Monday, January 20, 2025
ಸುದ್ದಿ

ಕಲ್ಲಡ್ಕ : ಕ್ಷೇತ್ರದ ಮಹಿಮೆ ಎತ್ತಿ ಹಿಡಿದ ಕಟ್ಟೆಮಾರ್ ಶ್ರೀಮಂತ್ರದೇವತಾ ಸಾನಿಧ್ಯ – ಕಹಳೆ ನ್ಯೂಸ್

ಬಂಟ್ವಾಳ ತಾಲೂಕಿನ ಕಟ್ಟೆಮಾರ್ ಶ್ರೀ ಮಂತ್ರದೇವತಾ, ಸ್ವಾಮಿ ಕೊರಗಜ್ಜ, ಶ್ರೀ ಗುಳಿಗ ಸಾನಿಧ್ಯ ಕ್ಷೇತ್ರವು ತನ್ನ ಮಹಿಮೆಯನ್ನು ತೊರ್ಪಡಿಸಿದ ಅಪರೂಪದ ಘಟನೆ ಒಂದು ಸಂಭವಿಸಿದೆ.

ಫೆ.10ರಂದು ಸಾನಿಧ್ಯದಲ್ಲಿ ನಡೆದ ವಾರ್ಷಿಕ ಕೋಲೊತ್ಸವ ಸಂದರ್ಭದಲ್ಲಿ ಕ್ಷೇತ್ರದ ಭಕ್ತಿಯಾಗಿ ಆಗಮಿಸಿದ ಸುಳ್ಯ ಸಂಪಾಜೆಯ ಧನ್ಯ ಎಂಬ ಮಹಿಳೆಯ ಬ್ಯಾಗಿನಿಂದ ಸುಮಾರಿ 23 ಸಾವಿರ ರೂಪಾಯಿ ಹಣ ಕಳವಾಗಿತ್ತು. ಈ ಬಗ್ಗೆ ನೊಂದ ಮಹಿಳೆ ಶ್ರೀ ಮಂತ್ರ ದೇವತೆ ಹಾಗೂ ಸ್ವಾಮಿ ಕೊರಗಜ್ಜನ ಕೋಲೊತ್ಸವದಲ್ಲಿ ದೈವದ ಮುಂದೆ ಹರಕೆ ಮಾಡಿದ್ದರು. ದೈವವು ಕಳೆದುಕೊಂಡದ್ದನ್ನು ಆದಷ್ಟು ಬೇಗ ಒದಗಿಸುವುದಾಗಿ ಅಭಯ ನೀಡಿದ್ದು ಕೇವಲ ಒಂದೇ ದಿನದಲ್ಲಿ ತನ್ನ ಮಹಿಮೆಯನ್ನು ತೋರಿಸಿದೆ.ಇವತ್ತು ಬೆಳಿಗ್ಗೆ ಕ್ಷೇತ್ರದಲ್ಲಿ ಸಂಕ್ರಮಣ ನಿಮಿತ್ತ ಪೂಜಾ ಕಾರ್ಯಕ್ರಮ ನಡೆಯುತ್ತಿರುವಾಗ ಕಾಣಿಕೆ ಡಬ್ಬಿಯ ಅಡಿಯಲ್ಲಿ 23000 ರುಪಾಯ ಕಟ್ಟು ಒಂದನ್ನು ನೂಳಿನಲ್ಲಿ ಕಟ್ಟಿ ಇಟ್ಟದ್ದು ಗಮನಕ್ಕೆ ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು