಲಾಯಿಸುತ್ತಿದ್ದ ಬೈಕ್(ಕೆಎ21 ಎಡಿ2384)ಗೆ ಇಚ್ಲಂಪಾಡಿ ಗ್ರಾಮದ ಪೆರಿಯಶಾಂತಿ ಅಡ್ಕರಜಾಲು ಎಂಬಲ್ಲಿ ಯಾವುದೋ ವಾಹನವೊಂದು ಡಿಕ್ಕಿಯಾಗಿ ಪರಾರಿಯಾಗಿದೆ. ಘಟನೆಯಲ್ಲಿ ಬೈಕ್ ಸವಾರ ಜೋಯಿ ಎಮ್.ಜೆ.ಅವರು ಗಾಯಗೊಂಡಿದ್ದು ಮಂಗಳೂರಿನ ಎ.ಜೆ.ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಕುರಿತು ರೆಖ್ಯ ನಿವಾಸಿ ಪ್ರಜ್ವಲ್ ಪಿ.ಜೆ.ಎಂಬವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ 20/2024 ಕಲಂ: 279, 338 ಭಾ.ದಂ.ಸA. ಮತ್ತು 134 (ಎ&ಬಿ) ಐಎಂವಿ ಕಾಯ್ದೆಯಂತೆ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು