Recent Posts

Sunday, January 19, 2025
ಸುದ್ದಿ

ಬಂಟ್ವಾಳ : ಲಾರಿ ಮತ್ತು ರಿಕ್ಷಾ ನಡುವೆ ಅಪಘಾತ : ರಿಕ್ಷಾ ಚಾಲಕನಿಗೆ ಗಾಯ – ಕಹಳೆ ನ್ಯೂಸ್

ಬಂಟ್ವಾಳ : ಲಾರಿ ಮತ್ತು ರಿಕ್ಷಾ ಅಪಘಾತ ನಡೆದು ರಿಕ್ಷಾ ಚಾಲಕ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಆದಿತ್ಯವಾರ ಜಕ್ರಿಬೆಟ್ಟು ಎಂಬಲ್ಲಿ ರಾತ್ರಿ ವೇಳೆ ನಡೆದಿದೆ.


ಪೊಳಲಿ, ಬೆಳಂದೂರು ನಿವಾಸಿ ರಿಕ್ಷಾ ಚಾಲಕ ಚೇತನ್ ಗಾಯಗೊಂಡ ವ್ಯಕ್ತಿ.ಚೇತನ್ ಬಡ್ಡಕಟ್ಟೆಯಿಂದ ಜಕ್ರಿಬೆಟ್ಟು ಕಡೆಗೆ ಹೋಗುತ್ತಿದ್ದ ವೇಳೆ ಬಂಟ್ವಾಳ ಜಕ್ರಿಬೆಟ್ಟು ಪಂಪ್ ಹೌಸ್ ಮುಂದೆ ಬಂಟ್ವಾಳ ಪೇಟೆಯಿಂದ ಹೆದ್ದಾರಿಗೆ ಕ್ರಾಸ್ ಮಾಡುವ ವೇಳೆ ಬೆಳ್ತಂಗಡಿ ಕಡೆಯಿಂದ ಮರದ ದಿಮ್ಮಿಗಳನ್ನು ಹೇರಿಕೊಂಡು ಬರುತ್ತಿದ್ದ ಲಾರಿಗೆ ಡಿಕ್ಕಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಡಿಕ್ಕಿಯಾದ ರಭಸಕ್ಕೆ ರಿಕ್ಷಾ ಸಂಪೂರ್ಣ ಜಖಂ ಗೊಂಡಿದೆ.ಆದರೆ ಚಾಲಕ ಚೇತನ್ ಅವರ ಕಾಲಿಗೆ ಸ್ವಲ್ಪ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಪೋಲೀಸರು ಬೇಟಿ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು