Sunday, January 19, 2025
ಕ್ರೀಡೆದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಿ.ಸಿ.ರೋಡಿನ ಚಂಡಿಕಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೆಯ ಪ್ರಯುಕ್ತ ನಡೆದ ಕ್ರೀಡೋತ್ಸವ : ಕ್ರೀಡಾ ಕೂಟದಿಂದ ಸಂಘಟನೆ ಸಾಧ್ಯ : ಲೋಕನಾಥ ಶೆಟ್ಟಿ- ಕಹಳೆ ನ್ಯೂಸ್

ಬಿ.ಸಿ.ರೋಡ್ : ಕ್ರೀಡೆಯಿಂದ ಸಂಘಟನೆ ಮಾಡಲು ಸಾಧ್ಯ.ಜಾತ್ರೋತ್ಸವ ಸಂದರ್ಭ ಮೊದಲ ಬಾರಿ ಕ್ರೀಡೊತ್ಸವನ್ನು ಹಮ್ಮಿಕೊಂಡಿದ್ದು, ಗ್ರಾಮಸ್ಥರಿಂದ ಒಳ್ಳೆಯ ಸ್ಪಂದನೆ ದೊರೆತಿದೆ ಎಂದು ಚಂಡಿಕಾ ಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ಲಯನ್ ಲೋಕನಾಥ ಶೆಟ್ಟಿ ತಿಳಿಸಿದ್ದಾರೆ.

ಅವರು ಬಿ.ಸಿ.ರೋಡಿನ ಚಂಡಿಕಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೆಯ ಪ್ರಯುಕ್ತ ದೇವಸ್ಥಾನದ ಹಿಂಬದಿಯ ಕ್ರೀಡಾಂಗಣದಲ್ಲಿ ನಡೆದ ಕ್ರೀಡೋತ್ಸವವನ್ನು ಉದ್ಘಾಟಿಸಿ ಮಾತನಾಡಿ ಪುಟಾಣಿ ಮಕ್ಕಳಿಂದ ಎಲ್ಲಾ ವಯಸ್ಸಿನವರಿಗೂ ಸ್ಫರ್ಧೆ ನಡೆಯಲಿದ್ದು ಎಲ್ಲಾ ಸ್ಪರ್ಧಾಳುಗಳಿಗೆ ಶುಭವಾಗಲಿ ಎಂದು ಶುಭ ಹಾರೈಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮುಖ್ಯ ಅತಿಥಿಯಾಗಿ ಮಾಜಿ ಪುರಸಭಾ ಸದಸ್ಯ ಶ್ರೀಧರ ಮಲ್ಲಿ, ಜಯರಾಮ್ ಶೆಟ್ಟಿ, ಉದ್ಯಮಿ ದುರ್ಗಾದಾಸ್ ಶೆಣೈ, ಜಯಂತ ಶೆಟ್ಡಿ ಉಪಸ್ಥಿತರಿದ್ದರು. ಕ್ರೀಡಾಕೂಟವನ್ನು ಶಿಕ್ಷಕ ಐತಪ್ಪ ಪೂಜಾರಿ, ದೀಪಿಕಾ ಪ್ರೌಢ ಶಾಲೆಯ ದೈಹಿಕ ಶಿಕ್ಷ ಉಮೇಶ್ , ಪಾಣೆಮಂಗಳೂರು ಶಾರದಾ ಪ್ರೌಢ ಶಾಲೆಯ ದೈಹಿಕ ಶಿಕ್ಷಕ ಅಜಿತ್ ಕುಮಾರ್, ಅರತಿ ಅಮೀನ್, ಆಶಾ ಹರೀಶ್, ಶಾಲಿನಿ ಶೆಟ್ಡಿ, ಸುಜಾತ ಜಗದೀಶ್, ಆಶಾ ಪ್ರಸಾದ್ ಸಹಕರಿಸಿದ್ದರು.